ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಇನ್ನು ಕಡ್ಡಾಯ!
ಎಪ್ರಿಲ್‌ನಿಂದ ನೋಂದಣಿಯಾದ ಹೊಸ ವಾಹನಗಳಿಗೆ ಅನ್ವಯ ; ನಕಲಿ ನಂಬರ್ ಪ್ಲೇಟ್, ವಾಹನ ಕಳವಿಗೆ ಬೀಳಲಿದೆ ಬ್ರೇಕ್
Team Udayavani, Jul 18, 2019, 5:36 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಕಳೆದುಹೋದ ವಾಹನಗಳನ್ನು ಪತ್ತೆಹಚ್ಚಲು ಸುಲಭವಾಗಿಸಲು ಹಾಗೂ ವಾಹನದ ಮಾಹಿತಿ ತತ್‌ಕ್ಷಣ ಇಲಾಖೆಗೆ ಲಭ್ಯ ವಾಗಲು ಕೇಂದ್ರ ಸರಕಾರವು ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಕಡ್ಡಾಯ ಮಾಡಿದ್ದು, ಕೆಲ ಗೊಂದಲಗಳ ಮಧ್ಯೆಯೂ ನಿಧಾನವಾಗಿ ಅನುಷ್ಠಾನವಾಗುತ್ತಿದೆ.
ಆದೇಶದ ಅನ್ವಯ ಎಪ್ರಿಲ್ 2019ರಿಂದ ನೋಂದಣಿಯಾದ ಎಲ್ಲ ಹೊಸ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಿ ಕೊಳ್ಳಲಿದೆ. 2019ರ ಎಪ್ರಿಲ್‌ನಿಂದ ಜೂನ್‌ವರೆಗೆ ದ.ಕ. ಜಿಲ್ಲೆಯಲ್ಲಿ 7,102 ದ್ವಿಚಕ್ರ, 1,902 ಕಾರುಗಳು ಸೇರಿದಂತೆ ಒಟ್ಟು 9,827 ಹೊಸ ವಾಹನಗಳು ನೋಂದಣಿಯಾಗಿವೆ. ಉಡುಪಿ ಜಿಲ್ಲೆಯಲ್ಲಿ 4,567 ದ್ವಿಚಕ್ರ, 1136 ಕಾರುಗಳು ಸೇರಿದಂತೆ ಒಟ್ಟು 5,853 ವಾಹನಗಳು ನೋಂದಣಿಗೊಂಡಿವೆ. ಬಹುತೇಕ ಎಲ್ಲ ವಾಹನಗಳು ಈ ನಿಯಮವನ್ನು ಪಾಲಿಸುತ್ತಿದ್ದು, ಶೀಫÅದಲ್ಲೇ ಇದು ಕಡ್ಡಾಯವಾಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಎಲ್ಲ ಹೊಸ ವಾಹನಗಳಿಗೂ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳೊಂದಿಗೆ ಪೂರ್ವಸಿದ್ಧಗೊಳಿಸಲಿದೆ.
ರಾಜ್ಯ ಸಾರಿಗೆ ಇಲಾಖೆಯು ಕೇಂದ್ರ ಸರಕಾರ ನೀಡಿರುವ ಗಡುವಿನೊಳಗೆ ಎಲ್ಲ ವಾಹನಗಳಿಗೆ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ ಒದಗಿಸುವುದೇ ಇದರ ಉದ್ದೇಶ.
