![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, Jun 4, 2019, 6:00 AM IST
ಬಳಿಕ ಮಾತನಾಡಿದ ಅವರು, ಹೆಬ್ರಿ ತಾಲೂಕು ಕಚೇರಿಯಲ್ಲಿ ಎಲ್ಲ ಸೌಲಭ್ಯಗಳು ಸಿಗುವಂತೆ ಹಂತ ಹಂತವಾಗಿ ಮಾಡಲಾಗುವುದು. ಈಗಾಗಲೇ ಕಡತಗಳ ದಾಖಲೆಗಳನ್ನು ಹೆಬ್ರಿಗೆ ವಾರ್ಗಯಿಸುವ ಕಾರ್ಯ ನಡೆಯುತ್ತಿದ್ದು ಶೀಘ್ರದಲ್ಲಿ ಅಟಲ್ ಜೀ ಸೇವಾ ಕೇಂದ್ರ ಹಾಗೂ ನೆಮ್ಮದಿಕೇಂದ್ರವನ್ನು ತೆರೆಯಲಾಗುವುದು.ಕಂದಾಯ ಹಾಗೂ ಸರ್ವೇ ಅಧಿಕಾರಿಗಳ ನೇಮಕ ದೊಂದಿಗೆ ಪೂರ್ಣ ಪ್ರಮಾಣದ ಸಿಬಂದಿ ನೇಮಕ ವಾಗಲಿದೆ ಎಂದರು.
ಆಧಾರ್ ಸೇವೆ
ಈಗಾಗಲೇ ಭೂಮಿ ಆ್ಯಪ್ ಅಂತಿಮ ಹಂತದಲ್ಲಿದ್ದು ಇನ್ನೂ 10 ದಿನನ ಒಳಗೆ ಹೆಬ್ರಿ ತಾಲೂಕು ಕಚೇರಿಯಲ್ಲಿ ಆಧಾರ್ ಸೇವೆ ಆರಂಭಿಸಲಾಗುವುದು ಎಂದು ಶಾಸಕರು ಹೇಳಿದರು.
ಶೀಘ್ರ ಕಡೆತಗಳ ಹಸ್ತಾಂತರ
ಕಾರ್ಕಳ ತಾಲೂಕಿನ 12 ಗ್ರಾಮಗಳು ಹಾಗೂ ಕುಂದಾಪುರ ತಾಲೂಕಿನ 4 ಗ್ರಾಮಗಳ ದಾಖಲೆಗಳು ಇನ್ನೂ ಅಯಾ ತಾಲೂಕು ಕೇಂದ್ರಗಳಲ್ಲಿ ಇದ್ದು ಇದೀಗ ಭೂಮಿ ಆ್ಯಪ್ ಮೂಲಕ ಹೆಬ್ರಿ ತಾಲೂಕಿಗೆ ಸೇರಿಸುವ ಕೆಲಸಕಾರ್ಯಗಳು ನಡೆಯುತ್ತಿದ್ದು ಶೀಘ್ರದಲ್ಲಿ ಹಸ್ತಾಂತರವಾಗಲಿದೆ. ಪೂರ್ಣ ಪ್ರಮಾಣದ ತಾಲೂಕು ಅಗಲು ಕಾಲಾವಕಾಶ ಬೇಕಾಗಿದ್ದು ಜನರ ಸಹಕಾರ ಅಗತ್ಯ ಎಂದು ಹೆಬ್ರಿ ತಾಲೂಕು ತಹಶೀಲ್ದಾರ್ ಮಹೇಶ್ಚಂದ್ರ ಹೇಳಿದರು.
