ಹೆಬ್ರಿ ಬ್ಯಾಂಕ್ ಎಟಿಎಂ ದರೋಡೆ ಯತ್ನ
Team Udayavani, Mar 11, 2017, 10:55 AM IST
ಹೆಬ್ರಿ: ಅಪರಿಚಿತ ಮುಸುಕುದಾರಿ ಇಬ್ಬರು ವ್ಯಕ್ತಿಗಳು ಹೆಬ್ರಿ ಕೆಳಪೇಟೆಯ ಬ್ರಹ್ಮಾವರ ರಸ್ತೆಯಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್‌ನ ಎಟಿಎಂ ದರೋಡೆಗೆ ಯತ್ನಿಸಿ ಪರಾರಿಯಾದ ಘಟನೆ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಮುಂಜಾನೆ ಸುಮಾರು 4.20ರ ಹೊತ್ತಿಗೆ ಕಾರಿನಲ್ಲಿ ಬಂದ ಮೂವರ ತಂಡದಲ್ಲಿ ಇಬ್ಬರು ಮುಸುಕುದಾರಿಗಳು ತೆರೆದಿರುವ ಎಟಿಎಂಗೆ ನುಗ್ಗಿ ಶಟರ್‌ನ್ನು ಮುಚ್ಚಿ ದರೋಡೆಗೆ ಮುಂದಾದಾಗ ಬ್ಯಾಂಕ್‌ನ ಸೈರನ್ ಮೊಳಗಿತು. ಕೂಡಲೇ ಸೈರನ್‌ನ ಸಂಪರ್ಕದ ವಯರ್‌ನ್ನು ಕತ್ತರಿಸಿದ ಕಳ್ಳರು ಸುಮಾರು ಅರ್ಧ ಗಂಟೆಗಳ ಕಾಲ ಎಟಿಎಂನ್ನು ಒಡೆಯಲು ಪ್ರಯತ್ನಿಸಿದರು.ಸೈರನ್ ಶಬ್ದವಾಗುತ್ತಿದ್ದಾಧಿಗ ಎಚ್ಚರಗೊಂಡ ಆಸುಪಾಸಿನವರು ಬೊಬ್ಬೆ ಹೊಡೆದರು ಎನ್ನಲಾಗಿದೆ. ದರೋಡೆಕೋರಿಗೆ ಹೊರಗಿನ ಸಂಪೂರ್ಣ ಮಾಹಿತಿಯನ್ನು ಕಾರಿನ ಹತ್ತಿರವಿದ್ದ ಇನ್ನೊಬ್ಬ ಸಹಚರ ನೀಡುತ್ತಿದ್ದ.
ಬ್ಯಾಂಕ್ ಎದುರು ಜನರು ಹಾಗೂ ವಾಹನಗಳ ಓಡಾಟ ಜಾಸ್ತಿಯಾದಾಗ ದೂರವಾಣಿ ಮೂಲಕ ಮಾಹಿತಿ ಪಡೆದು ಕೂಡಲೇ ದರೋಡೆಕೋರರು ಪರಾರಿಯಾದರು ಎನ್ನಲಾಗಿದೆ.
ಈ ಎಲ್ಲ ಘಟನೆಗಳು ಬ್ಯಾಂಕ್‌ನ ಸಿ.ಸಿ. ಕೆಮರಾದಲ್ಲಿ ರೆಕಾರ್ಡ್ ಆಗಿದ್ದು ಈ ಬಗ್ಗೆ ಬ್ಯಾಂಕ್‌ನ ಅಧಿಕಾರಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಕಳ್ಳರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಇಲ್ಲ
ಬ್ಯಾಂಕ್ ಎಟಿಎಂಗೆ ಸೆಕ್ಯೂರಿಟಿ ಗಾರ್ಡ್ ಇಲ್ಲದಿರುವುದನ್ನು ಗಮನಿಸಿಯೇ ದುಷ್ಕರ್ಮಿಗಳು ದರೋಡೆಗೆ ಮುಂದಾಗಿದ್ದರು ಎಂದು ಸ್ಥಳೀಯರು ಹೇಳುತಿದ್ದಾರೆ. ಈ ಬಗ್ಗೆ ಬ್ಯಾಂಕ್ ಅಧಿಕಾರಿಗಳನ್ನು ವಿಚಾರಿಸಿದಾಗ ನಮ್ಮ ಬ್ಯಾಂಕಿನ ಎಟಿಎಂ ಕೇಂದ್ರಗಳಿಗೆ ಸೆಕ್ಯೂರಿಟಿ ಗಾರ್ಡ್‌ನ ನೇಮಕಾತಿ ನಿಲ್ಲಿಸಿದ್ದಾರೆ ಎಂದು ತಿಳಿಸಿದರು.
ಕರೆ ಮೂಲಕ ಅಪರಾಧಿಗಳ ಪತ್ತೆ
ಬೆಳಗ್ಗೆ ಸುಮಾರು 4.20ರಿಂದ ಎಟಿಎಂ ಒಳಗಡೆ ಇರುವ ದರೋಡೆ ಕೋರರಿಗೆ ಹೊರಗಡೆ ಇದ್ದ ವ್ಯಕ್ತಿಯೋರ್ವರು ದೂರವಾಣಿ ಕರೆ ಮಾಡುತ್ತಿರುವ ಬಗ್ಗೆ ಸಂಪೂರ್ಣವಾಗಿ ಸಿಸಿ ಕೆಮರಾದಲ್ಲಿ ದಾಖಲಾಗಿದ್ದು, ಟವರ್‌ನ ನೆಟ್‌ವರ್ಕ್‌ನ್ನು ಗಮನಿಸಿ ಕರೆಮಾಡಿದ ನಂಬರ್ ಪತ್ತೆಹಚ್ಚಿ ಕಳ್ಳತನಕ್ಕೆ ಯತ್ನಿಸಿದವರನ್ನು ಹಿಡಿಯಲು ಅನುಕೂಲವಾಗಬಹುದು ಎಂದು ಸ್ಥಳೀಯರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.