ಹೈವೋಲ್ಟೇಜ್ ಹೈಮಾಸ್ಟ್ ದೀಪ ಢಮಾರ್!
Team Udayavani, Jun 11, 2018, 6:35 AM IST
ಉಡುಪಿ: ಉಡುಪಿ ನಗರಸಭೆಯ ಅಧೀನದಲ್ಲಿ ನಿರ್ವಹಣೆಯಲ್ಲಿರುವ ಉಡುಪಿ ಸಿಟಿ ಬಸ್ಸು ನಿಲ್ದಾಣದ ಹೈಮಾಸ್ಟ್ ದೀಪವು ಕೆಟ್ಟು ಹೋಗಿ ಸುಮಾರು ಒಂದು ತಿಂಗಳ ಬಳಿಕ ಅಂದರೆ ಜೂನ್ ಮೊದಲ ವಾರದಲ್ಲಿ ದುರಸ್ತಿ ಕಾರ್ಯವಾಗಿ ದೀಪ ಉರಿದಿತ್ತು. ಸಿಟಿ ಬಸ್ಸು ನಿಲ್ದಾಣಕ್ಕೆ ಕತ್ತಲೆಯಿಂದ ಮುಕ್ತಿ ಸಿಕ್ಕಿತು ಎನ್ನುವಷ್ಟರಲ್ಲಿ ಮತ್ತೆ ಬೆಳಕು ಮಾಯವಾಗಿ ಕತ್ತಲು ಆವರಿಸಿದೆ.
ರಾತ್ರಿ ಬೆಳಕಿಗೆಂದು ಸಿಟಿ ಬಸ್ಸು ನಿಲ್ದಾಣದ ಮಧ್ಯಭಾಗದಲ್ಲಿ ನಗರಸಭೆ ಹೈಮಾಸ್ಟ್ ವಿದ್ಯುತ್ ಕಂಬ ಅಳವಡಿಸಿತ್ತು. ಇದರಲ್ಲಿ 6 ಉರಿಯುವ ವಿದ್ಯುತ್ ದೀಪಗಳಿದೆ. ಉರಿಯುತ್ತಿದ್ದ ದೀಪಗಳು ಕ್ರಮೇಣ ಒಂದೊಂದೇ ಕೈಕೊಡುತ್ತಾ ಕೊನೆಗೆ ಯಾವ ದೀಪವೂ ಬೆಳಕು ಕೊಡುತ್ತಿರಲಿಲ್ಲ. ಈ ಬಗ್ಗೆ ನಗರಸಭೆಗೆ ಸಾರ್ವಜನಿಕ ದೂರು ಹೋಗಿತ್ತು. ರಾತ್ರಿ ಬೆಳಕಿಲ್ಲದೆ ನಿಲ್ದಾಣದಲ್ಲಿ ಬಸ್ಸು ಕಾಯುವ ಪ್ರಯಾಣಿಕರಿಗೆ ತುಂಬಾ ತೊಂದರೆಯಾಗುತ್ತಿದ್ದವು. ದುರಸ್ತಿ ಕಾರ್ಯ ನಡೆದರೂ ಇನ್ನೂ ಸಮರ್ಪಕವಾಗಿ ಬೆಳಕಿನ ವ್ಯವಸ್ಥೆ ಆಗಿಲ್ಲ.
ಜೂನ್ ಮೊದಲ ವಾರ ಹೈಮಾಸ್ಟ್ ದೀಪದ ದುರಸ್ತಿ ಕಾರ್ಯಗಳು ಮುಗಿದು ಎಲ್ಲ ದೀಪಗಳೂ ಬೆಳಗಿದ್ದವು. ಕೆಲ ದಿನದಲ್ಲೇ ಮತ್ತೆ ಕತ್ತಲು. ಉರಿಯುತ್ತಿದ್ದ ಎಲ್ಲ ದೀಪಗಳು ಢಮಾರ್ ಆಗಿದ್ದವು. ಏನಾಯಿತೆಂದು ನಗರಸಭೆ ಎಂಜಿನಿಯರ್ ಅವರಲ್ಲಿ ಕೇಳಿದಾಗ, ದುರಸ್ತಿ ಕಾರ್ಯ ಮುಗಿದು ದೀಪಗಳು ಉರಿಯುತ್ತಲಿದ್ದವು. ಆದರೆ ಒಂದು ದಿನ ವಿದ್ಯುತ್ ಹೈವೋಲ್ಟೆàಜ್‌ನಿಂದಾಗಿ ಹೈಮಾಸ್ಟ್ ಮತ್ತೆ ಹಾಳಾಯಿತು ಎಂದಿದ್ದಾರೆ. ಮೂರ್‍ನಾಲ್ಕು ದಿನದೊಳಗೆ ಸರಿಪಡಿಸಲಾಗುವುದು ಎಂದು ಎಂಜಿನಿಯರ್ ಭರವಸೆ ನೀಡಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.