ರಾ.ಹೆ. ಬದಿ ಲಾರಿ ಪಾರ್ಕಿಂಗ್: ಪ್ರವಾಸಿಗರಿಗೆ ಕಿರಿಕಿರಿ
Team Udayavani, Jul 20, 2017, 5:10 AM IST
ಮರವಂತೆ(ಉಪ್ಪುಂದ): ಪರಶುರಾಮನ ಸೃಷ್ಟಿಯ ಕರಾವಳಿ ತೀರದ ಪ್ರಕೃತಿಯ ವೈಶಿಷ್ಟವನ್ನು ಪುಷ್ಟೀಕರಿಸುವುದು ಮರವಂತೆಯ ಕಡಲ ತೀರ.
ಹಸಿರು ತೋರಣಗಳ ನಡುವೆ ಪೂರ್ವದಲ್ಲಿ ಝುಳು ಝುಳು ನಾದಗೈಯುವ ಸೌರ್ಪಣಿಕಾ ನದಿ ತೀರವಿದ್ದರೆ, ಪಶ್ಚಿಮದಲ್ಲಿ ಭೋರ್ಗರೆಯುವ ಸುಂದರ ಕಡಲ ಕಿನಾರೆ. ಇದರ ನಡುವೆ ರಾ.ಹೆದ್ದಾರಿ 66 ಪ್ರಕೃತಿಯ ಸೌಂದರ್ಯಕ್ಕೆ ಮತ್ತಷ್ಟು ಮೆರುಗು ಹೆಚ್ಚಿಸಿ ವಿಶ್ವ ಪ್ರಸಿದ್ಧಿ ಪಡೆದುಕೊಂಡಿದೆ. ಆದರೆ ಸಮುದ್ರ ತೀರಕ್ಕೆ ಅಡ್ಡಲಾಗಿ ನಿಲ್ಲುವ ಸಾಲು-ಸಾಲು ವಾಹನಗಳಿಂದಾಗಿ ಪ್ರವಾಸಿಗರಿಗೆ ಪ್ರಕೃತಿಯ ಸೌಂದರ್ಯ ಸವಿಯಲು ಮಾತ್ರ ಸಾಧ್ಯವಾಗುತ್ತಿಲ್ಲ.
ಸಮುದ್ರ ತೀರಕ್ಕೆ ಅಡ್ಡಲಾಗಿ ನಿಲ್ಲುವ ಲಾರಿಗಳು
ರಾ. ಹೆದ್ದಾರಿಯಲ್ಲಿ ಸಾಗುವ ಲಾರಿಗಳು, ಕಂಟೈನರ್, ಮೀನಿನ ವಾಹನಗಳನ್ನು ರಸ್ತೆಯ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲಿಸುತ್ತಾರೆ. ಮೀನು ಸಾಗಾಟದ ವಾಹನಗಳು ನಿಲ್ಲುವುದರಿಂದ ಮೀನಿನ ನೀರು ಚೆಲ್ಲಿ ಸುತ್ತಮುತ್ತಲಿನ ಪರಿಸರವೆಲ್ಲ ದುರ್ನಾತ ಬೀರುತ್ತದೆ. ಇದರಿಂದ ಪ್ರಯಾಣಿಕ ಹಾಗೂ ಪ್ರವಾಸಿಗರಿಗೆ ಸಮಸ್ಯೆಯಾಗುವುದರ ಜತೆಗೆ ಕಿರಿಕಿರಿ ಉಂಟುಮಾಡುತ್ತವೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ
ಸುಮಾರು ಒಂದುವರೆ ಕಿ.ಮೀ. ಮರವಂತೆ – ತ್ರಾಸಿ ಬೀಚ್‌ನಲ್ಲಿ ಪ್ರವಾಸೋದ್ಯಮ ಇಲಾಖೆಯ ಕುರುಡುತನದಿಂದಾಗಿ ಅಭಿವೃದ್ಧಿ ಮರೀಚಿಕೆಯಾಗಿದೆ. ವಾಹನಗಳ ನಿಲುಗಡೆಗೆ ಯಾವುದೇ ಪಾರ್ಕಿಂಗ್ ವ್ಯವಸ್ಥೆ ಇಲ್ಲವೇ ಇಲ್ಲ, ಪ್ರವಾಸಿಗರು ಸೇರಿದಂತೆ ಇತರೆ ವಾಹನಗಳನ್ನು ರಾ. ಹೆದ್ದಾರಿ ಬದಿಯಲ್ಲಿ ನಿಲ್ಲಿಸುವುದು ಅನಿವಾರ್ಯವಾಗಿದೆ.
ಇಲಾಖೆಯ ಸ್ಪಂದನೆ
ಗಲ್ಫ್ ಕನ್ನಡಿಗ ಬಿ.ಜಿ. ಮೋಹನ ದಾಸ್ ಅವರ ಸಾಮಾಜಿಕ ಕಾಳಜಿಯಿಂದಾಗಿ ಮರವಂತೆ ಬೀಚ್‌ನ ರಸ್ತೆ ಬದಿಯಲ್ಲಿ ನಿಲ್ಲುವ ವಾಹನಗಳಿಂದ ಪ್ರವಾಸಿಗರಿಗಾಗುವ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಉನ್ನತ ಪೊಲೀಸ್ ಅಧಿಕಾರಿಗಳಿಗೆ ನಿರಂತರವಾಗಿ ಪತ್ರ, ಇ-ಮೇಲ್ ಮೂಲಕ ಮನವಿ ಮಾಡುತ್ತಿದರು. ಇದಕ್ಕೆ ಪ್ರತಿಫಲವೆಂಬಂತೆ ಪೊಲೀಸ್ ಇಲಾಖೆ ಇವರ ಸಾಮಾಜಿಕ ಕಳಕಳಿಯನ್ನು ಗಂಭೀರವಾಗಿ ಪರಿಗಣಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದು, ಸ್ಥಳೀಯ ಪೊಲೀಸ್ ಠಾಣೆ ಕ್ರಮ ಕೈಗೊಳ್ಳುವ ಕುರಿತು ಬಿ.ಜಿ. ಅವರಿಗೆ ಲಿಖತ ಪತ್ರದ ಮೂಲಕ ಭರವಸೆ ನೀಡಿದೆ.
