ಟೋಲ್: ಪಡುಬಿದ್ರಿ ವಾಹನ ಸವಾರರಿಗೆ ಮುಕ್ತ
Team Udayavani, Jan 26, 2019, 12:30 AM IST
ಪಡುಬಿದ್ರಿ: ಕರ್ನಾಟಕ ರಕ್ಷಣಾ ವೇದಿಕೆಯು ಹೆಜಮಾಡಿ ಟೋಲ್ ಪ್ಲಾಝಾದಲ್ಲಿ ಪಡುಬಿದ್ರಿ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ವಾಹನಗಳಿಗೆ ಸಂಪೂರ್ಣ ಸುಂಕ ವಿನಾಯಿತಿಯನ್ನು ಆಗ್ರಹಿಸಿ ಪಡುಬಿದ್ರಿಯಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರವು ಇಂದಿಗೆ 19ನೇ ದಿನಕ್ಕೆ ಕಾಲಿರಿಸಿದೆ.
ಇದೇ ವೇಳೆ ಹೆಜಮಾಡಿ ಗ್ರಾಮದ ಸ್ಥಳೀಯರೊಂದಿಗೆ ಇಂದಿನಿಂದ ಪಡುಬಿದ್ರಿಯ ವಾಹನ ಸವಾರರಿಗೆ ಅವರ ವಾಹನದ ನೋಂದಣಿ ಪತ್ರವನ್ನು ತೋರಿಸಿದ್ದಲ್ಲಿ ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಮುಕ್ತವಾಗಿ ಬಿಡಲಾರಂಭಿಸಿದ್ದಾರೆ. ಪ್ರತಿಭಟನೆ ತಾಣಕ್ಕೆ ಶಾಸಕ ಲಾಲಾಜಿ ಮೆಂಡನ್ ಭೇಟಿಯಿತ್ತು ಪ್ರತಿಭಟನಾ ನಿರತರಿಗೆ ಶುಕ್ರವಾರದಂದು ತಮ್ಮ ಬೆಂಬಲ ಘೋಷಿಸಿದರು.
ಪ್ರತಿಭಟನಕಾರರರಿಗೆ ಬೆಂಬಲ ಸೂಚಿಸಿ ಮಾತನಾಡಿದ ಲಾಲಾಜಿ ಮೆಂಡನ್, ಹೆಜಮಾಡಿ ಟೋಲ್‌ಗೇಟ್‌ನಲ್ಲಿ ಕೇವಲ ಹೆಜಮಾಡಿಯ ವಾಹನಗಳನ್ನು ಬಿಡಲಾಗುತ್ತಿದೆ. ಈ ಕುರಿತಾಗಿ ಪಡುಬಿದ್ರಿ, ಪಾದೆಬೆಟ್ಟು ಭಾಗದ ವಾಹನಗಳಿಗೂ ಮುಕ್ತವಾಗಿ, ಯಾವುದೇ ಷರತ್ತಿಲ್ಲದೆ ಬಿಡಬೇಕೆಂಬುದನ್ನು ಜಿಲ್ಲಾಧಿಕಾರಿಗಳಿಗೆ ಮನವರಿಕೆ ಮಾಡಿದ್ದೇನೆ.
ಮೊನ್ನೆಯ ಸಭೆಯಲ್ಲೂ ಅಧಿಕಾರಿಗಳಿರದೇ ಸಭೆಯೇ ಅಪೂರ್ಣವಾಗಿತ್ತು. ಇದು ಕೇವಲ ಕರವೇ ಪ್ರತಿಭಟನೆಯಲ್ಲ. ಉದ್ದೇಶ ಸಾಧನೆಗೆ ಊರಿನ ಜನರೆಲ್ಲರೂ ಒಟ್ಟಾಗಿ ಈ ಹೋರಾಟಕ್ಕೆ ಬೆಂಬಲವನ್ನು ನೀಡಬೇಕಿದೆ. ಎಂದು ಶಾಸಕ ಲಾಲಾಜಿ ಮೆಂಡನ್ ಹೇಳಿದರು.
“ಬೇಡಿಕೆ ಈಡೇರದಿದ್ದಲ್ಲಿ ಮುಂದಿನ
ದಿನಗಳಲ್ಲಿ ಪಡುಬಿದ್ರಿ ಬಂದ್’ತಾವು ಸದ್ಯ ಮುಂದಿನವಾರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಗದೊಂದು ಸಭೆಯನ್ನು ಕರೆಯಲು ಜಿಲ್ಲಾಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಅದರಲ್ಲಿಯೂ ತಮ್ಮ ಸಂಘಟಿತ ಹೋರಾಟಕ್ಕೆ ಸಕಾರಾತ್ಮಕ ಫಲಿತಾಂಶವು ಬಾರದಿದ್ದಲ್ಲಿ ಮುಂದಿನ ದಿನಗಳಲ್ಲಿ ಪಡುಬಿದ್ರಿ ಬಂದ್‌ಗೂ ಕರೆ ನೀಡಲಾಗುವುದು ಎಂದೂ ಶಾಸಕರು ಈ ಸಂದರ್ಭದಲ್ಲಿ ಹೇಳಿದರು.
