ಹೆಜಮಾಡಿ: ಒಳರಸ್ತೆಗೂ ಸುಂಕ !ನವಯುಗ ಹುನ್ನಾರಕ್ಕೆ ಸ್ಥಳೀಯರಿಂದ ತಡೆ
Team Udayavani, May 1, 2017, 12:28 PM IST
ಪಡುಬಿದ್ರಿ: ಹೆಜಮಾಡಿಯ ರಾಷ್ಟ್ರೀಯ ಹೆದ್ದಾರಿ ಯಲ್ಲಿ ವಾಹನಗಳಿಂದ ಸುಂಕ ಸಂಗ್ರಹ ಮಾಡುತ್ತಿರುವ ನವಯುಗ್ ಕಂಪೆನಿ ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಹೆದ್ದಾರಿಗೆ ಸಮಾನಾಂತರವಾಗಿರುವ ಹೆಜಮಾಡಿ ಒಳರಸ್ತೆ(ಹಳೇ ಎಂಬಿಸಿ ರಸ್ತೆ)ಗೂ ರವಿವಾರ ಗೇಟ್ ಅಳವಡಿ ಸಲು ಹೊರಟಿದೆ. ಆದರೆ ತತ್‌ಕ್ಷಣ ಚುರುಕಾದ ಸ್ಥಳೀಯರು ಈ ಯತ್ನವನ್ನು ತಡೆದಿದ್ದಾರೆ.
ಹಿಂದೆ ಹೆದ್ದಾರಿಯಲ್ಲಿ ಗೇಟ್ ಅಳವಡಿಸುವಾಗಲೇ ಸ್ಥಳೀಯರು ಮತ್ತು ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಹೆದ್ದಾರಿ ಕಾಮಗಾರಿ ಪೂರ್ಣಗೊಳಿಸದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಉಡುಪಿ ಜಿಲ್ಲೆಯ ವಾಹನಗಳಿಗೆ ಸಂಪೂರ್ಣ ವಿನಾಯಿತಿ ಘೋಷಿಸ ಲಾಗಿತ್ತು. ಕಳೆದ ವಾರ ಉಡುಪಿ ಜಿಲ್ಲೆಯ ವಾಹನಗಳಿಗೆ ಟೋಲ್ ಸಂಗ್ರಹಕ್ಕೆ ಅಣಿಯಾಗಿದ್ದರೂ ಪ್ರತಿ ಭಟನೆಗೆ ಹೆದರಿ ಆರಂಭಿಸಿರಲಿಲ್ಲ. ಇದೀಗ ನವಯುಗ್ ಕಂಪೆನಿಯ ಕಣ್ಣು ಒಳರಸ್ತೆಯಲ್ಲಿ ಸಾಗುವ ವಾಹನಗಳ ಮೇಲೆ ಬಿದ್ದಿದೆ !
ಪೂರ್ವಮಾಹಿತಿ ನೀಡದೆ ರವಿ ವಾರ ಹೆಜಮಾಡಿ ದಾಬಾ ಬಳಿ ಒಳರಸ್ತೆಗೆ ಟೋಲ್ ಅಳವಡಿಸಲು ಕಾಮಗಾರಿ ಆರಂಭಿಸಿದ ತತ್‌ಕ್ಷಣ ಹೆಜಮಾಡಿ ಗ್ರಾ.ಪಂ. ಉಪಾಧ್ಯಕ್ಷ ಸುಧಾಕರ ಕರ್ಕೇರ, ಸದಸ್ಯ ಕಬೀರ್, ಹೋರಾಟ ಸಮಿತಿಯ ಅಧ್ಯಕ್ಷ ಗುಲಾಮ್ ಮೊಹಮ್ಮದ್ ಆಗಮಿಸಿ ಕಾಮಗಾರಿಗೆ ತಡೆ ಮಾಡಿದ್ದಾರೆ.
ಕಂಪೆನಿ ನಡೆಯನ್ನು ರಾಜ್ಯ ಪಂಚಾಯತ್ ಸದಸ್ಯರ ಒಕ್ಕೂಟದ ಉಪಾಧ್ಯಕ್ಷ ಡಾ| ದೇವಿಪ್ರಸಾದ ಶೆಟ್ಟಿ ಖಂಡಿಸಿದ್ದು, ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಮಂಗಳವಾರ ಪ್ರತಿಭಟನೆ
ಹೆಜಮಾಡಿ ಟೋಲ್ ವಿರೋಧಿ ಹೋರಾಟ ಸಮಿತಿಯು ಸಾರ್ವಜ ನಿಕರು ಮತ್ತು ವಿವಿಧ ಸಂಘ- ಸಂಸ್ಥೆಗಳೊಂದಿಗೆ ಮಂಗಳವಾರ ಬೆಳಗ್ಗೆ 10.30ಕ್ಕೆ ಟೋಲ್‌ಗೇಟ್ ಬಳಿ ಪ್ರತಿಭಟನೆ ನಡೆಸಲಿದೆ ಎಂದು ಹೋರಾಟ ಸಮಿತಿಯ ಅಧ್ಯಕ್ಷ ಗುಲಾಮ್ ಮೊಹಮ್ಮದ್ ತಿಳಿಸಿದ್ದಾರೆ. ಕಾನೂನುಬಾಹಿರವಾಗಿ ಕಾಮಗಾರಿ ಆರಂಭಿಸಿದ ನವಯುಗ್ ಕಂಪೆನಿ ವಿರುದ್ಧ ಮೊಕದ್ದಮೆ ದಾಖಲಿಸುವಂತೆಯೂ ಅವರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!
Aishwarya Rai ಖುಷಿಗಿಂತ ಬೇರೇನು ಬೇಕು?: ಮಾಜಿ ಪ್ರೇಮಿ ಸಲ್ಮಾನ್
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
Shakti scheme; ಪುರುಷರಿಗೆ ಉಚಿತ ಪ್ರಯಾಣ ಸೌಲಭ್ಯ ಇಲ್ಲ: ರಾಮಲಿಂಗಾರೆಡ್ಡಿ
CBSE: ಶೇ.15 ಪಠ್ಯಕ್ರಮ ಕಡಿತ, ತೆರೆದ ಪುಸ್ತಕ ಮಾದರಿ ಪರೀಕ್ಷೆ ಇಲ್ಲ: ಸಿಬಿಎಸ್‌ಇ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.