“ಚುನಾವಣ ಸಿಬಂದಿಗಾಗಿ ಹೆಲಿಕಾಪ್ಟರ್ ಆ್ಯಂಬುಲೆನ್ಸ್’
Team Udayavani, Apr 1, 2019, 6:30 AM IST
ಕುಂದಾಪುರ: ಚುನಾವಣಾ ಸಿಬಂದಿಯ ಆರೋಗ್ಯದ ಕುರಿತು ಚುನಾವಣೆ ಆಯೋಗ ವಿಶೇಷ ಕಾಳಜಿ ವಹಿಸಿದ್ದು ಈ ಬಾರಿ ಚುನಾವಣೆ ಕರ್ತವ್ಯ ದಲ್ಲಿ ಭಾಗವಹಿಸುವ ಸಿಬಂದಿಗಳಿಗೆ ವಿಮೆ ಮಾಡಿಸಲಾಗಿದೆ. ವಿಭಾಗ ಮಟ್ಟಕ್ಕೆ ಒಂದರಂತೆ ಏರ್ (ಹೆಲಿಕಾಪ್ಟರ್) ಆ್ಯಂಬು ಲೆನ್ಸ್ ನಿಯೋಜಿಸಲಾಗಿದೆ ಎಂದು ಕುಂದಾಪುರ ಉಪವಿಭಾಗದ ಸಹಾಯ ಕಮಿಷನರ್ ಡಾ| ಮಧುಕೇಶ್ವರ್ ಹೇಳಿದರು.
ಅವರು ರವಿವಾರ ಇಲ್ಲಿನ ಜೂನಿಯರ್ ಕಾಲೇಜಿನಲ್ಲಿ ಮತಗಟ್ಟೆ ಅಧಿಕಾರಿಗಳು ಸೇರಿದಂತೆ ಸಿಬಂದಿಗೆ ನಡೆದ ಚುನಾವಣಾ ತರಬೇತಿಯಲ್ಲಿ ಮಾತನಾಡಿದರು.
ಅಂಚೆ ಮತ ಸೌಲಭ್ಯ ಬಳಸಿಕೊಳ್ಳಿ. ಚುನಾವಣ ಕರ್ತವ್ಯವನ್ನು ಪಾರ ದರ್ಶಕವಾಗಿ, ಪ್ರಾಮಾಣಿಕವಾಗಿ, ವಿಶ್ವಾಸಾರ್ಹವಾಗಿ ನಡೆಸಿ ಎಂದರು.
1,220 ಸಿಬಂದಿಗೆ ತರಬೇತಿ ನೀಡಲಾಯಿತು. ಆಯೋಗದ ಸೂಚನೆ
ಯಂತೆ ಸಿಬಂದಿಗೆ ಆರೋಗ್ಯ ಇಲಾಖೆ ವತಿಯಿಂದ ಪ್ರಥಮ ಚಿಕಿತ್ಸೆ ತರಬೇತಿಯನ್ನು ಕೂಡ ನೀಡಲಾಯಿತು. ಇದಕಾಗಿ ಆರೋಗ್ಯ ಇಲಾಖೆ ಯಿಂದ ವಿವಿಧ ಆಸ್ಪತ್ರೆಗಳ ವೈದ್ಯರನ್ನು ನಿಯೋಜಿಸಲಾಗಿತ್ತು.
ತರಬೇತಿ ನೋಡಲ್ ಅಧಿಕಾರಿ ಉಡುಪಿ ಜಿಲ್ಲಾ ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ರಾಜ್, ತಹಶೀಲ್ದಾರ್ ವಿಜಯೇಂದ್ರ ಭಾಡ್ಕರ್, ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಕಾಮತ್, ತಾಲೂಕು ಆರೋಗ್ಯಾಧಿಕಾರಿ ಡಾ| ನಾಗಭೂಷಣ್ ಉಡುಪ, ಚುನಾವಣ ಉಪತಹಶೀಲ್ದಾರ್ ಎನ್.ಕೆ. ರಾಮಣ್ಣ ನಾಡಿಗ್ ಮೊದಲಾದವರಿದ್ದರು. 13 ಮಂದಿ ತರಬೇತಿ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಅಪ್ರಾಪ್ತ ವಯಸ್ಕಳ ಜತೆ ಸಂಪರ್ಕ; ಮದುವೆಯಾಗುವುದಾಗಿ ಮೋಸ; 20 ವರ್ಷ ಶಿಕ್ಷೆ
ಕರಾವಳಿಯಲ್ಲಿ ಕಾಶ್ಮೀರಿ ಕೇಸರಿ ಬೆಳೆದ ಟೆಕ್ಕಿಗಳು; ಹೊಸ ಪ್ರಯೋಗದಲ್ಲಿ ಮೊದಲ ಯಶಸ್ಸು !
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
ಆನ್ಲೈನ್ನಲ್ಲಿ ಅಧಿಕ ಲಾಭಾಂಶದ ಆಮಿಷ: ಬ್ಯಾಂಕ್ ಮ್ಯಾನೇಜರ್ಗೆ ಲಕ್ಷಾಂತರ ರೂ. ವಂಚನೆ
ಸಿಎಂ ಕ್ಷಮೆಯಾಚಿಸಲಿ ರಾಘವೇಂದ್ರ ಆಗ್ರಹ
MUST WATCH
ಹೊಸ ಸೇರ್ಪಡೆ
Assembly Election: ಮಹಾರಾಷ್ಟ್ರ ಗೆಲ್ಲಲು 10 ಗ್ಯಾರಂಟಿಗಳ ಕೊಟ್ಟ ʼಮಹಾಯುತಿʼ!
By Election: ಮುಖ್ಯಮಂತ್ರಿ ಗರ್ವದ ಸೊಕ್ಕು ಮುರಿಯಬೇಕು: ಎಚ್.ಡಿ.ದೇವೇಗೌಡ ಗುಡುಗು
Super App: ರೈಲು ಬುಕಿಂಗ್, ಟ್ರ್ಯಾಕ್ಗೆ ‘’ಸೂಪರ್ಆ್ಯಪ್’: ಮುಂದಿನ ತಿಂಗಳು ಬಿಡುಗಡೆ
Kambala: ಪೆಟಾ ಪಿಐಎಲ್; ವಿಚಾರಣೆ ನ.12ಕ್ಕೆ ಮುಂದೂಡಿದ ಹೈಕೋರ್ಟ್
MUDA Case: ಕೇವಲ 14 ಸೈಟ್ಗಾಗಿ ನಾನು ರಾಜಕಾರಣ ಮಾಡಬೇಕಾ?: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.