ಕುಂದಾಪುರದಲ್ಲಿ ಭಾರೀ ಗಾಳಿ-ಮಳೆ; ಹಾನಿ
Team Udayavani, May 31, 2017, 12:07 PM IST
ಕುಂದಾಪುರ: ಕುಂದಾಪುರದ ಪರಿಸರದಲ್ಲಿ ಮಂಗಳವಾರ ಸಂಜೆ ಭಾರೀ ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಕೆಲವಡೆ ಮರಗಳು ಉರುಳಿವೆ. ನಗರದ ಹೊರ ವಲಯದ ಸಂಗಮ ಪರಿಸದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲೆ ಬೃಹತ್ ಮರವೊಂದು ಉರುಳಿ ಸುಮಾರು 6 ಲಕ್ಷ ರೂ. ಹಾನಿ ಸಂಭವಿಸಿದೆ.
ಸಂಜೆ ಶಾಲೆ ಬಿಟ್ಟು ಹತ್ತು ನಿಮಿಷಗಳ ಅನಂತರ ಮರ ಉರುಳಿದ್ದರಿಂದ ಸಂಭಾವ್ಯ ಭಾರೀ ದುರಂತ ತಪ್ಪಿದೆ. ಸ್ಥಳಕ್ಕೆ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮ ಶೆಟ್ಟಿ, ಎಸ್‌ಡಿಎಂಸಿ ಅಧ್ಯಕ್ಷರು, ಸ್ಥಳೀಯ ಸಂಗಮ್ ಫ್ರೆಂಡ್ಸ್ ಸದಸ್ಯರು ಭೇಟಿ ನೀಡಿದರು. ಮರದ ತೆರವು ಕಾರ್ಯ ಬುಧವಾರ ನಡೆಸಲಾಗುತ್ತದೆ.
ಬಸೂÅರು ಗ್ರಾಮದ ಮಾರ್ಗೋಳಿ ಕಿಶನ್ ಎಂಟರ್‌ಪ್ರೈಸಸ್‌ನಲ್ಲಿ ಸಂಜೆ ಬೀಸಿದ ಗಾಳಿಗೆ ಮಾಡಿನ ತಗಡು ಹಾಗೂ ಟ್ರಸ್ ಹಾರಿಹೋಗಿ 2 ಲ.ರೂ.ಗಳಿಗೂ ಅಧಿಕ ನಷ್ಟ ಸಂಭವಿಸಿದೆ.ದೋಣಿ, ಬಲೆ ನೀರುಪಾಲುಭಾರೀ ಗಾಳಿಯಿಂದಾಗಿ ಪಂಚ ಗಂಗಾವಳಿ ತೀರದಲ್ಲಿ ಲಂಗರು ಹಾಕಿದ್ದ ಅನೇಕ ಪಾತಿ ದೋಣಿಗಳು ನದಿಯಲ್ಲಿ ತೇಲಿಹೋದವು. ತಟದಲ್ಲಿದ್ದ ದೋಣಿಗಳಲ್ಲಿ ಇರಿಸಿದ್ದ ಬಲೆಗಳು ನೀರುಪಾಲಾದರೂ ತತ್‌ಕ್ಷಣ ಜಾಗೃತರಾದ ಮೀನುಗಾರರು ಅವುಗಳನ್ನು ದಡಕ್ಕೆ ತರುವಲ್ಲಿ ಯಶಸ್ವಿಯಾದರು.
ಖಾರ್ವಿಕೇರಿ ಪರಿಸರದಲ್ಲಿ ಚಂದ್ರ ಖಾರ್ವಿ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು ಹಾನಿ ಸಂಭವಿಸಿದೆ. ರಂಗ ಖಾರ್ವಿ ಅವರ ಮನೆಯ ಹೆಂಚುಗಳು ಹಾರಿಹೋಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Highway: ಅಂಬಲಪಾಡಿ ಅಂಡರ್‌ಪಾಸ್: ಗೊಂದಲ ನಿವಾರಣೆಗೆ ರಮೇಶ್ ಕಾಂಚನ್ ಆಗ್ರಹ
Malpe: ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ಕಾರ್ಗೋ ಶಿಪ್ ನಾರ್ವೆಗೆ ಹಸ್ತಾಂತರ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ
MUST WATCH
ಹೊಸ ಸೇರ್ಪಡೆ
Service Variation: ಸರಕಾರಿ ಬಸ್ ಸೇವೆಯಲ್ಲಿ ವ್ಯತ್ಯಯ: ಪ್ರಯಾಣಿಕರ ಪರದಾಟ
Mangaluru: ಕಡಲತಡಿಯಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವಕ್ಕೆ ಸಕಲ ಸಿದ್ಧತೆ
Kundapura: ಸರಕಾರಿ ಕಾಲೇಜಿನ ಎನ್‌ವಿಆರ್ ಕೆಮರಾ ಕಳವು
Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್
Belthangady: ಕಾರು-ದ್ವಿಚಕ್ರ ವಾಹನ ಅಪಘಾತ: ಗಾಯಾಳಾಗಿದ್ದ ವ್ಯಕ್ತಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.