ಹೆಬ್ರಿ ಪರಿಸರದ ಶಾಲೆಗಳು ಬಂದ್
Team Udayavani, Jul 10, 2019, 5:49 AM IST
ಹೆಬ್ರಿ/ಅಜೆಕಾರು : ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಶಿಕ್ಷಕರ ಸಂಘ ಕರೆ ನೀಡಿದ ಪ್ರತಿಭಟನೆ ಹಿನ್ನಲೆಯಲ್ಲಿ ಹೆಬ್ರಿ ಸುತ್ತಮುತ್ತಲಿನ ಬಹುತೇಕ ಸರಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿದ್ದವು.
ಅಸಮರ್ಪಕ ಶಿಕ್ಷಣ ನೀತಿ, ಶಿಕ್ಷಕರ ಹಿಂಬಡ್ತಿ, ಹೊಸ ಪಂಚಣಿ ಯೋಜನೆ ರದ್ದತಿ, ಪದವೀಧರ ಶಿಕ್ಷಕರ ಪದೊನ್ನತ್ತಿ, ಗ್ರಾಮೀಣ ಕೃಪಾಂಕ ಶಿಕ್ಷಕರ ಸೇವೆ ಖಾಯಮಾತಿ ಮುಂತಾದ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರವೀಂದ್ರ ಹೆಗ್ಡೆ ನೇತೃತ್ವದಲ್ಲಿ ಮಣಿಪಾಲ ರಜತಾದ್ರಿ ಬಳಿ ಪ್ರತಿಭಟನೆ ನಡೆದ ಹಿನ್ನಲೆ ಹೆಬ್ರಿ ಸುತ್ತಮುತ್ತಲಿನ ಬಹುತೇಕ ಶಾಲೆಗಳು ಮುಚ್ಚಿದ್ದವು.
ರಾಜ್ಯದಲ್ಲಿ ಮೊದಲ ಬಾರಿಗೆ ಶಾಲೆಯನ್ನು ಮುಚ್ಚಿ ಪ್ರತಿಭಟನೆ ನಡೆಯುತ್ತಿದ್ದು ಸರಕಾರ ಈ ಬಗ್ಗೆ ಶಿಕ್ಷಕರ ಸಮಸ್ಯೆ ಸ್ಪಂದಿಸಿ ಪರಿಹಾರ ಸೂಚಿಸುವ ಬದಲು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಚೆಲ್ಲಾಟ ಆಡುತ್ತಿದೆ. ಮೊದಲೇ ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದ್ದು ಇಂತಹ ಪ್ರತಿಭಟನೆಗಳಿಗೆ ಸರಕಾರ ಅವಕಾಶ ಕೊಡದೆ ಸಮಸ್ಯೆ ಬಗೆಹರಿಸುವಲ್ಲಿ ಮುಂದಾಗಬೇಕು ಎಂದು ಸರಕಾರಿ ಶಾಲೆಗಳ ವಿದ್ಯಾರ್ಥಿಗಳ ಹೆತ್ತವರು ಆಗ್ರಹಿಸಿದ್ದಾರೆ.
ಕಾರ್ಕಳ ತಾಲೂಕಿನ ಎಲ್ಲ ಹಿರಿಯ ಹಾಗೂ ಪ್ರಾಥಮಿಕ ಶಾಲೆಗಳು ಬಂದ್ ಆಗಿದ್ದವು. ಬೆಳಗ್ಗೆಯಿಂದಲೇ ಶಾಲೆ ತೆರೆಯದೆ ಬಂದಾಗಿತ್ತು. ವಿದ್ಯಾರ್ಥಿಗಳಿಗೆ ಜು. 8ರಂದೇ ಪ್ರತಿಭಟನೆ ಬಗ್ಗೆ ಮಾಹಿತಿ ನೀಡಿರುವುದರಿಂದ ವಿದ್ಯಾರ್ಥಿಗಳು ಶಾಲೆಯತ್ತ ಬಂದಿಲ್ಲ. ಅಡಿಗೆ ಸಿಬಂದಿಯವರೂ ಶಾಲೆಯತ್ತ ತೆರಳಲಿಲ್ಲ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.