ಹೆಮ್ಮಾಡಿ ಶಾಲೆ: ಗಮನಸೆಳೆದ ಮಕ್ಕಳ ಆಹಾರ ಮೇಳ
Team Udayavani, Apr 11, 2019, 6:30 AM IST
ಕುಂದಾಪುರ: ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲವನ್ನು ವೃದ್ಧಿಸುವ ಸದುದ್ದೇಶದಿಂದ ಹೆಮ್ಮಾಡಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ ಮಕ್ಕಳ ಆಹಾರ ಮೇಳ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಯಿತು.
ಆಹಾರ ಮೇಳ, ಸಂತೆ, ಕರಕುಶಲ ವಸ್ತು ಪ್ರದರ್ಶನ, ವಿಜ್ಞಾನ ಮೇಳದಲ್ಲಿ ಖುಷಿ- ಖುಷಿಯಿಂದಲೇ ಪಾಲ್ಗೊಂಡ ಮಕ್ಕಳು ಪಠ್ಯದ ಹೊರತಾದ ಹೊಸತೊಂದು ಅನುಭವವನ್ನು ಪಡೆದುಕೊಂಡರು.
ಶಿಕ್ಷಕರ ಮಾರ್ಗದರ್ಶನ
ಪ್ರತಿ ದಿನ ತರಗತಿಯಲ್ಲಿ ಕುಳಿತು ಪಾಠ ಪ್ರವಚನಕ್ಕಷ್ಟೇ ಸೀಮಿತವಾಗಿದ್ದ ಮಕ್ಕಳು ತಾವೇ ಕೈಯಾರೆ ತಯಾರಿಸಿದ ಆಹಾರ ಖಾದ್ಯಗಳನ್ನು ಮಾರಾಟ ಮಾಡುತ್ತಿದ್ದರು. ಆಹಾರ ಮೇಳಕ್ಕೆ ಬಂದ ಗ್ರಾಹಕರ ಮನವೊಲಿಸಿ ತಾವು ತಯಾರಿಸಿದ ತಿಂಡಿ – ತಿನಿಸುಗಳನ್ನು ಮಾರಾಟ ಮಾಡಿದ ಮಂದಹಾಸ ಕಾಣಿಸಿತು. ಬೆಳಗ್ಗೆ ಬೇಗ ಬಂದು ಶಾಲೆಯಲ್ಲೇ ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಹಾಗೂ ಅಡುಗೆ ಸಿಬಂದಿ ಮಾರ್ಗದರ್ಶನ ವಿದ್ಯಾರ್ಥಿಗಳಿಗಿತ್ತು.
ಗ್ರಾಹಕರಿಗೆ, ವಿದ್ಯಾರ್ಥಿಗಳ ಪೋಷಕರಿಗಾಗಿ ಕರಕುಶಲ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಮಾದರಿಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಶಿಕ್ಷಕಿಯರ ಮಾರ್ಗದರ್ಶನದಲ್ಲಿ ತಯಾರಿ ಸಿದ ವಿದ್ಯಾರ್ಥಿಗಳೇ ತಯಾರಿಸಿದ ಕರಕುಶಲ ವಸ್ತುಗಳು ನೋಡುಗರನ್ನು ಆಕರ್ಷಿಸಿದವು.
ಗಮನಸೆಳೆದ ಮಿನಿ ಸಂತೆ
ಆಹಾರ ಮೇಳವು ಒಂದು ರೀತಿಯಲ್ಲಿ ವಾರದ ಸಂತೆಯಂತೆ ಕಂಡು ಬಂತು. ದಿನಸಿ ವಸ್ತುಗಳ ಖರೀದಿಗೆ ರಿಯಾಯತಿ ದರಕ್ಕಾಗಿ ವಿದ್ಯಾರ್ಥಿಗಳು ಹಾಗೂ ಗ್ರಾಹಕರ ಮಧ್ಯೆ ಭಾರೀ ಚರ್ಚೆಯೇ ನಡೆಯಿತು. ಮೆಣಸು, ಕೊತ್ತಂಬರಿ, ಹುಳಿ, ಬೆಳ್ಳುಳ್ಳಿ, ಈರುಳ್ಳಿ, ಜೀರಿಗೆ, ಮೆಂತೆ, ಕಾಳುಮೆಣಸು ಸೇರಿದಂತೆ ಹಲವು ದಿನಸಿ ವಸ್ತುಗಳನ್ನು ಖರೀದಿಸಲು ಗ್ರಾಹಕರು ಮುಗಿಬಿದ್ದರು.
ಪ್ರಾಪಂಚಿಕ ಜ್ಞಾನದ ಅರಿವು
ಮಕ್ಕಳಲ್ಲಿ ವ್ಯಾವಹಾರಿಕ ಜ್ಞಾನ, ವ್ಯಾಪಾರ ಕೌಶಲವನ್ನು ಕಲಿಸುವ ಉದ್ದೇಶದಿಂದ ಈ ಆಹಾರ ಮೇಳವನ್ನು ಆಯೋಜಿಸಲಾಗಿದೆ. ಮಕ್ಕಳು ತಾವೇ ತಯಾರಿಸಿದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದ್ದಾರೆ. ಸಹ ಶಿಕ್ಷಕಿಯರು, ಶಾಲಾಭಿವೃದ್ಧಿ ಸಮಿತಿ, ಹಳೆ ವಿದ್ಯಾರ್ಥಿಗಳು ಹಾಗೂ ಮಕ್ಕಳ ಪೋಷಕರು ಆಹಾರ ಮೇಳಕ್ಕೆ ಸಹಕಾರ ನೀಡಿದ್ದಾರೆ.
-ದಿವಾಕರ್, ಶಾಲಾ ಮುಖ್ಯೋಪಾಧ್ಯಾಯರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.