ಚತುಷ್ಪಥ ಅವಾಂತರ: ಪಡುಬಿದ್ರಿ ಪೇಟೆ ಜಲಾವೃತ
Team Udayavani, May 30, 2018, 11:49 AM IST
ಪಡುಬಿದ್ರಿ: ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥದ ಅರೆಬರೆ ಕಾಮಗಾರಿಯಿಂದಾಗಿ ಮಳೆ ನೀರು ಹರಿದುಹೋಗಲು ಸಾಧ್ಯವಾಗದೇ ಪಡುಬಿದ್ರಿ ಪೇಟೆ ಜಲಾವೃತವಾಯಿತು. ಕಾರ್ಕಳ ರಸ್ತೆಯ ಕೆಲವು ವ್ಯವಹಾರ ಮಳಿಗೆಗಳಿಗೆ ನೀರು ನುಗ್ಗಿತು.
ಪಡುಬಿದ್ರಿ ಪೇಟೆ ಸಹಿತ ಇಕ್ಕೆಲಗಳ ಸುಮಾರು 3 ಕಿ.ಮೀ. ವ್ಯಾಪ್ತಿಯ ಹೆದ್ದಾರಿ ಸಮೀಪದ ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿದೆ.
ಎರ್ಮಾಳು, ಉಚ್ಚಿಲ, ಪಲಿಮಾರು, ಹೆಜಮಾಡಿ ಗಳಲ್ಲೂ ತಗ್ಗು ಪ್ರದೇಶಗಳಲ್ಲಿ ನೆರೆನೀರು ನಿಂತಿದೆ. ಪಡುಹಿತ್ಲು ಸೇಸಿ ಪಂಬದ ಅವರ ಮನೆಯೊಳಕ್ಕೆ ನೀರು ಸೇರಿದ್ದು ಅವರನ್ನು ಸಂಬಂಧಿಕರ ಮನೆಗೆ ವರ್ಗಾಯಿಸಲಾಗಿದೆ. ನಡಿಪಟ್ಣದ ಮುಟ್ಟಳಿವೆಯಲ್ಲಿ ಸೇತುವೆ ನಿರ್ಮಾಣ ಕಾಮಗಾರಿ ಈ ನೆರೆ ಹಾವಳಿಗೆ ಕಾರಣ ಎನ್ನಲಾಗಿದೆ. ತಹಶೀಲ್ದಾರರು ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ಪಡುಬಿದ್ರಿ ಗ್ರಾಮ ಲೆಕ್ಕಿಗ ಶ್ಯಾಮ್‌ಸುಂದರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
Sandalwood: ಮುಹೂರ್ತದಲ್ಲಿ ‘ದಿ ಟಾಸ್ಕ್’
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.