ಈ ಸಂದರ್ಭ ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್, ತಾ.ಪಂ. ಸದಸ್ಯರಾದ ಅಮೃತಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಚಂದ್ರಶೇಖರ ಶೆಟ್ಟಿ, ಹೆಬ್ರಿ ಗ್ರಾ.ಪಂ. ಅಧ್ಯಕ್ಷ ಎಚ್.ಕೆ. ಸುಧಾಕರ, ಹೆಬ್ರಿ ತಾಲೂಕು ಹೋರಾಟ ಸಮಿತಿಯ ಅಧ್ಯಕ್ಷ ಎಚ್. ಭಾಸ್ಕರ್ ಜೋಯಿಸ್, ಸಂಚಾಲಕ ನೀರೆ ಕೃಷ್ಣ ಶೆಟ್ಟಿ, ಸ್ಥಳೀಯ ಗ್ರಾ.ಪಂ. ಅಧ್ಯಕ್ಷರಾದ ಶಶಿಕಲಾ ಡಿ. ಪೂಜಾರಿ, ರಾಮಣ್ಣ ಪೂಜಾರಿ, ಸುಗಂಧಿ ನಾಯ್ಕ, ಸಂದೀಪ್ ನಾಯ್ಕ, ಸುರೇಂದ್ರ ಶೆಟ್ಟಿ, ಜಲಜಾ ಪೂಜಾರಿ, ಗ್ರಾಮ ಲೆಕ್ಕಿಗ ಗಣೇಶ್ ಉಪಸ್ಥಿತರಿದ್ದರು.
ದಾಖಲೆ ಕಡೆತಗಳು ಎಲ್ಲಿ ?
ತಾಲೂಕು ಘೋಷಣೆಯಾಗಿ ಒಂದೂವರೆ ವರ್ಷ ಕಳೆದರೂ ಹೆಬ್ರಿ ತಾಲೂಕಿಗೆ ಸಂಬಂಧ ಪಟ್ಟಂತಹ ಎಲ್ಲ ದಾಖಲೆಗಳು ಇನ್ನೂ ಕಾರ್ಕಳ ಹಾಗೂ ಕುಂದಾಪುರ ತಾಲೂಕು ಕಚೇರಿಯಲ್ಲಿಯೇ ಇವೆೆ. ಈ ಬಗ್ಗೆ ಜಿಲ್ಲಾಧಿಕಾರಿಯನ್ನು ಕೇಳಿದರೆ ಎಲ್ಲ ವರ್ಗಾವಣೆಗೊಂಡಿದೆ. ನೀವು ಅಲ್ಲಿ ವಿಚಾರಿಸಿ ಎನ್ನುತ್ತಾರೆ. ಹಾಗಾದರೆ ಇನ್ನೂ ದಾಖಲೆ ಕಡತಗಳು ಯಾಕೆ ವರ್ಗಾವಣೆ ಗೊಂಡಿಲ್ಲ? ಕೇವಲ ಆರ್‌ಟಿಸಿ ನೀಡಿದರೆ ಸಾಲದು. ಶೀಘ್ರದಲ್ಲಿ ಪೂರ್ಣ ಪ್ರಮಾಣದ ತಾಲೂಕಾಗಿ ಜನರ ಅಲೆದಾಟವನ್ನು ತಪ್ಪಿಸಬೇಕು ಎಂದು ಪ್ರಗತಿಪರ ನಾಗರಿಕ ಸೇವಾ ಸಮಿತಿ ಅಧ್ಯಕ್ಷ ಕೆರೆಬೆಟ್ಟು ಸಂಜೀವ ಶೆಟ್ಟಿ ಅವರು ಆಗ್ರಹಿಸಿದ್ದಾರೆ.
ಸೌಲಭ್ಯಗಳ ವಿತರಣೆ
ಈ ಸಂದರ್ಭ ಇತ್ತಿಚೆಗೆ ಪ್ರಕೃತಿ ವಿಕೋಪದಿಂದ ನೊಂದವರಿಗೆ ಪರಿಹಾರವಾಗಿ ಚೆಕ್ ವಿತರಣೆ, ಪಹಣಿ ಪತ್ರ ವಿತರಣೆ ಹಾಗೂ ಸಮಸ್ಯೆಗಳ ಬಗ್ಗೆ ಅಹವಾಲು ಸ್ವೀಕಾರ ಕಾರ್ಯಕ್ರಮ ನಡೆಯಿತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.