ಕೆಲಸ ಮಾಡಿಕೊಂಡು ಓದಿದ ಸಾಧಕ ಸೃಜನ್
Team Udayavani, May 20, 2018, 6:20 AM IST
ಕುಂದಾಪುರ: ಹೆಮ್ಮಾಡಿ ಜನತಾ ಹೈಸ್ಕೂಲ್‌ನ ವಿದ್ಯಾರ್ಥಿ ಸೃಜನ್ ಕುಲಾಲ್ ರಜೆಯ ಸಮಯದಲ್ಲಿ ದುಡಿಮೆ ಮಾಡಿಕೊಂಡು ಕಷ್ಟಪಟ್ಟು ವಿದ್ಯಾಭ್ಯಾಸ ನಡೆಸಿದವನು. ಫಲಿತಾಂಶವಾಗಿ ಎಸೆಸೆಲ್ಸಿಯಲ್ಲಿ 603 ಅಂಕ ಪಡೆದು ಶಾಲೆಗೆ, ಊರಿಗೆ ಕೀರ್ತಿ ತಂದಿದ್ದಾನೆ.
ಚಿಕ್ಕ ಪ್ರಾಯದಲ್ಲೇ ತಂದೆಯನ್ನು ಕಳೆದುಕೊಂಡ ಸೃಜನ್‌ಗೆ ಕಲಿಕೆಯಲ್ಲಿ ಎಳವೆಯಿಂದಲೇ ಅತೀವ ಆಸಕ್ತಿ. ಮನೆಯಲ್ಲಿ ತೀರಾ ಬಡತನ. ತಾಯಿ ಸರೋಜಾ ಕುಲಾಲ್ (ದೂರವಾಣಿ: 8971466910) ಕುಂದಾಪುರದಲ್ಲಿ ಟೈಲರಿಂಗ್ ಮಾಡಿಕೊಂಡಿದ್ದು, ಇಬ್ಬರು ಮಕ್ಕಳನ್ನು ಓದಿಸುತ್ತಿದ್ದಾರೆ. ಪಂಚಾಯತ್ ಅನುದಾನದಲ್ಲಿ ಹೆಮ್ಮಾಡಿಯಲ್ಲಿ ಮನೆಯೊಂದನ್ನು ಕಟ್ಟಿಕೊಂಡಿದ್ದಾರೆ.
ಮನೆಯ ಕೆಲಸದ ಜತೆಗೆ ರಜೆ ಸಮಯದಲ್ಲೆಲ್ಲ ಸೃಜನ್ ವಾಹನದಲ್ಲಿ ಜ್ಯೂಸ್ ಸರಬರಾಜು ಕೆಲಸ ಮಾಡುತ್ತಿದ್ದ. ಎಸೆಸೆಲ್ಸಿ ಫಲಿತಾಂಶದ ದಿನವೂ ಕೆಲಸಕ್ಕೆ ಹೋಗಿದ್ದು, ಸ್ನೇಹಿತರ ಮೂಲಕ ಅಂಕ ತಿಳಿದುಕೊಂಡಿದ್ದ. ಓದಲು ರಜೆ ಇದ್ದಾಗಲೂ ಕೆಲಸಕ್ಕೆ ಹೋಗುತ್ತಿದ್ದ ಎಂದು ಮನೆಯವರು ಹೇಳುತ್ತಾರೆ.
ಗರಿಷ್ಠ ಅಂಕ
ಈ ವರ್ಷ ಸುವರ್ಣ ಮಹೋತ್ಸವ ಸಂಭ್ರಮ ವನ್ನಾಚರಿಸಿದ ಹೆಮ್ಮಾಡಿ ಸರಕಾರಿ ಪ್ರೌಢಶಾಲೆಯ ಇತಿಹಾಸದಲ್ಲಿಯೇ ಮೊದಲ ಬಾರಿಗೆ ವಿದ್ಯಾರ್ಥಿಯೊಬ್ಬನಿಗೆ 600 ಕ್ಕಿಂತ ಅಧಿಕ ಅಂಕ ಸಿಕ್ಕಿದೆ.
ವಿಜ್ಞಾನ ಆಸಕ್ತಿ
ತಾಯಿ, ಅಣ್ಣ ಸಹಕಾರ ನೀಡಿದ್ದಾರೆ. ವಿಜ್ಞಾನ ವಿಷಯದಲ್ಲಿ ಆಸಕ್ತಿಯಿದ್ದು, ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ದಾಖಲಾತಿಗಾಗಿ ಅರ್ಜಿ ಸಲ್ಲಿಸಿದ್ದೇನೆ.
– ಸೃಜನ್ ಕುಲಾಲ್
ಯಶೋಗಾಥೆ ತಿಳಿಸಿ
ಹತ್ತಾರು ಕೊರತೆಗಳ ಮಧ್ಯೆ ಪರೀಕ್ಷೆ ಯನ್ನು ಗೆದ್ದು ಸ್ಫೂರ್ತಿಯಾದವರು ಹಲವರಿದ್ದಾರೆ. ಎಸೆಸೆಲ್ಸಿ ಪರೀಕ್ಷೆಯಲ್ಲಿ ಹೀಗೆಯೇ ನಿಮ್ಮ ಸುತ್ತಮುತ್ತ ಕಷ್ಟದ ಕಲ್ಲು ಮುಳ್ಳುಗಳ ಮಧ್ಯೆಯೇ ಮಹತ್ತರ ಸಾಧನೆ ಮಾಡಿದ್ದವರಿದ್ದರೆ ಅವರ ದೂರವಾಣಿ ಸಂಖ್ಯೆ, ಹೆಸರು ತಿಳಿಸಿ. ನಾವು ಅವರ ಬಗ್ಗೆ ಪ್ರಕಟಿಸುತ್ತೇವೆ, ಉಳಿದವರಿಗೂ ಸ್ಫೂರ್ತಿಯಾಗಲಿ.
ನಮ್ಮ ವಾಟ್ಸಪ್ ಸಂಖ್ಯೆ
99641 69554
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ
Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!
Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್ ಎಚ್ಚರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.