ಒಂದೆರಡು ದಿನ ಭಾರೀ ಮಳೆ ಸಾಧ್ಯತೆ
Team Udayavani, Oct 13, 2019, 5:17 AM IST
ಸಾಂದರ್ಭಿಕ ಚಿತ್ರ
ಮಣಿಪಾಲ: ಕೆಲವು ದಿನಗಳಿಂದ ಕರಾವಳಿಯಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗುತ್ತಿದ್ದು, ಇನ್ನೂ ಕೆಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ.
ಹವಾಮಾನ ಇಲಾಖೆಯು ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳ ನಾಡು ಮತ್ತು ಕೇರಳಗಳಲ್ಲಿ ರವಿವಾರ ಯೆಲ್ಲೊ ಅಲರ್ಟ್ ಘೋಷಿಸಿದ್ದು, ಭಾರೀ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯಲ್ಲಿ ಸೋಮವಾರ, ದ. ಒಳನಾಡಿನಲ್ಲಿ ಬುಧವಾರ ಭಾರೀ ಮಳೆಯಾಗುವ ಸಂಭಾವ್ಯತೆ ಇದೆ.
ಶನಿವಾರ ಮಂಗಳೂರಿನಲ್ಲಿ 33.9 ಡಿಗ್ರಿ ಸೆ. ಗರಿಷ್ಠ ಉಷ್ಣಾಂಶ ದಾಖಲಾಗಿದ್ದು, ಇದು ವಾಡಿಕೆಗಿಂತ 4 ಡಿಗ್ರಿ ಸೆ. ಹೆಚ್ಚಳವಾಗಿದೆ. ಕನಿಷ್ಠ ಉಷ್ಣಾಂಶ 23.9 ಡಿಗ್ರಿ ಸೆ. ದಾಖಲಾಗಿತ್ತು.
ಹೆಚ್ಚಿದ ಸಿಡಿಲಬ್ಬರ
ಶುಕ್ರವಾರ ಕರಾವಳಿಯ ವಿವಿಧೆಡೆ ಮಳೆಯ ಜತೆಗೆ ಸಿಡಿಲಬ್ಬರವೂ ಜೋರಾಗಿತ್ತು. ಕುಂದಾಪುರದ ಉಳ್ಳೂರು -74 ಗ್ರಾ.ಪಂ. ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಸಿಡಿಲು ಬಡಿದು ಮನೆಗಳಿಗೆ ಹಾನಿಯಾಗಿದೆ. ಶನಿವಾರ ರಾತ್ರಿ ಕಾರ್ಕಳ, ಶಿರ್ವ, ಸಿದ್ದಾಪುರ ಪರಿಸರ, ಮಣಿಪಾಲ, ಸುರತ್ಕಲ್, ವೇಣೂರು, ತೆಕ್ಕಟ್ಟೆ ಪರಿಸರಗಳಲ್ಲಿ ಮಿಂಚು, ಸಿಡಿಲು ಸಹಿತ ಮಳೆಯಾಗಿದೆ. ಮಿಂಚು-ಸಿಡಿಲಿನಿಂದಾಗಿ ಅಲ್ಲಲ್ಲಿ ವಿದ್ಯುತ್ ವ್ಯತ್ಯಯವಾಗಿತ್ತು. ಸುಳ್ಯ ತಾಲೂಕಿನ ಗುತ್ತಿಗಾರು ಮತ್ತು ಸುತ್ತಮುತ್ತ ರಾತ್ರಿ ಎಂಟರ ಸುಮಾರಿಗೆ 2 ತಾಸಿಗೂ ಹೆಚ್ಚು ಕಾಲ ಸಿಡಿಲು ಸಹಿತ ಧಾರಾಕಾರ ಮಳೆಯಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.