ಹೆಬ್ರಿ: ಪ್ರಾಕೃತಿಕ ವಿಕೋಪ ನಿಭಾಯಿಸಲು ಮಾಹಿತಿ ಸಭೆ
Team Udayavani, Jul 6, 2018, 7:00 AM IST
ಹೆಬ್ರಿ: ಕಾರ್ಕಳ ತಾಲೂಕಿನಲ್ಲಿ 2018ನೇ ಸಾಲಿನ ಮಳೆಯಿಂದ ಆಗಬಹುದಾದ ಅನಾಹುತಗಳು ಹಾಗೂ ಅದರ ಬಗ್ಗೆ ತೆಗೆದುಕೊಳ್ಳಬೇಕಾದ ಮುಂಜಾಗೃತ ಕ್ರಮದ ಕುರಿತು ಜು. 4ರಂದು ಪಂಚಾಯತ್ ಸಭಾಂಗಣದಲ್ಲಿ ನಡೆದ ಮಾಹಿತಿ ಸಭೆಯಲ್ಲಿ ಮೆಸ್ಕಾಂ ಹಾಗೂ ಅರಣ್ಯ ಇಲಾಖೆ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸಿದರು.
ಸಭೆಯು ಕಾರ್ಕಳ ತಹಸೀಲ್ದಾರ್ ಮಹಮದ್ ಇಸಾಕ್ ಅವರ ನೇತೃತ್ವದಲ್ಲಿ ನಡೆಯಿತು.ಮಳೆಗಾಲ ಆರಂಭಗೊಂಡು ಒಂದು ತಿಂಗಳು ಕಳೆದರೂ ಚರಂಡಿ ವ್ಯವಸ್ಥೆ ಇಲ್ಲ,ಅಪಾಯಕಾರಿಮರಗಳಳನ್ನು ತೆರವು ಮಾಡಿಲ್ಲ. ವಿದ್ಯುತ್ ಸಮಸ್ಯೆಯ ಬಗ್ಗೆ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಅಧಿಕಾರಿಗಳು ದೂರಿದರು.
ನಮ್ಮನ್ನೇ ಗದರಿಸುತ್ತಾರೆ
ಮನೆಗೆ ಮರ ಬೀಳುವ ಸಂಭವವಿದೆ. ವಿದ್ಯುತ್ ತಂತಿ ಪಕ್ಕದಲ್ಲೆ ಹೋಗಿರುವುದರಿಂದ ಅನಾಹುತ ಸಂಭವಿಸುತ್ತದೆ ಎಂದು ಇಲಾಖೆಯ ಅಧಿಕಾರಿಗಳಲ್ಲಿ ಹೇಳಿದಾಗ ನಿಮಗೆ ಮರದ ಬುಡದಲ್ಲಿ ಮನೆಕಟ್ಟಲು ಯಾರು ಹೇಳಿದರು ಎಂದು ನಮ್ಮನ್ನೇ ಗದರಿಸುವುದಾಗಿ ಹೆಬ್ರಿ ಪಂಚಾಯತ್ ಸದಸ್ಯ ಪುತ್ರನ್ ಆರೋಪಿಸಿದರು.
ಸ್ಪಂದನೆ ಇಲ್ಲ
ಪ್ರಕೃತಿ ವಿಕೋಪದಿಂದ ಹಾನಿಗೀಡಾದವರಿಗೆ ಪರಿಹಾರ ನೀಡುವ ಮೊದಲು ಪ್ರಕೃತಿ ವಿಕೋಪವಾಗದಂತೆ ಮೊದಲೆ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸಂಬಂಧ ಪಟ್ಟ ಅಧಿಕಾರಿಗಳು ಸ್ಪಂದಿಸುತ್ತಿಲ್ಲ .ಈಗಾಗಲೇ ಸೋಮೇಶ್ವರ ಪ್ರದೇಶದಲ್ಲಿ ವಿದ್ಯುತ್ ತಂತಿ ತಗಲಿ ಮೃತಪಟ್ಟವರ ಕುಟುಂಬಕ್ಕೆ ಯಾವುದೇ ಪರಿಹಾರವನ್ನು ಇಲಾಖೆ ಯಾಕೆ ಕೊಟ್ಟಿಲ್ಲ ಎಂದು ಗುಲ್ಕಾಡು ಭಾಸ್ಕರ್ ಶೆಟ್ಟಿ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದರು.
ಅಸಮರ್ಪಕ ಮೆಸ್ಕಾಂ ಸೇವೆ
ವಿದ್ಯುತ್ ಕಂಬ ಎರಲು ಏಣಿಯನ್ನು ಸ್ಥಳೀಯರೇ ವ್ಯವಸ್ಥೆ ಮಾಡಬೇಕು ಎಂಬ ಅಧಿಕಾರಿಗಳು ಮಾತು ಅವರ ಅಸಮರ್ಪಕ ಸೇವೆ ಸಾಭೀತುಮಾಡುತ್ತದೆ. ಮಳೆಗಾಳಿಯಿಂದ ವಿದ್ಯುತ್ ಕೈಕೊಟ್ಟು ಒಂದು ವಾರವಾದರೂ ಮೆಸ್ಕಾಂನವರು ಶೀಘ್ರವಾಗಿ ಸಮಸ್ಯೆಗೆ ಸ್ಪಂದಿಸುವುದಿಲ್ಲ ಎಂದು ಬೇಳಂಜೆ ಹರೀಶ್ ಪೂಜಾರಿ ಅಧಿಕಾರಿಗಳ ಗಮನ ಸೆಳೆದರು.
ತಾಲೂಕು ಪಂಚಾಯತ್ ಇಒ ಡಾ| ಹರ್ಷ, ನೊಡೆಲ್ ಅಧಿಕಾರಿ ಭುವನೇಶ್ವರಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಸುಧಾಕರ ಹೆಗ್ಡೆ, ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ಮಾಲಿನಿ ಜೆ.ಶೆಟ್ಟಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮಸ್ಯೆಗೆ ಸ್ಪಂದಿಸಿ
ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಹೇಳಿದಾಗ ಕೂಡಲೇ ಇಲಾಖೆ ಅಧಿಕಾರಿಗಳಿಗೆ ಆ ಭಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಶೀಘ್ರ ಸಮಸ್ಯೆಬಗೆಹರಿಸುವಲ್ಲಿ ಇಲಾಖೆಯ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. ಒಂದು ವೇಳೆ ಅವರು ಸ್ಪಂದಿಸದಿದ್ದಲ್ಲಿ ಸಾರ್ವಜನಕರು ನೇರವಾಗಿ ತಾಲೂಕು ಹೆಲ್ಪಲೈನ್‌ಗೆ ಕರೆಮಾಡಿ.
– ಮಹಮ್ಮದ್ ಇಸಾಕ್, ಕಾರ್ಕಳ ತಹಸೀಲ್ದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಸೇವಿಸಿದ ವ್ಯಕ್ತಿ ಪೊಲೀಸ್ ವಶ
Manipal: ಅಪಾಯಕಾರಿ ರೀತಿಯಲ್ಲಿ ಬೈಕ್ ಚಾಲನೆ; ಪ್ರಕರಣ ದಾಖಲು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.