ಕಾಪು ಸುತ್ತಲಿನ ರಾ.ಹೆ. 66ರಲ್ಲೇ ಹರಿಯುತ್ತಿದೆ ಮಳೆ ನೀರು
Team Udayavani, May 31, 2018, 6:15 AM IST
ವಿಶೇಷ ವರದಿ- ಕಾಪು : ಹಲವು ವರ್ಷಗಳಿಂದ ಕುಂಟುತ್ತಾ ಸಾಗಿ ಬಂದ ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಯೋಜನೆಯ ಕಾಮಗಾರಿ ಮುಕ್ತಾಯದ ಹಂತವನ್ನು ತಲುಪಿದೆ. ಆದರೆ ಹೆದ್ದಾರಿ ಕಾಮಗಾರಿಯಿಂದಾಗಿ ಉದ್ಭವಿಸಿದ್ದ ಚರಂಡಿಯ ಸಮಸ್ಯೆ ಮಾತ್ರಾ ಇನ್ನೂ ಜೀವಂತವಾಗಿಯೇ ಉಳಿದಿದೆ. ಇದರಿಂದ ಸುಗಮ ಸಂಚಾರ ದುಸ್ತರವಾಗಿದೆ.
ಕಾಪು ಪರಿಸರದಲ್ಲಿ ಹೆದ್ದಾರಿ ಕಾಮಗಾರಿ ಪೂರ್ಣಗೊಂಡಿದ್ದರೂ, ಮಳೆ ನೀರು ಹರಿದು ಹೋಗಲು ಮಾತ್ರಾ ಇನ್ನೂ ಚರಂಡಿ ನಿರ್ಮಾಣವಾಗಿಲ್ಲ. ಕಾಪು ಪೇಟೆಗೆ ತಾಗಿಕೊಂಡಿರುವ ಸರ್ವೀಸ್ ರಸ್ತೆಯನ್ನು ಹೊರತು ಪಡಿಸಿದರೆ ಉಳಿದೆಲ್ಲೆಡೆ ಚರಂಡಿಯ ಕೊರತೆ ಎದ್ದು ಕಾಣುತ್ತಿದೆ.
ಹೆದ್ದಾರಿಯುದ್ದಕ್ಕೂ ನಿರಂತರ ತೊಂದರೆ
ಕೊಪ್ಪಲಂಗಡಿ, ಮೂಳೂರು, ಉಚ್ಚಿಲ, ಎರ್ಮಾಳು, ಉಳಿಯಾರಗೋಳಿ, ಪಾಂಗಾಳ, ಕಟಪಾಡಿ ಸಹಿತ ಹೆಚ್ಚಿನ ಕಡೆಗಳಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ವ್ಯವಸ್ಥೆ ಮಾಡಿ ಕೊಡುವ ಬಗ್ಗೆ ಚಿಂತನೆ ನಡೆಸದ ಹೆದ್ದಾರಿ ಪ್ರಾಧಿಕಾರ ಮತ್ತು ಹೆದ್ದಾರಿ ಕಾಮಗಾರಿಯ ಗುತ್ತಿಗೆದಾರರುರಸ್ತೆಯಲ್ಲೇ ಮಳೆ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.
ತಗ್ಗು ಪ್ರದೇಶಗಳತ್ತ ಕೆಸರು ನೀರು
ಚರಂಡಿಯಿಲ್ಲದೇ ರಸ್ತೆ ಮತ್ತು ರಸ್ತೆ ಬದಿಯಲ್ಲೇ ಹರಿವ ಮಳೆ ನೀರು ನೇರವಾಗಿ ಹೆದ್ದಾರಿ ಬದಿಯಲ್ಲಿರುವ ಮನೆ, ಅಂಗಡಿ, ಮಾರುಕಟ್ಟೆ, ವಾಣಿಜ್ಯ ಸಂಕೀರ್ಣ, ಕೃಷಿ ಗದ್ದೆ, ತೋಟ, ಮಂದಿರಗಳ ಸಹಿತವಾಗಿ ತಗ್ಗು ಪ್ರದೇಶದತ್ತ ಹರಿದು ಬರುವಂತಾಗಿದೆ.
ಶೀಘ್ರ ಕ್ರಮ
ಕಾಪು ಹೆದ್ದಾರಿ ಬದಿ ಆದ್ಯತೆಯಡಿ ಚರಂಡಿ ಸರಿಪಡಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ನವಯುಗ ಗುತ್ತಿಗೆದಾರರ ಒಂದು ತಂಡ ಚರಂಡಿ ವ್ಯವಸ್ಥೆಯನ್ನು ಸರಿಪಡಿಸುವುದಕ್ಕಾಗಿ ನಿಯೋಜನೆಗೊಂಡಿದ್ದು, ಆದಷ್ಟು ಶೀಘ್ರ ಚರಂಡಿ ವ್ಯವಸ್ಥೆ ಸರಿಪಡಿಸಿಕೊಡಲಾಗುವುದು.
– ವಿಜಯಕುಮಾರ್
ನವಯುಗ ಕಂಪೆನಿ ಅಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bantwala: ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಮೃತ್ಯು
Kanguva Movie: ಪ್ರೇಕ್ಷಕರ ಮನದಲ್ಲಿ ಕಂಗೊಳಿಸಿದ ʼಕಂಗುವʼ..ಸಿನಿಮಾ ನೋಡಿದವರು ಹೇಳಿದ್ದೇನು?
IPL 2025: ಸಾತಂತ್ರ್ಯ ನೀಡುವ ತಂಡವೇ ನನ್ನ ಆದ್ಯತೆ: ಕೆ.ಎಲ್.ರಾಹುಲ್
Maharashtra Election; ಬಿಜೆಪಿ ಬಳಿ 370 ಬಿಟ್ಟರೆ ಏನೂ ಇಲ್ಲ: ಮಲ್ಲಿಕಾರ್ಜುನ ಖರ್ಗೆ
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.