ಕೀಳಂದಾಜಿಸಿದ್ದಲ್ಲಿ ಅಮರಣಾಂತ ಉಪವಾಸ, ಮುಖ್ಯಮಂತ್ರಿಗೆ ಕರಿಪತಾಕೆ ನಮಗೆ ನ್ಯಾಯ ಬೇಕು. ಜಿಲ್ಲಾಧಿಕಾರಿ ಸಮಸ್ಯೆಯನ್ನು ಬಗೆಹರಿಸಬೇಕಿದೆ. ಮತ್ತಷ್ಟು ನಾವು ಕಾಯಲು ಸಿದ್ಧರಿಲ್ಲ. ಸಾರ್ವಜಿನಕ ಉದ್ದೇಶಕ್ಕಾಗಿ ಪ್ರತಿಭಟನಾನಿರತರಾಗಿರುವ ತಮ್ಮನ್ನು ಕೀಳಂದಾಜಿಸಬೇಡಿರಿ. ವಾರಾಂತ್ಯಕ್ಕೆ ತಮಗೆ ಉತ್ತರವು ಬಾರದಿದ್ದಲ್ಲಿ ಮುಂದಿನ ರವಿವಾರದಿಂದ ಮಗದೊಮ್ಮೆ ಆಮರಣಾಂತ ಉಪವಾಸವನ್ನು ಕೈಗೊಳ್ಳುವುದಾಗಿಯೂ, ಫೆ. 3ರಂದು ಜಿಲ್ಲೆಗೆ ಆಗಮಿಸಲಿರುವ ಸಿಎಂ ಕುಮಾರಸ್ವಾಮಿ ಅವರಿಗೆ ಕಪ್ಪು ಬಾವುಟವನ್ನೂ ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ)ಯು ಪ್ರದರ್ಶಿಸಲಿದೆ ಎಂದು ಕರವೇ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮ್ಮದ್ ಹೇಳಿದರು. ಶಾಸಕರೊಂದಿಗೆ ಕಾಪು ಕ್ಷೇತ್ರ ಬಿಜೆಪಿ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ತಾ. ಪಂ. ಸದಸ್ಯೆ ನೀತಾ ಗುರುರಾಜ್, ಮಿಥುನ್ ಆರ್. ಹೆಗ್ಡೆ, ಪಡುಬಿದ್ರಿ ನಾಗರಿಕ ಸಮಿತಿ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಜ್ ಹೆಜಮಾಡಿ, ದಸಂಸ ನಾಯಕ ಲೋಕೇಶ್ ಕಂಚಿನಡ್ಕ, ಕರವೇ ಕಾಪು ಘಟಕಾಧ್ಯಕ್ಷ ಸೆಯ್ಯದ್ ನಿಝಾಮ್ ಭಾಗವಹಿಸಿದ್ದರು.
ಪಡುಬಿದ್ರಿ ವಾಹನಗಳ ನೋಂದಣಿ ಕಾರ್ಡ್ ತೋರಿಸಿದರೆ ಮುಕ್ತ ಸಂಚಾರ ಈ ನಡುವೆ ಪೊಲೀಸ್ ಮಾಹಿತಿಯೊಂದು ಪಡುಬಿದ್ರಿಯ ಖಾಸಗಿ ವಾಹನಗಳಿಗೆ ಅದರ ನೋಂದಣಿ ದಾಖಲೆಯನ್ನು ಟೋಲ್‌ಗೇಟ್‌ನಲ್ಲಿ ತೋರಿಸಿದ್ದಲ್ಲಿ ಮುಕ್ತವಾಗಿ ಬಿಡಲಾಗುತ್ತಿದೆ ಎಂಬ ಸುದ್ದಿಯನ್ನು ಪ್ರತಿಭಟನಕಾರರಿಗೆ ತಲುಪಿಸಿತ್ತು. ಇದನ್ನು ಪತ್ರಕರ್ತರು ತಮ್ಮ ವಾಹನವನ್ನು ತೆಗೆದುಕೊಂಡು ಹೋಗಿ ಪರಿಶೀಲನೆಯನ್ನೂ ನಡೆಸಿದ್ದಾರೆ. ಇಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್‌ನ ನಡಾÕಲು ಗ್ರಾಮದ ವಾಹನಗಳಿಗಷ್ಟೇ ಸುಂಕ ವಿನಾಯಿತಿಯನ್ನು ನವಯುಗ ಕಂಪೆನಿಯು ಇದೀಗ ನೀಡುತ್ತಿದ್ದು ಪಡುಬಿದ್ರಿ ಗ್ರಾ. ಪಂ. ವ್ಯಾಪ್ತಿಯ ಪಾದೆಬೆಟ್ಟು ಗ್ರಾಮದ ವಾಹನಗಳಿಗೆ ಈ ವಿನಾಯಿತಿಯು ಸದ್ಯ ಲಭ್ಯವಿಲ್ಲ. ಈ ಕುರಿತಾಗಿ ನವಯುಗ ಟೋಲ್ ಪ್ಲಾಝಾದ ಪ್ರಬಂಧಕರೂ ಪ್ರತಿಕ್ರಿಯೆಗೆ ಲಭ್ಯರಿರಲಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Bengaluru; ಪಾರ್ಕ್ ಗಳಲ್ಲಿ ನಾಯಿ ಮಲ ವಿಸರ್ಜಿಸಿದ್ರೆ ಮಾಲಿಕರಿಗೆ ದಂಡ: ಹೈಕೋರ್ಟ್
BJP Internal Dispute: ಶಾಸಕ ಬಸನಗೌಡ ಯತ್ನಾಳ್ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು
Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ
Train: ಗೋಮಟೇಶ್ವರ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು
Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.