ಮಳೆ ಬಿರುಸು: ನೆರೆ ಭೀತಿ…ಮತ್ತಷ್ಟು ಹದಗೆಟ್ಟ ರಸ್ತೆಗಳು
Team Udayavani, Aug 14, 2018, 6:00 AM IST
ಉಡುಪಿ: ಉಡುಪಿ ನಗರ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ರವಿವಾರ ಸಂಜೆಯಿಂದ ಉತ್ತಮ ಮಳೆಯಾಗಿದ್ದು ಸೋಮವಾರವೂ ಮಧ್ಯಾಹ್ನದವರೆಗೆ ಆಗಾಗ್ಗೆ ಉತ್ತಮ ಮಳೆಯಾಯಿತು. ಮಧ್ಯಾಹ್ನದ ಅನಂತರ ನಿರಂತರ ಮಳೆ ಸುರಿಯಿತು. ಪರಿಣಾಮವಾಗಿ ಮೂಡನಿಡಂಬೂರು, ನಿಟ್ಟೂರು, ಮಠದಬೆಟ್ಟು, ಬೈಲಕೆರೆ ಮೊದಲಾದೆಡೆ ಮಳೆನೀರು ಹರಿಯುವ ತೋಡುಗಳು ಭರ್ತಿಯಾಗಿ ಹರಿಯುತ್ತಿದ್ದು ನೀರು ತೋಡಿನಿಂದ ವಸತಿ ಪ್ರದೇಶಗಳಿಗೆ ನುಗ್ಗುವ ಆತಂಕ ಉಂಟಾಗಿದೆ.
ಮೂಡನಿಡಂಬೂರು ಗರೋಡಿ ಆವರಣಕ್ಕೆ ನೀರು ನುಗ್ಗಿದೆ. ಮೂಡನಿಡಂಬೂರು-ನಿಟ್ಟೂರು ರಸ್ತೆಯಲ್ಲಿಯೂ ನೀರು ಆವರಿಸಿತ್ತು. ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಕಲ್ಸಂಕ ತೋಡು ತುಂಬಿ ಹರಿಯುತ್ತಿದ್ದು ಮತ್ತಷ್ಟು ಮಳೆಯಾದರೆ ಉಕ್ಕಿ ಹರಿಯುವ ಭೀತಿ ಇದೆ.
ಸಂಚಾರ ಸಂಚಕಾರ
ಉಡುಪಿ ನಗರದ ಹಳೆ ಡಯಾನ ಸರ್ಕಲ್, ಬನ್ನಂಜೆ-ಬ್ರಹ್ಮಗಿರಿ ರಸ್ತೆಗಳು, ಮಣಿಪಾಲದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿಗಳು ಮತ್ತಷ್ಟು ಹೆಚ್ಚಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ವಿದ್ಯುತ್ ವ್ಯತ್ಯಯ
ರವಿವಾರ ರಾತ್ರಿ ಬಲವಾದ ಗಾಳಿ ಬೀಸಿದ ಪರಿಣಾಮ ಉಡುಪಿ ಪರಿಸರದಲ್ಲಿ 4 ವಿದ್ಯುತ್ ಕಂಬಗಳಿಗೆ ಹಾನಿಯಾಗಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯವಾಗಿತ್ತು. ಉಡುಪಿ ಅಬಕಾರಿ ಭವನ ಮತ್ತು ಮಲ್ಪೆಯಲ್ಲಿ ಮರ ಬಿದ್ದು ವಿದ್ಯುತ್ ವ್ಯತ್ಯಯವಾಗಿತ್ತು. ಸೋಮವಾರ ಬಹುತೇಕ ವಿದ್ಯುತ್ ಸಂಪರ್ಕವನ್ನು ಸರಿಪಡಿಸಲಾಗಿದೆ.
ಕಾಲೇಜುಗಳಿಗೂ ರಜೆ
ಶಾಲೆ, ಪ.ಪೂ.ಕಾಲೇಜುಗಳಿಗೆ ಸೋಮವಾರ ರಜೆ ಎಂಬುದಾಗಿ ರವಿವಾರದಂದೆ ಜಿಲ್ಲಾಧಿಕಾರಿಯವರು ಘೋಷಿಸಿದ್ದರು. ಸೋಮವಾರ ನಗರದ ಹಲವು ಪದವಿ ಕಾಲೇಜುಗಳು ಕೂಡ ರಜೆ ಸಾರಿದವು. ಸೋಮವಾರದ ಮಳೆ ಜನಜೀವನದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?
Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.