ಹಳೆಯ ವಾಹನಗಳಿಗೂ ಅಳವಡಿಕೆ ಚಿಂತನೆ
ಹೊಸ ವಾಹನಗಳಿಗೆ ಈ ಪದ್ಧತಿಯನ್ನು ಅಳವಡಿಸುವುದು ಸುಲಭ. ಆದರೆ ರಾಜ್ಯದಲ್ಲಿ 2 ಕೋಟಿಗೂ ಅಧಿಕ ಸಂಖ್ಯೆಯಲ್ಲಿರುವ ಹಳೆಯ ವಾಹನಗಳಿಗೆ ಇದನ್ನು ಅಳವಡಿಸುವುದು ಸಾಮಾನ್ಯ ಕೆಲಸವೇನಲ್ಲ. ಇದರ ಅನುಷ್ಠಾನ ಸಹಿತ ಹಲವಾರು ವಿಧಾನಗಳು ಇನ್ನೂ ಕಾರ್ಯರೂಪಗೊಂಡಿಲ್ಲ. ಆ ಕಾರಣಕ್ಕಾಗಿ ಪ್ರಥಮ ಹಂತದಲ್ಲಿ ಎಪ್ರಿಲ್‌ನಿಂದ ನೋಂದಣಿಯಾದ ಹೊಸ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್‌ಗಳನ್ನು ಅಳವಡಿಸಲಾಗುತ್ತದೆ. ಬಳಿಕ ಹಳೆಯ ವಾಹನಗಳಿಗೆ ಅಳವಡಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್‌ಗಳನ್ನು ವಾಹನ ತಯಾರಕರು ಎ. 1ರಿಂದ ಅಥವಾ ಅನಂತರ ತಯಾರಿಸಲಾದ ವಾಹನಗಳ ಮೂಲಕ ತಮ್ಮ ವಿತರಕರು ಮತ್ತು ಮಾರಾಟಗಾರರು ಅಂತಹ ನೋಂದಣಿಗೆ ಗುರುತು ಹಾಕಬೇಕು ಎಂದು ಸೂಚಿಸಿದೆ. ಈ ಪ್ಲೇಟ್‌ಗಳನ್ನು ಒದಗಿಸಲು ವಿಫಲವಾದಲ್ಲಿ ಅದು ವಾಹನದ ಮೇಲೆ ಪರಿಣಾಮ ಬೀರಲಿದೆ.
ಲಾಭ ಏನು?
ಹೆಚ್ಚಿನ ಸುರಕ್ಷಾ ನೋಂದಣಿ ಫಲಕವು ವಾಹನವನ್ನು ಕಾಪಾಡುವುದರಲ್ಲಿ ಸಹಾಯ ಮಾಡುತ್ತದೆ ಮತ್ತು ಕಳೆದುಹೋದ ಅಥವಾ ಕಳವಾದ ವಾಹನವನ್ನು ಪತ್ತೆಹಚ್ಚಲು ಸುಲಭ ವಾಗುತ್ತದೆ. ಹೊಸ ವಾಹನಗಳಿಗೆ ಉತ್ಪಾದಕರೇ ಎಚ್‌ಎಸ್‌ಆರ್‌ಪಿ ಅಳವಡಿಸಬೇಕು ಹಾಗೂ ಹಳೆಯ ವಾಹನಗಳಿಗೆ ಡೀಲರ್‌ಗಳು ವಾಹನ ಉತ್ಪಾದಕರಿಂದಲೇ ಎಚ್‌ಎಸ್‌ಆರ್‌ಪಿ ಪಡೆದು ಅಳವಡಿಸಬೇಕು.
ನಂಬರ್ ಪ್ಲೇಟ್ ವಿಶೇಷತೆ ಏನು?
ದೇಶಾದ್ಯಂತ ಒಂದೇ ವಿನ್ಯಾಸ ಹೊಂದಿರುವ ಅಲ್ಯುಮಿನಿಯಂನಿಂದ ತಯಾರಿಸಿದ ಪ್ಲೇಟ್ ಇದಾಗಿದ್ದು, ವಾಹನಗಳ ನೋಂದಣಿ ಸಂಖ್ಯೆ ಜತೆಗೆ ಪ್ರತಿ ಪ್ಲೇಟ್‌ನಲ್ಲಿಯೂ 7 ಅಂಕಿಗಳ ವಿಶಿಷ್ಟ ಲೇಸರ್ ಕೋಡ್ ಇರುತ್ತದೆ. ಈ ಕೋಡ್ ಸಾರಿಗೆ ಇಲಾಖೆಯ ವಾಹನ್ ಆ್ಯಪ್‌ನಲ್ಲಿ ದಾಖಲಾಗುತ್ತದೆ.
ನಂಬರ್ ಪ್ಲೇಟ್‌ನಲ್ಲಿ ಕ್ರೋಮಿಯಂನಿಂದ ಮಾಡಲಾಗಿರುವ ಚಕ್ರದ ಗುರುತು, ಎಂಜಿನ್, ಚಾಸಿ ನಂಬರ್ ಸೇರಿದಂತೆ ಐಎನ್‌ಡಿ ಎಂಬ ಅಕ್ಷರಗಳನ್ನು ಮುದ್ರಿಸಲಾಗಿರುತ್ತದೆ. ಅಲ್ಲದೇ ವಾಹನ ಸಂಖ್ಯೆಯ ಮೇಲೆ 45 ಡಿಗ್ರಿ ಕೋನದಲ್ಲಿ ಇಂಡಿಯಾ ಎಂದು ಬರೆಯಲಾಗಿದೆ.
