ಬಡಿದೆಬ್ಬಿಸುವುದೇ ದೇವಾಲಯ ಸಂಸ್ಕೃತಿ: ಬಿ.ಸಿ. ರಾವ್
Team Udayavani, Apr 1, 2017, 8:45 PM IST
ಹೆಬ್ರಿ: ಒಂದು ಊರಿನ ಜನರ ಸಂಸ್ಕೃತಿ ದೇವಾಲಯದಲ್ಲಿ ಕಾಣಬಹುದು. ಶ್ರದ್ಧಾಕೇಂದ್ರ ಜಾಗೃತವಾದಷ್ಟು ಜನರ ರೀತಿ ನೀತಿ, ಆಚಾರ ವಿಚಾರ, ನಡೆ ನುಡಿಗಳು ಉತ್ತಮಗೊಳ್ಳುತ್ತವೆ. ದೇವಾಲಯದ ಪವಿತ್ರ, ಕಾರಣಿಕ ಸಾನ್ನಿಧ್ಯವನ್ನು ಪ್ರವೇಶಿಸಿದ ಕೂಡಲೇ, ಅಂತಃಶಕ್ತಿಯನ್ನು ಗುರುತಿಸುವತ್ತ ನಮ್ಮ ನೋಟ ಜಾಗೃತವಾಗಬೇಕು. ಸರ್ವಶಕ್ತನ ಎದುರು ನಿಂತ ನಾವೆಲ್ಲ ಏನೇನೂ ಅಲ್ಲ! ಅವನೇ ಎಲ್ಲ, ಅವನಿಂದಲೇ ಎಲ್ಲ ಎಂಬ ವಿನೀತಭಾವವನ್ನು ಬಡಿದೆಬ್ಬಿಸುವುದೇ ದೇವಾಲಯ ಸಂಸ್ಕೃತಿ ಎಂದು ಹರಿದಾಸ ಬಿ.ಸಿ. ರಾವ್ ಶಿವಪುರ ಹೇಳಿದರು.
ಅವರು ಕಾರ್ಕಳ ತಾಲೂಕಿನ ಹೆಬ್ರಿಯ ಇತಿಹಾಸ ಪ್ರಸಿದ್ಧ ಶ್ರೀ ಅನಂತಪದ್ಮನಾಭ ದೇವಸ್ಥಾನದ ಅಷ್ಟಬಂಧ ಸಹಿತ ಶ್ರೀ ದೇವರ ಪುನಃ ಪ್ರತಿಷ್ಠೆ ಸಹಸ್ರ ಕಲಶ ಸಹಿತ ಬ್ರಹ್ಮಕಲಶೋತ್ಸವ ಮತ್ತು ವಾರ್ಷಿಕ ಮಹೋತ್ಸವದ ಅಂಗವಾಗಿ ಮಾ. 31ರಂದು ನಡೆದ ಧಾರ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ದೇವಾಲಯ ಸಂಸ್ಕೃತಿಯ ವಿಷಯವಾಗಿ ಪ್ರವಚನ ನೀಡಿದರು. ಪ್ರತಿಯೊಬ್ಬರಲ್ಲೂ ದೈವತ್ವ ವಿದೆ ಎಂಬ ಸತ್ಯ ಮನವರಿಕೆಯಾದರೆ, ಪರರನ್ನು ನೋಯಿಸುವ, ದ್ವೇಷಿಸುವ ಅಥವಾ ಹೀಯಾಳಿಸುವ ಆಲೋಚನೆ ಮನದಲ್ಲಿ ಸುಳಿಯುವುದಿಲ್ಲ. ಈ ಕ್ರಿಯೆಗೆ ಬೇಕಾದ ವಾತಾವರಣವನ್ನು ನಿರ್ಮಾಣ ಮಾಡುವುದೇ ದೇವಾಲಯ ಸಂಸ್ಕೃತಿ ಎಂದರು.
ವಾಹನ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ವಿಕ್ರಮ್ ನಾಯಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ದೇವಸ್ಥಾನ ಜೀರ್ಣೋದ್ಧಾರ ಕಾರ್ಯದಲ್ಲಿ ಕರಸೇವೆ ಮಾಡಿದ ಸುಮಾರು 150ಕ್ಕೂ ಮಿಕ್ಕಿ ಜನರನ್ನು ಗೌರವಿಸಲಾಯಿತು. ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಬಾಲಕೃಷ್ಣ ನಾಯಕ್, ಉಪಾಧ್ಯಕ್ಷ ಪ್ರಭಾಕರ ನಾಯಕ್, ಆರ್ಥಿಕ ಸಮಿತಿಯ ಅಧ್ಯಕ್ಷ ಪ್ರಸಾದ್ ಬಲ್ಲಾಳ್, ಸಂಚಾಲಕ ಎಚ್. ಸತೀಶ್ ಪೈ, ಹೆಬ್ರಿ ಗ್ರಾ.ಪಂ. ಉಪಾಧ್ಯಕ್ಷೆ ವೀಣಾ ಪ್ರಭು, ಆಡಳಿತಾಧಿಕಾರಿ ಗಣೇಶ್ ಪಿ., ಕ್ಷೇತ್ರೇತರ ತಾರಾನಾಥ ಬಲ್ಲಾಳ್, ಪ್ರಚಾರ ಹಾಗೂ ಸಂಪರ್ಕ ಸಮಿತಿಯ ಅಧ್ಯಕ್ಷ ಸೀತಾನದಿ ವಿಟಲ ಶೆಟ್ಟಿ, ವ್ಯವಸ್ಥೆ ಹಾಗೂ ಕಾಮಗಾರಿ ಸಮಿತಿಯ ಅಧ್ಯಕ್ಷ ಪ್ರವೀಣ್ ಬಲ್ಲಾಳ್, ಟಿ.ಜಿ. ಆಚಾರ್ಯ ಮೊದಲಾದವರಿದ್ದರು.
ನಾರಾಯಣ ಪೂಜಾರಿ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಮತ್ತು ಪ್ರಕಾಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ನರೇಂದ್ರ ನಾಯಕ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.