Hebri: ಎನ್ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
Team Udayavani, Nov 22, 2024, 6:56 AM IST
ಹೆಬ್ರಿ: ವಿಕ್ರಂ ಗೌಡನ ಎನ್ಕೌಂಟರ್ ಪ್ರಕರಣದ ತನಿಖೆಯನ್ನು ಹೆಬ್ರಿ ಪೊಲೀಸ್ ಠಾಣೆಗೆ ಒಪ್ಪಿಸ ಲಾಗಿದ್ದು, ಈ ಠಾಣೆಯೇ ಹಲವು ಸಮಸ್ಯೆಗಳಿಂದ ಬಳುತ್ತಿದೆ.
ಸುಮಾರು 12 ಗ್ರಾಮ ಪಂಚಾ ಯತ್ಗಳನ್ನು ಒಳಗೊಂಡು 35 ಬೀಟ್ ಪ್ರದೇಶಗಳ ವ್ಯಾಪ್ತಿಗೆ ಬರುವ ಹೆಬ್ರಿ ಪೊಲೀಸ್ ಠಾಣೆ ಈಗ ನಗರದಿಂದ ದೂರವಾಗಿ ಕಾಡು ಪ್ರದೇಶದಲ್ಲಿದೆ. ಠಾಣೆಗೆ ಸಂಪರ್ಕಿಸುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಬೀದಿ ದೀಪಗಳೂ ಇಲ್ಲ. ಒಂದು ರೀತಿಯಲ್ಲಿ ಠಾಣೆಗೇ ಭದ್ರತೆ ಇಲ್ಲದಂತಾಗಿದೆ.
ಬಂಕರ್ ಇಲ್ಲ
ಈ ಹಿಂದೆ ಹೆಬ್ರಿ ಪಟ್ಟಣದಲ್ಲಿದ್ದ ಹಳೆಯ ಠಾಣೆಯಲ್ಲಿ ಸಂಭಾವ್ಯ ನಕ್ಸಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪೊಲೀಸರಿಗೆ ಬಂಕರ್ ವ್ಯವಸ್ಥೆ ಮಾಡಲಾಗಿತ್ತು. ಹೊಸ ಠಾಣೆಯಲ್ಲಿ ಬಂಕರ್ ವ್ಯವಸ್ಥೆಯೂ ಇಲ್ಲ.
ಸುಸಜ್ಜಿತ ವಾಹನವೂ ಇಲ್ಲ
ಎನ್ಕೌಂಟರ್ ನಡೆದ ಪ್ರದೇಶ ದಟ್ಟಾರಣ್ಯವಾಗಿದ್ದು, ಅಲ್ಲಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಅಲ್ಲಿಗೆ ಸಾಮಾನ್ಯ ವಾಹನಗಳು ಸಂಚರಿಸು ವುದು ಅಸಾಧ್ಯ. ಈಗ ಹೆಬ್ರಿ ಠಾಣೆಯಲ್ಲಿರುವ ವಾಹನ ತೀರಾ ಹಳೆಯದಾಗಿದ್ದು, ಅದರಲ್ಲಿ ಸಂಚರಿ ಸಲು ಅಸಾಧ್ಯ. ಆದ್ದರಿಂದ ಠಾಣೆಗೆ ಸುಸಜ್ಜಿತ ವಾಹನ ಅಗತ್ಯವಾಗಿದೆ.
ತಾಲೂಕು ಠಾಣೆಯಾಗಬೇಕು
35 ಬೀಟ್ಗಳಲ್ಲಿ ಪ್ರತಿ ಬೀಟ್ಗೆ ಇಬ್ಬರಂತೆ 70 ಸಿಬಂದಿ ಅಗತ್ಯವಿದ್ದಾರೆ. ತಿಂಗಳಿಗೆ ಎರಡು ಬಾರಿಯಂತೆ ಭೇಟಿ ನೀಡಬೇಕಾಗುತ್ತದೆ. ಸದ್ಯದ ಸ್ಥಿತಿಯಲ್ಲಿ ಠಾಣೆಗೆ 44 ಸಿಬಂದಿ ಕರ್ತವ್ಯ ನಿರ್ವಹಿಸಬೇಕಾಗಿದ್ದು, ಸಿಬಂದಿ ಕೊರತೆ ಇದೆ. ಈಗ ಎನ್ಕೌಂಟರ್ ಕೂಡ ನಡೆದಿರುವುದರಿಂದ ಹೆಚ್ಚಿನ ಸಿಬಂದಿ ಅಗತ್ಯ ಇಲ್ಲಿದೆ. ಅಲ್ಲದೆ ಆದಷ್ಟು ಶೀಘ್ರದಲ್ಲಿ ಇದನ್ನು ಹೆಬ್ರಿ ತಾಲೂಕು ಠಾಣೆಯಾಗಿ ಮೇಲ್ದರ್ಜೆಗೆ ಏರಿಸಬೇಕಾಗಿದೆ.
ಪಟ್ಟಣದಲ್ಲಿ ಚೆಕ್ಪೋಸ್ಟ್ ಅಗತ್ಯ
ವಾಹನದ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಚೆಕ್ಪೋಸ್ಟ್ ಅಗತ್ಯವಾಗಿದೆ. ಈ ಬಗ್ಗೆ ಹಿಂದೆ ತಾಲೂಕು ಕಚೇರಿಯಲ್ಲಿ ನಡೆದ ಜನಸ್ಪಂದನ ಸಭೆಯಲ್ಲಿ ಜನರ ಸಮಸ್ಯೆಗೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಶೀಘ್ರದಲ್ಲೇ ಚೆಕ್ಪೋಸ್ಟ್ ತೆರೆಯುವುದಾಗಿ ತಿಳಿಸಿದ್ದರು. ಆದರೆ ಕಾರ್ಯರೂಪಕ್ಕೆ ಬಂದಿಲ್ಲ. ಭದ್ರತೆ ಹಿನ್ನೆಲೆಯಲ್ಲಿ ಆದಷ್ಟು ಶೀಘ್ರ ಹೆಬ್ಬಿ ಪಟ್ಟಣದಲ್ಲಿ ಚೆಕ್ಪೋಸ್ಟ್ ಸ್ಥಾಪಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಹರೀಶ್ ಶೆಟ್ಟಿ ನಾಡ್ಪಾಲು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.