ಉಡುಪಿ ತಾಲೂಕಿಗೆ ಅತ್ಯಧಿಕ ಕಡತ ವಿಲೇವಾರಿಯ ಹೆಗ್ಗಳಿಕೆ
Team Udayavani, Apr 14, 2021, 9:30 AM IST
ಸಾಂದರ್ಭಿಕ ಚಿತ್ರ
ಉಡುಪಿ: ಕೃಷಿ ಭೂಮಿಯನ್ನು ಕೃಷಿಯೇತರ ಭೂಮಿ ಆಗಿ ಪರಿವರ್ತಿಸಲು ವರ್ಷಗಟ್ಟಲೆ ವಿಳಂಬಕ್ಕೆ ತಡೆ ಹಾಗೂ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಜಾರಿಗೆ ತಂದ ಅಫಿದವಿತ್ ಆಧಾರಿತ ಆನ್‌ಲೈನ್ ಭೂ ಪರಿವರ್ತನೆ ಪ್ರಕ್ರಿಯೆಯಲ್ಲಿ ರಾಜ್ಯದಲ್ಲಿ ಅತ್ಯಧಿಕ ಕಡತಗಳನ್ನು ವಿಲೇವಾರಿ ಮಾಡಿರುವ ಹೆಗ್ಗಳಿಕೆಗೆ ಉಡುಪಿ ಜಿಲ್ಲೆ ಪಾತ್ರವಾಗಿದೆ.
ಹಿಂದೆ ಅರ್ಜಿ ಸಲ್ಲಿಕೆಯ ಅನಂತರ ಭೂ ಪರಿವರ್ತನೆಗೆ ಕನಿಷ್ಠ ಆರೇಳು ತಿಂಗಳು ಬೇಕಾಗುತ್ತಿತ್ತು. 20ರಿಂದ 25 ದಾಖಲೆ ಪತ್ರ ಸಲ್ಲಿಕೆ ಜತೆಗೆ ಹಲವಾರು ಕಚೇರಿಗಳಿಗೆ ಅಲೆದಾಡಬೇಕಾಗುತ್ತಿತ್ತು. ಇದನ್ನು ತಪ್ಪಿಸಲು 2019ರಲ್ಲಿ ರಾಜ್ಯ ಸರಕಾರ ಅಫಿದವಿತ್ ಆಧಾರಿತ ಆನ್‌ಲೈನ್ ಭೂ ಪರಿವರ್ತನೆ ಜಾರಿಗೆ ತಂದಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 1,15,228 ಅರ್ಜಿಗಳು ಸಲ್ಲಿಕೆಯಾಗಿದ್ದು, 36,626 ವಿಲೇವಾರಿಯಾಗಿವೆ. 24,876 ಅರ್ಜಿಗಳು ತಿರಸ್ಕೃತಗೊಂಡಿದ್ದು, 53,726 ವಿವಿಧ ಹಂತಗಳಲ್ಲಿ ಬಾಕಿ ಇವೆ.
ಅಧಿಕ ಕಡತ ವಿಲೇವಾರಿ :
ಉಡುಪಿ ಜಿಲ್ಲೆಯಲ್ಲಿ 8,594 ಅರ್ಜಿಗಳ ಸಲ್ಲಿಕೆಯಾಗಿದ್ದು, ಅತ್ಯಧಿಕ 4,635 ವಿಲೇವಾರಿ ಆಗಿವೆ. 841 ತಿರಸ್ಕೃತಗೊಂಡಿವೆ. ಉಳಿದವು ವಿವಿಧ ಹಂತಗಳಲ್ಲಿ ಬಾಕಿ ಇವೆ. ದ.ಕ. ಜಿಲ್ಲೆಯಲ್ಲಿ 9,140 ಅರ್ಜಿಗಳು ಸಲ್ಲಿಕೆಯಾಗಿದ್ದು, 3,225ನ್ನು ವಿಲೇವಾರಿ ಮಾಡಲಾಗಿದೆ. 899 ಅರ್ಜಿಗಳು ತಿರಸ್ಕೃತಗೊಂಡಿದ್ದು, ಉಳಿದ ಅರ್ಜಿಗಳು ವಿವಿಧ ವಿಭಾಗದಲ್ಲಿ ಬಾಕಿ ಇವೆ. ಬೆಂಗಳೂರು ಗ್ರಾಮಾಂತರದಲ್ಲಿ 5,492 ಅರ್ಜಿ ಸಲ್ಲಿಕೆಯಾಗಿದ್ದು, 1,295 ಮಾತ್ರ ವಿಲೇವಾರಿಯಾಗಿವೆ.