ವಿಶ್ವವಿಖ್ಯಾತ ತಾಣವಾಗಿರುವ ಮರವಂತೆ ಬೀಚ್‌ನ ಅಭಿವೃದ್ಧಿ ಇದುವರೆಗೂ ಸಾಧ್ಯವಾಗದಿರುವುದು ದುರಂತವೆ ಸರಿ. ಬೀಚ್‌ನ ಸರ್ವತೋಮುಖ ಅಭಿವೃದ್ಧಿಗೆ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆಗಳ ಜತೆ ಜನಪ್ರತಿನಿಧಿಗಳು ಹಾಗೂ ಸಾಮಾಜಿಕ ಕಾಳಜಿವುಳ್ಳ ಬಿ.ಜಿ. ಮೋಹನದಾಸ್ ಅವರಂತಹ ಊರಿನ ನಾಗರಿಕರು ಜತೆಗೂಡಿ ಬೀಚ್ ಸುವ್ಯವಸ್ಥೆ ಹೊಂದುವಂತೆ ಮಾಡಲು ಶ್ರಮಿಸಿದರೆ ಮರವಂತೆ ಬೀಚ್ ವಿಶ್ವದಲ್ಲಿ ಇನ್ನಷ್ಟು ಕಂಗೊಳಿಸಲು ಸಾಧ್ಯವಾಗುತ್ತದೆ ಎಂಬುವುದು ಸಾಮಾನ್ಯ ಜನತೆಯ ಆಶಯವಾಗಿದೆ.
ಕಡಲ ತೀರದ ರಸ್ತೆ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಪ್ರವಾಸಿಗರಿಗೆ ಹಾಗೂ ಪ್ರಯಾಣಿಕರಿಗೆ ತುಂಬ ತೊಂದರೆಯಾಗುತ್ತಿರುವ ಕುರಿತು ಕ್ರಮ ಕೈಗೊಳ್ಳಲು ಉನ್ನತಾಧಿಕಾರಿಗಳಿಗೆ ನಿರಂತರವಾಗಿ ಮನವಿ ಮಾಡುತ್ತಿದ್ದು ಇದೀಗ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಕ್ರಮಕೈಗೊಳ್ಳುವ ಭರವಸೆ ಸಿಕ್ಕಿದೆ.
-ಬಿ.ಜಿ ಮೋಹನ್‌ದಾಸ್, ಗಲ್ಫ್ ಕನ್ನಡಿಗ
ಮರವಂತೆ ಬೀಚ್ ಬದಿಯಲ್ಲಿ ಲಾರಿಗಳನ್ನು ನಿಲ್ಲಿಸದಂತೆ ಸಾಕಷ್ಟು ಕ್ರಮಗಳನ್ನು ಕೈಗೊಂಡಿದ್ದೇವೆ. ಬೀಚ್ ಸುಮಾರು ಒಂದುವರೆ ಕಿ.ಮೀ. ಇರುವುದರಿಂದ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಚತುಷ್ಪಥ ರಸ್ತೆ ಕಾಮಗಾರಿ ಪೂರ್ಣಗೊಂಡಾಗ ಲಾರಿಗಳನ್ನು ನಿಲ್ಲಿಸಲು ಅವಕಾಶ ಸಿಗುವುದಿಲ್ಲ ಆಗ ಸಮಸ್ಯೆಗೆ ಮುಕ್ತಿ ದೊರಕುತ್ತದೆ.
– ಸುಬ್ಬಣ್ಣ , ಠಾಣಾಧಿಕಾರಿ ಗಂಗೊಳ್ಳಿ
– ಕೃಷ್ಣ ಬಿಜೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Meghalaya: ಚರ್ಚ್‌ಗೆ ನುಗ್ಗಿ ಜೈ ಶ್ರೀರಾಮ್ ಘೋಷಣೆ: ಕೇಸು ದಾಖಲು
Honey Trap; ಗುತ್ತಿಗೆದಾರನನ್ನು ಟೀಗೆ ಕರೆದು ಖೆಡ್ಡಾಕ್ಕೆ ಕೆಡವಿದಳು!
Kunigal: ಮರಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿ: ಬೆಸ್ಕಾಂ ನೌಕರರ ಸ್ಥಳದಲ್ಲೇ ಸಾವು
Memorial: ಮನಮೋಹನ್ ಸಿಂಗ್ ಸ್ಮಾರಕಕ್ಕೆ ಜಾಗ ನೀಡಲು ಕೇಂದ್ರ ಸರ್ಕಾರದ ಒಪ್ಪಿಗೆ
Kunigal: ನಾಮಫಲಕಕ್ಕೆ ಬಸ್ ಡಿಕ್ಕಿ, ಪಲ್ಟಿ; ಮಂಗಳೂರು ಮೂಲದ ಚಾಲಕ ಸಾವು; 8 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.