ಹೆಜಮಾಡಿ ಟೋಲ್ ಫ್ಲಾಝಾ
Team Udayavani, Jul 28, 2018, 6:25 AM IST
ಪಡುಬಿದ್ರಿ: ಹೆಜಮಾಡಿಯಲ್ಲಿ ನಿರ್ಮಾಣವಾಗಿರುವ ರಾಷ್ಟ್ರೀಯ ಹೆದ್ದಾರಿ 66ರ ಟೋಲ್ ಫ್ಲಾಝಾದಿಂದ ಸಂತ್ರಸ್ತರಾದ 14 ಕುಟುಂಬಗಳಿಗೆ ನಿರಂತರ ಹೋರಾಟದ ಫಲವಾಗಿ ಹೆಜಮಾಡಿ ಗ್ರಾ. ಪಂ. ಬಳಿಯ ಸರಕಾರಿ ಜಮೀನಿನಲ್ಲಿ ನಿರ್ಮಿತಿ ಕೇಂದ್ರದಿಂದ ಮನೆಗಳು ವಸತಿ ಯೋಜನೆಯಡಿ ನಿರ್ಮಾಣ ಹಂತದಲ್ಲಿದೆ.
ಈ ಕುಟುಂಬಗಳು ರಾಷ್ಟ್ರೀಯ ಹೆದ್ದಾರಿ 66ರ ಶಿವನಗರದಲ್ಲಿ ಕಳೆದ ಸುಮಾರು 20 ವರ್ಷಗಳಿಂದ ವಾಸಿಸುತ್ತಿದ್ದವು. ಈ ಕುಟುಂಬಗಳಲ್ಲಿ ಕೆಲವೇ ಮಂದಿಗಷ್ಟೇ ಹಕ್ಕುಪತ್ರ ಲಭಿಸಿತ್ತು. ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಭೂಸ್ವಾಧೀನವಾದಾಗ ಈ ಕುಟುಂಬಗಳಿಗೆ ಪರಿಹಾರವೂ ದೊರಕಿತ್ತು. ಆದರೆ ಸೂಕ್ತ ನಿವೇಶನ ಇಲ್ಲದೆ ಭೂಸ್ವಾಧೀನಗೊಂಡ ಜಾಗದಲ್ಲಿಯೇ 14 ಕುಟುಂಬಗಳು ವಾಸಿಸುತಿದ್ದವು. ಸೂಕ್ತ ನಿವೇಶನ ನೀಡುವಂತೆ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಹಲವು ಭಾರೀ ಹೋರಾಟ ನಡೆದಿತ್ತು. ಗ್ರಾಮಸಭೆಗಳಲ್ಲೂ ಪ್ರತಿಧ್ವನಿಸಿತ್ತು. ಬಳಿಕ ಸಂತ್ರಸ್ತ ಕುಟುಂಬಗಳಿಗೆ ಪಂಚಾಯತ್ ಬಳಿ ಇರುವ 48 ಸೆಂಟ್ಸ್ ಸರಕಾರಿ ಜಮೀನಿನಲ್ಲಿ ಪ್ರತೀ ಕುಟುಂಬಕ್ಕೂ 2.12 ಸೆಂಟ್ಸ್ ಜಮೀನು ವಿಂಗಡಿಸಿಕೊಡಲಾಗಿತ್ತು.
ಬಸವ ವಸತಿ ಯೋಜನೆಯಲ್ಲಿ ಮನೆ
ಸರಕಾರದ ಬಸವ ವಸತಿ ಯೋಜನೆಯಡಿ ತಲಾ 250 ಚದರ ಅಡಿಗಳ 14 ಮನೆಗಳನ್ನು ಇಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಗುತ್ತಿಗೆದಾರ ನವಯುಗ ಕಂಪೆನಿಯ 9 ಲಕ್ಷ ರೂ. ಅನುದಾನ ಬಳಸಿ ಒಟ್ಟು ರೂ. 31 ಲಕ್ಷ ವೆಚ್ಚದಲ್ಲಿ ಈ ಮನೆಗಳಿಗೆ ನಿರ್ಮಾಣವಾಗುತ್ತಿದೆ. ಇದರಲ್ಲಿ 6 ಪರಿಶಿಷ್ಟ ಜಾತಿ, ಒಂದು ಅಲ್ಪಸಂಖ್ಯಾತ ಹಾಗೂ ಇತರ ವರ್ಗದ 7 ಕುಟುಂಬಗಳಿವೆ. ಬಸವ ವಸತಿ ಯೋಜನೆಯಡಿ ಪರಿಶಿಷ್ಟ ಜಾತಿಯ 6 ಫಲಾನುಭವಿಗಳಿಗೆ ತಲಾ ರೂ. 1.65 ಲಕ್ಷ ಹಾಗೂ ಇತರರಿಗೆ ತಲಾ ರೂ 1.50 ಲಕ್ಷ ಅನುದಾನ ಬಿಡುಗಡೆಯಾಗಲಿದೆ. ಈಗಾಗಲೇ ಪ್ರಥಮ ಹಂತದ ಮೊತ್ತ ಬಿಡುಗಡೆಯಾಗಿದ್ದು, ಬಾಕಿಯಿರುವ ಮೊತ್ತ ಹಂತ ಹಂತವಾಗಿ ಬಿಡುಗಡೆಯಾಗಲಿದೆ. ವಸತಿ ನಿರ್ಮಾಣ ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರಕ್ಕೆ ವಹಿಸಿಕೊಡಲಾಗಿದೆ. ಮುಂದಿನ ಮೂರು ತಿಂಗಳಲ್ಲಿ ಮನೆಗಳು ಪೂರ್ಣಗೊಳ್ಳಲಿವೆ.
ಹೇಗಿರಲಿದೆ ಮನೆ?
ನಿರ್ಮಾಣ ಹಂತದಲ್ಲಿರು ಈ ಮನೆಗಳಲ್ಲಿ ಅಡುಗೆ ಕೋಣೆ, ಹಾಲ್, ಹಾಗೂ ಬೆಡ್‌ರೂಂ ಒಳಗೊಂಡಿದೆ. ಹಿಂದಿನ ಯೋಜನೆ ಪ್ರಕಾರ ಅಡುಗೆ ಕೋಣೆಗೆ ಹೊಂದಿಕೊಂಡು ಶೌಚಾಲಯವೂ ಸೇರಿತ್ತು. ಅಡುಗೆ ಕೋಣೆಯಲ್ಲಿ ಸ್ಥಳಾವಕಾಶ ಕಡಿಮೆಯಾಗುವ ಕಾರಣದಿಂದ ಮನೆ ಹೊರಭಾಗದಲ್ಲಿ ಪ್ರತ್ಯೇಕವಾಗಿ ಶೌಚಾಲಯವನ್ನು ನಿರ್ಮಾಣ ಮಾಡಲಾಗುತ್ತಿದೆ. ಶೌಚಾಲಯ ನಿರ್ಮಾಣಕ್ಕೆ ಪ್ರತ್ಯೇಕವಾಗಿ ಸರಕಾರದಿಂದ ರೂ. 12 ಸಾವಿರ ಲಭ್ಯವಾಗಲಿದ್ದು, ಇದೂ ಫಲಾನುಭವಿಗಳಿಗೆ ದೊರಕಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.