ವಿಶೇಷತೆ
1ನೋಂದಣಿ ಸಂಖ್ಯೆ, ಶಾಶ್ವತ ಸಂಖ್ಯೆ ಜೋಡಣೆ
2 ಪ್ಲೇಟ್ ತೆಗೆಯಲು ಆಗದೆ ಇರುವ ಸ್ನ್ಯಾಪ್‌ಲಾಕ್ ವ್ಯವಸ್ಥೆ
3ಮಾರಾಟವಾಗುವ ರಿಜಿಸ್ಟ್ರೇಷನ್ ಪ್ಲೇಟ್ ಕುರಿತು ಉತ್ಪಾದಕರು ದಾಖಲೆ ಇಟ್ಟುಕೊಳ್ಳುವುದು ಕಡ್ಡಾಯ
4ನಂಬರ್ ಪ್ಲೇಟ್‌ನಲ್ಲಿ ಕನಿಷ್ಠ 10 ಸಂಖ್ಯೆಯ ಶಾಶ್ವತ ಗುರುತು ಸಂಖ್ಯೆ
5ಚಕ್ರದ ಹೋಲೋಗ್ರಾಂ (ಪ್ರತಿಫಲಿಸುವ ಗುರುತು) ಹಾಗೂ ನೀಲಿ ಬಣ್ಣದಲ್ಲಿ ಇಂಡಿಯಾ ಎಂದು ನಮೂದು (ಹಾಟ್ ಸ್ಟಾಂಪಿಂಗ್)
ಪತ್ತೆಹಚ್ಚಲು ಸುಲಭ
ಈ ನಂಬರ್ ಪ್ಲೇಟ್‌ನಲ್ಲಿ ಸ್ನ್ಯಾಪ್ ಲಾಕ್ ಅಳವಡಿಸಲಾಗಿದ್ದು ಮರುಬಳಕೆ ಮಾಡಲು ಸಾಧ್ಯವಿಲ್ಲ. ಒಂದು ವೇಳೆ ತೆಗೆಯಲು ಹೋಗಿ ಏನಾದರೂ ಅಚಾತುರ್ಯ ನಡೆದರೆ ನೇರವಾಗಿ ಆರ್‌ಟಿಒ ಕಚೇರಿಗೆ ಹೋಗಿ ಹೊಸ ಪ್ಲೇಟ್ ಬದಲಾಯಿಸಬೇಕಾಗುತ್ತದೆ.
ಇದರಲ್ಲಿರುವ ಲೇಸರ್ ಕೋಡ್‌ಗಳನ್ನು ಪೊಲೀಸರು, ಲೇಸರ್ ಉಪಕರಣದಿಂದ ಸ್ಕ್ಯಾನ್ ಮಾಡಿದಾಗ, ವಾಹನದ ನಂಬರ್ ಪ್ಲೇಟ್ ಆ ವಾಹನಧ್ದೋ ಅಥವಾ ಬೇರೆ ವಾಹನಧ್ದೋ ಎನ್ನುವುದನ್ನು ಪತ್ತೆಹಚ್ಚಲು ಸುಲಭವಾಗುತ್ತದೆ.
ಸಂಪೂರ್ಣ ಮಾಹಿತಿ ಲಭ್ಯತೆ
ದೇಶಾದ್ಯಂತ ಎಪ್ರಿಲ್ 1ರಿಂದ ಈ ಆದೇಶವನ್ನು ಪಾಲಿಸಬೇಕೆಂಬ ಆದೇಶ ಬಂದಿದೆ. ಒಂದು ಬಾರಿ ಅಳವಡಿಸಿದ ಬಳಿಕ ತೆಗೆಯುವುದು ಅಸಾಧ್ಯವಾಗ ಲಿದೆ. ಇದರಿಂದ ವಾಹನಗಳ ಗುರುತು ಸಹಿತ ಸಂಪೂರ್ಣ ಮಾಹಿತಿ ಇಲಾಖೆಗೆ ತತ್‌ಕ್ಷಣ ದಲ್ಲಿ ಲಭ್ಯವಾಗಲಿದೆ.
-ರಾಮಕೃಷ್ಣ, ಪ್ರಾದೇಶಿಕ ಸಾರಿಗೆ ಅಧಿಕಾರಿ, ಉಡುಪಿ ಜಿಲ್ಲೆ
-ಪುನೀತ್ ಸಾಲ್ಯಾನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.