ಹೆಜಮಾಡಿ ಮೀನುಗಾರಿಕಾ ಬಂದರು ಅಭಿವೃದ್ಧಿಗೆ ವಿಘ್ನ
Team Udayavani, Oct 30, 2018, 2:00 AM IST
ಪಡುಬಿದ್ರಿ: ಹೆಜಮಾಡಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸರ್ವಋತು ಮೀನುಗಾರಿಕೆ ಬಂದರು – ಮಂಗಳೂರು, ಮಲ್ಪೆ ನಡುವಣ ಮೀನುಗಾರರ ಒತ್ತಡ ಕಡಿಮೆಗೊಳಿಸಲಿದೆ. ಸಿದ್ದರಾಮಯ್ಯ ತಮ್ಮ ಮೊದಲ ಬಜೆಟ್‌ನಲ್ಲೇ ಹಣ ವಿಂಗಡಣೆ ಮಾಡಿದ್ದಾರೆ ಎಂದು ತಿಳಿಸಿದ್ದರು. ಯೋಜನಾ ಪ್ರಗತಿ ಕೇವಲ ಸರಕಾರಿ ಕಡತಗಳಲ್ಲೇ ಕಾಣಿಸಿಕೊಂಡರೂ ಇನ್ನೂ ಜನರಿಗೆ ಹತ್ತಿರವಾಗಿಲ್ಲ. ‘ಉದಯವಾಣಿ’ಯ ಸತತ ಫಾಲೋ ಅಪ್‌ನಿಂದ ಈಗಲೂ ರಾಜ್ಯ ಸಚಿವ ಸಂಪುಟದ ಅನುಮೋದನೆ ಬಳಿಕ ರಾಜ್ಯ ಸರಕಾರದ ಪಾಲು ಬಿಡುಗಡೆಗೊಳ್ಳಲು ಮತ್ತಷ್ಟು ವಿಘ್ನ ಎದುರಾಗಿವೆ.
ಕೇಂದ್ರ ಮತ್ತು ರಾಜ್ಯ ಸರಕಾರಗಳ 50:50 ಅನುದಾನದೊಂದಿಗೆ ಕಾರ್ಯಗತಗೊಳ್ಳಲಿರುವ 138.6 ಕೋ.ರೂ.ಗಳ ಹೆಜಮಾಡಿ ಬಂದರು ಯೋಜನೆಗೆ ಈಗಾಗಲೇ ಕೇಂದ್ರ ಸರಕಾರವು 13.86 ಕೋ. ರೂ.ಗಳ ತನ್ನ ಮೊದಲ ಕಂತನ್ನು ಬಿಡುಗಡೆಗೊಳಿಸಿದೆ. ಇನ್ನೇನು ರಾಜ್ಯ ಸರಕಾರದ ಅನುದಾನವೂ ಬಿಡುಗಡೆಗೊಳ್ಳಲಿದೆ ಎನ್ನುವಷ್ಟರಲ್ಲಿ ಯೋಜನೆಗೆ ರಾಜ್ಯ ಸಚಿವ ಸಂಪುಟದ ಅನುಮೋದನೆ ಲಭ್ಯವಾಗಬೇಕೆಂದು ಹೇಳಲಾಯಿತು.
ಭೂಮಿ ಖಾಸಗಿ ಅವರ ಹೆಸರಲ್ಲಿ
ರಾಜ್ಯ ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ, ಮುಖ್ಯಮಂತ್ರಿ ಕುಮಾರಸ್ವಾಮಿ ಈ ಕುರಿತು ತಿಳಿಸಿದ್ದರೂ ಇದುವರೆಗೂ ಸರಕಾರದ ಗ್ರೀನ್ ಸಿಗ್ನಲ್ ಸಿಗಲೇ ಇಲ್ಲ. ಇದಕ್ಕೆ ಮುಖ್ಯ ಕಾರಣ ಯೋಜನಾ ಪ್ರದೇಶದ ಸುತ್ತಮುತ್ತ ಖಾಸಗಿಯವರು ಈ ಪ್ರದೇಶದಲ್ಲಿ ಭಾಗಶಃ ಭೂಮಿಗಳನ್ನು ತಮ್ಮದೆಂದು ವಾದಿಸಿದ್ದು ಪಹಣಿ ಪತ್ರಗಳಲ್ಲೂ ಇವರ ಹೆಸರು ನಮೂದಾಗಿರುವುದು ಮೀನುಗಾರಿಕೆ ಇಲಾಖೆಗೆ ತೊಡಕನ್ನು ಉಂಟು ಮಾಡಿದೆ. ಭೂಮಿ ಅತಿಕ್ರಮಣದಿಂದ ಆತಂಕವೆಂಬಂತೆ ‘ಉದಯವಾಣಿ’ ಇದನ್ನು ಈ ಹಿಂದೆಯೇ ವರದಿ ಮಾಡಿತ್ತು.
ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯೂ ನಡೆದಿತ್ತು ರಾಜ್ಯ ಮೀನುಗಾರಿಕೆ ಇಲಾಖಾ ನಿರ್ದೇಶಕರು, ಸಹ ನಿರ್ದೇಶಕರು ಈಗಾಗಲೇ ಈ ಯೋಜ(ಚ)ನೆಯ ಹಿಂದೆ ಸುಮಾರು 40 ವರ್ಷಗಳಿಂದ ಹೆಣಗಾಡುತ್ತಿರುವ ಮೂಲ್ಕಿ ವಲಯ ಪರ್ಸೀನ್ ಬೋಟ್ ಮಾಲಕರ ಸಂಘದ ಪದಾಧಿಕಾರಿಗಳನ್ನು ಈ ಕುರಿತಾಗಿ ಸಂಪರ್ಕಿಸಿದ್ದಾರೆ.
ಈಗಾಗಲೇ ಬಂದರು ಯೋಜನೆ ಕುರಿತಾಗಿ ಡಾ| ವಿಶಾಲ್ ಜಿಲ್ಲಾಧಿಕಾರಿಯಾಗಿರುವಾಗಲೇ ಸಾರ್ವಜನಿಕ ಅಹವಾಲು ಸ್ವೀಕಾರ ಸಭೆಯೂ ನಡೆದಿತ್ತು. ಆ ಸಭೆಯಲ್ಲೂ ಯೋಜನೆಗೆ ಯಾವೊಬ್ಬರಿಂದಲೂ ಪ್ರತಿರೋಧ ವ್ಯಕ್ತವಾಗಿರಲಿಲ್ಲ. ಜಿಲ್ಲಾಧಿಕಾರಿಯವರೂ ಈ ಯೋಜನೆ ಕಾರ್ಯಗತಗೊಳ್ಳಲು ಯಾವೊಂದೂ ಅಡ್ಡಿ ಆತಂಕಗಳು ಇಲ್ಲ ಎಂಬುದಾಗಿ ಸರಕಾರಕ್ಕೆ ವರದಿ ನೀಡಿದ್ದಾರೆ. ಹಾಗಿದ್ದರೂ ಈಗ ಈ ಯೋಜನೆ ಕಾರ್ಯಗತವಾಗುವ ಹೆಜಮಾಡಿ – ಮೂಲ್ಕಿ ಗಡಿಯ ಅಳಿವೆ ಪ್ರದೇಶದಲ್ಲಿ ಹಕ್ಕನ್ನು ಪ್ರತಿಪಾದಿಸುತ್ತಿರುವವರ ಸಾಲೂ ಹೆಚ್ಚಿರುವುದರಿಂದ ಸರಕಾರವು ಅನುದಾನ ಬಿಡುಗಡೆಗೊಳಿಸಲು ಈ ಕುರಿತಾದ ಸ್ಪಷ್ಟ ವಿವರ ಹಾಗೂ ಜಿಲ್ಲಾಡಳಿತದ ಸೂಚನೆಗೆೆ ಮತ್ತೂಮ್ಮೆ ಕಾಯುತ್ತಿದೆ.
ಪ್ರಸ್ತಾವನೆ ಬರಬೇಕಿದೆ
ಈ ಕುರಿತ ಯೋಜನೆಗೆ ಈಗಾಗಲೇ ಹಸಿರು ನಿಶಾನೆ ನೀಡಲಾಗಿದೆ. ಯೋಜನೆಗೆ ಬೇಕಾದ ಭೂಮಿಯ ಅಳತೆ ಬಳಿಕ ತಮಗೆ ಮೀನುಗಾರಿಕೆ ಇಲಾಖೆಯಿಂದ ಪ್ರಸ್ತಾವನೆ ಬರಬೇಕಿದೆ. ಆ ಬಳಿಕ ಈ ಪ್ರದೇಶವನ್ನು ಯೋಜನೆಗಾಗಿ ಮೀಸಲಿರಿಸಬೇಕಿದೆ.
– ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಉಡುಪಿ ಜಿಲ್ಲಾಧಿಕಾರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Dharwad: 15 ದಿನಗಳಲ್ಲಿ ಸಚಿವ ಸಂಪುಟ ವಿಸ್ತರಣೆ, ನಾನೂ ಕೂಡ ಆಕಾಂಕ್ಷಿ: ವಿನಯ್ ಕುಲಕರ್ಣಿ
Karnataka Govt.,: ರಾಜ್ಯ ಪ್ರವಾಸೋದ್ಯಮ ನೀತಿಗೆ ಸಂಸದ ಕಾಗೇರಿ ಖಂಡನೆ
ಚಂದ್ರಶೇಖರ ಶ್ರೀ ವಿರುದ್ಧ ಕೇಸ್; ಒಕ್ಕಲಿಗರು ತಿರುಗಿ ಬೀಳುತ್ತಾರೆ: ಆರ್.ಅಶೋಕ್ ಎಚ್ಚರಿಕೆ
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
ಬಾಲ್ಯದ ಮಧುರ ನೆನೆಪಿನೊಳಗೆ…: ಆ ಕಾಲ ಹೀಗಿತ್ತು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.