ಹೆಬ್ರಿ ತಾಲೂಕಿಗೆ ಬೇಕು ಸುಸಜ್ಜಿತ ಅಗ್ನಿಶಾಮಕ ಠಾಣೆ
ತಾಲೂಕು ಆಗಿ ವರ್ಷವಾದರೂ ಇನ್ನೂ ಈಡೇರಿಲ್ಲ ಬೇಡಿಕೆ
Team Udayavani, Jun 20, 2019, 5:27 AM IST
ಹೆಬ್ರಿ: ಹೆಬ್ರಿ ತಾಲೂಕಾಗಿ ಒಂದೂವರೆ ವರ್ಷ ಕಳೆದರೂ ತಾಲೂಕು ಕೇಂದ್ರವಾದ ಹೆಬ್ರಿಯಲ್ಲಿ ಇದುವರೆಗೂ ಅಗ್ನಿಶಾಮಕ ದಳ ಸ್ಥಾಪನೆ ಬಗ್ಗೆ ಸರಕಾರ ಮನಸ್ಸು ಮಾಡಿಲ್ಲ.
ಹೆಬ್ರಿ ಅತಿ ಹೆಚ್ಚು ಅಕ್ಕಿಗಿರಣಿ, ಗೇರುಬೀಜ ಫ್ಯಾಕ್ಟರಿಗಳು, ಸಣ್ಣ ಕೈಗಾರಿಕೆಗಳನ್ನು ಹೊಂದಿದ ಪ್ರದೇಶವಾಗಿದ್ದು, ಅಗ್ನಿಶಾಮಕ ಠಾಣೆ ಇಲ್ಲ. ಇದರಿಂದ ತುರ್ತು ಸಂದರ್ಭಗಳಲ್ಲಿ ಸಮಸ್ಯೆಯಾಗುತ್ತಿದೆ
ದೂರದಿಂದ ಬರಬೇಕು
ಗ್ರಾಮೀಣ ಪ್ರದೇಶವಾದ ಹೆಬ್ರಿಯಲ್ಲಿ ಅಗ್ನಿ ಅವಘಡಗಳು ಸಂಭವಿಸಿದಾಗ, ದೂರದಿಂದ ಬರಬೇಕಾಗಿದೆ. ಕಾರ್ಕಳ, ಕುಂದಾಪುರ, ಉಡುಪಿ, ಬ್ರಹ್ಮಾವರದಿಂದ 32 ಕಿ.ಮೀ. ದೂರದಲ್ಲಿ ಹೆಬ್ರಿ ಇದ್ದು ಅನಾಹುತ ಸಂಭವಿಸಿದಾಗ ತಕ್ಷಣ ಕರೆ ಮಾಡಿದರೂ ರಕ್ಷಣೆಗೆ ಆಗಮಿಸಲು 1 ತಾಸು ತಗಲುತ್ತದೆ. ಇದರಿಂದ ಸಂಪೂರ್ಣ ಹಾನಿಯಾದ ಪ್ರಕರಣಗಳೇ ಹೆಚ್ಚಾಗಿವೆ.
ಹೆಚ್ಚಿದ ಪ್ರಕರಣಗಳು
ಈ ಬಾರಿ ಬೇಸಗೆಯಲ್ಲಿ ಅತಿ ಹೆಚ್ಚು ಕಾಡಿಗೆ ಬೆಂಕಿ ಬಿದ್ದ ಪ್ರಕರಣಗಳು ಸಂಭವಿಸಿವೆ. ಇದರಿಂದ ಅಪಾರ ಪ್ರಮಾಣದ ಕಾಡು, ವನ್ಯ ಸಂಕುಲ ನಾಶವಾಗಿದೆ. ಕಬ್ಬಿನಾಲೆ ಸೋಮೇಶ್ವರ ಸುತ್ತಮುತ್ತಲಿನ ಪ್ರದೇಶದಲ್ಲಿ ರಬ್ಬರ್ ತೋಟಗಳಿದ್ದು ಈ ಬಾರಿ ಬೆಂಕಿ ಅನಾಹುತದಿಂದ ಸಂಪೂರ್ಣ ಸುಟ್ಟು ಹೋಗಿದ್ದವು. ಜತೆಗೆ ಇತ್ತೀಚೆಗೆ ಮುದ್ರಾಡಿ ಸಮೀಪದಲ್ಲಿ ಆಮ್ನಿ ಕಾರೊಂದು ಶಾರ್ಟ್ ಸರ್ಕ್ನೂಟ್ ಆಗಿ ಬೆಂಕಿ ಹತ್ತಿಕೊಂಡು ಜನರ ಕಣ್ಣೆದುರೇ ಸುಟ್ಟುಹೋಗಿತ್ತು. ಪ್ರತಿ ಬಾರಿಯೂ ಬೇರೆ ಕಡೆಯಿಂದ ಬರುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿ ಹೋಗಿರುತ್ತದೆ.
ಆದೇಶದ ಬಳಿಕ ಕಾರ್ಯರೂಪಕ್ಕೆ
ನೂತನವಾಗಿ ಘೋಷಣೆಯಾದ ಉಡುಪಿ ಜಿಲ್ಲೆಯ ಪ್ರತಿ ತಾಲೂಕು ಕೇಂದ್ರಗಳಿಗೆ ಅಗ್ನಿಶಾಮಕ ಠಾಣೆಗಳನ್ನು ತೆರೆಯಲು ಸರಕಾರ ಆದೇಶಿಸಿದೆ. ಈ ನಿಟ್ಟಿನಲ್ಲಿ ಹೆಬ್ರಿಗೆ ಕೂಡ ಅಗ್ನಿಶಾಮಕ ಠಾಣೆ ಆಗುವ ಬಗ್ಗೆ ಉಡುಪಿಯಿಂದ ಪ್ರಸ್ತಾವನೆ ಸಲ್ಲಿಸಲಾಗಿದ್ದು ಆದೇಶದ ಬಳಿಕ ಕಾರ್ಯರೂಪಕ್ಕೆ ಬರಲಿದೆ.
-ವಸಂತ್ ಕುಮಾರ್, ಅಗ್ನಿಶಾಮಕ ದಳ ಅಧಿಕಾರಿ, ಉಡುಪಿ ಜಿಲ್ಲೆ
ಪ್ರಸ್ತಾವನೆ ಸಲ್ಲಿಕೆ
ಹೆಬ್ರಿಗೆ ಅಗ್ನಿಶಾಮಕ ದಳ ಬೇಕು ಎನ್ನುವ ಬಗ್ಗೆ ಈ ಹಿಂದೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದೀಗ ಹೆಬ್ರಿ ತಾಲೂಕು ಕೇಂದ್ರವಾದ್ದರಿಂದ ಶೀಘ್ರ ಅಗ್ನಿಶಾಮಕ ದಳದ ವ್ಯವಸ್ಥೆಗೆ ಪ್ರಯತ್ನಿಸ ಲಾಗುವುದು.
-ವಿ.ಸುನಿಲ್ ಕುಮಾರ್,
ಶಾಸಕರು
– ಉದಯಕುಮಾರ್ ಹೆಬ್ರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.