ಮಧ್ಯವರ್ತಿಗಳು ಬೇಕಿಲ್ಲ :
ಅರ್ಜಿದಾರರು ಭೂ ಪರಿವರ್ತನೆಗೆ ಆನ್‌ಲೈನ್ ಮೂಲಕ ಅಥವಾ landrecords.karnataka.gov.in ನಲ್ಲಿ Citizen login for revenue service link affidevit based cinversion module ಲಿಂಕ್‌ನ ಮೂಲಕ ತಾವೇ ಅಕೌಂಟ್ ಮತ್ತು ಲಾಗಿನ್ ಐಡಿ ಕ್ರಿಯೇಟ್ ಮಾಡಿ ಅರ್ಜಿ ಸಲ್ಲಿಸಬೇಕು. ದಾಖಲೆ ಪರಿಶೀಲನೆ ಬಳಿಕ ಜಿಲ್ಲಾಧಿಕಾರಿಗಳು ಹೊರಡಿಸುವ ಭೂ ಪರಿವರ್ತನಾ ಆದೇಶ ಅಥವಾ ಹಿಂಬರಹವನ್ನು ಅರ್ಜಿದಾರರು ಸ್ವತಃ ತಾವೇ ಇಲಾಖೆಯ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳ ಬಹುದು.
ಕುಂದಾಪುರ ಮುಂಚೂಣಿ :
ಉಡುಪಿ ತಾಲೂಕಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಭೂ ಪರಿವರ್ತನೆ ಅರ್ಜಿ ಸಲ್ಲಿಕೆಯಾಗಿದ್ದರೂ ಕಡತ ವಿಲೇವಾರಿಯಲ್ಲಿ ಕುಂದಾಪುರ ತಾಲೂಕು ಮಂಚೂಣಿಯಲ್ಲಿದೆ.
ತಾಲೂಕು ಅರ್ಜಿ ಸಲ್ಲಿಕೆ ವಿಲೇವಾರಿ
ಉಡುಪಿ 1,651 1081
ಕುಂದಾಪುರ 1,899 527
ಕಾರ್ಕಳ 1,211 723
ಬೈಂದೂರು 903 507
ಬ್ರಹ್ಮಾವರ 1,321 789
ಕಾಪು 1,361 748
ಹೆಬ್ರಿ 248 160
ದ.ಕ.ದಲ್ಲಿ ಬಂಟ್ವಾಳ ಮುಂದೆ :
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು ತಾಲೂಕಿನಲ್ಲಿ ಅಧಿಕ ಅರ್ಜಿ ಸಲ್ಲಿಕೆಯಾದರೂ ಬಂಟ್ವಾಳ ತಾಲೂಕಿನಲ್ಲಿ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿವೆ.
ತಾಲೂಕು ಅರ್ಜಿ ಸಲ್ಲಿಕೆ ವಿಲೇವಾರಿ
ಮಂಗಳೂರು 4,078 744
ಬಂಟ್ವಾಳ 2,250 1,167
ಬೆಳ್ತಂಗಡಿ 986 524
ಪುತ್ತೂರು 696 261
ಸುಳ್ಯ 132 71
ಮೂಡುಬಿದಿರೆ 714 332
ಕಡಬ 284 126
ಶೇ.75ಕ್ಕೆ ಏರಿಸುವ ಗುರಿ :
ಭೂ ಪರಿವರ್ತನೆ ಪ್ರಕ್ರಿಯೆಯನ್ನು ತ್ವರಿತಗತಿಯಲ್ಲಿ ಮಾಡುವಂತೆ ಕಳೆದೆರಡು ತಿಂಗಳಿನಿಂದ ಆಗಾಗ ಅಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ. ಇಲ್ಲಿಯವರೆಗೆ ತಿಂಗಳಿಗೆ ಶೇ. 30ರಷ್ಟು ಅರ್ಜಿಗಳು ವಿಲೇವಾರಿಯಾಗುತ್ತಿದ್ದರೆ ಇದೀಗ ಶೇ. 60ರಷ್ಟು ವಿಲೇವಾರಿಯಾಗುತ್ತಿವೆ. ಇದನ್ನು ಶೇ.75ಕ್ಕೆ ಏರಿಸುವ ಗುರಿ ಇದೆ.– ಜಿ. ಜಗದೀಶ್, ಉಡುಪಿ ಜಿಲ್ಲಾಧಿಕಾರಿ
ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ
Karkala: ಬಾವಿಗೆ ಬಿದ್ದು ವ್ಯಕ್ತಿ ಸಾವು; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ ಪಡೆ
Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.