Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

ಹಿಂದೂ ಹಿತರಕ್ಷಣೆ ಸಮಿತಿಯಿಂದ ಉಡುಪಿಯಲ್ಲಿ ಪ್ರತಿಭಟನೆ

Team Udayavani, Dec 5, 2024, 12:20 AM IST

Udupi: ಹಿಂದೂಗಳು ಎಚ್ಚೆತ್ತ ಹೆಬ್ಬಾವುಗಳಂತಾಗಬೇಕು: ಪುತ್ತಿಗೆ ಶ್ರೀ

ಉಡುಪಿ: ಹಿಂದೂಗಳು ಹೆಬ್ಬಾವು ಇದ್ದಂತೆ. ಹೆಬ್ಟಾವು ಒಂದು ಕಡೆ ಮಲಗಿದ್ದರೆ ಅಲ್ಲಿಯೇ ಬಾಕಿ. ಅದರ ಮೇಲೆ ಕಲ್ಲು ಬಿದ್ದ ಅನಂತರವೇ ಎಚ್ಚೆತ್ತುಕೊಳ್ಳುವುದು ಮತ್ತು ಆಗಲೇ ಕಲ್ಲುಹೊಡೆದವರು ಭಯಪಡುವುದು.

ಹಿಂದೂಗಳು ಕೂಡ ಎಚ್ಚೆತ್ತ ಹೆಬ್ಬಾವುಗಳಂತೆ ಆಗಬೇಕು. ಬುಸುಗುಡಲು ಆರಂಭಿಸಿದಾಗ ಮಾತ್ರ ಎಲ್ಲವೂ ಸರಿಯಾಗುವುದು ಎಂದು ಪರ್ಯಾಯ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಹೇಳಿದರು.

ಬಾಂಗ್ಲಾದಲ್ಲಿ ಅಲ್ಪಸಂಖ್ಯಾಕ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಇಸ್ಕಾನ್‌ ಮುಖಂಡರನ್ನು ಬಂಧಿಸಿರುವುದನ್ನು ಖಂಡಿಸಿ ಬುಧವಾರ ಹಿಂದೂ ಹಿತರಕ್ಷಣ ಸಮಿತಿಯಿಂದ ಜೋಡುಕಟ್ಟೆಯಿಂದ ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದ ವರೆಗೂ ಬೃಹತ್‌ ಪ್ರತಿಭಟನ ಮೆರವಣಿ ನಡೆಯಿತು.

ಅನಂತರ ಪಾರ್ಕಿಂಗ್‌ ಪ್ರದೇಶದಲ್ಲಿ ನಡೆದ ಪ್ರತಿಭಟನ ಸಭೆಯಲ್ಲಿ ಶ್ರೀಪಾದರು ಆಶೀರ್ವಚನ ನೀಡಿದರು.

ಭಗವದ್ಗೀತೆ ಎಂದೂ ಹಿಂಸೆಯನ್ನು ಬೋಧಿಸಿಲ್ಲ. ಆದರೆ ಹಿಂಸೆ ನೀಡುವವರಿಗೆ ತಕ್ಕ ಉತ್ತರ ಕೊಡಬೇಕು ಎಂದು ಹೇಳಿದೆ. ಶಾಂತಿ ದೌರ್ಬಲ್ಯದ ಸಂಕೇತವಲ್ಲ. ಶಾಂತಿಗಾಗಿ ಸಂಘರ್ಷ ಮಾಡಬಹುದು. ಹಿಂದೂಗಳಿಗೆ ಭಾರತ ಬಿಟ್ಟರೆ ಬೇರೆ ದೇಶವಿಲ್ಲ. ಹಿಂದೂಗಳಿಗೆ ಹಿಂಸೆಯಾದರೆ ಎಲ್ಲಿಗೆ ಹೋಗಬೇಕು? ಹಿಂದೂಗಳ ಮೇಲಿನ ಆಕ್ರಮಣ, ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸಲೇ ಬೇಕು ಎಂದು ಕರೆ ಕೊಟ್ಟರು.

ಧರ್ಮ ಜಾಗರಣದ ಪ್ರಮುಖರಾದ ರವೀಂದ್ರ ಪುತ್ತೂರು ಮಾತನಾಡಿ, ಬಾಂಗ್ಲಾ ದೇಶಕ್ಕೆ ಸ್ವಾತಂತ್ರ್ಯ ಅನಂತರದಲ್ಲಿ ಭಾರತ ಯಾವೆಲ್ಲ ರೀತಿಯಲ್ಲಿ ಸಹಾಯ ಸಹಕಾರ ನೀಡಿದೆ ಎಂಬುದನ್ನು ವಿವರಿಸಿದರು. ಬಾಂಗ್ಲಾ ಸರಕಾರ ಕೂಡಲೇ ಇಸ್ಕಾನ್‌ ಮುಖ್ಯಸ್ಥರನ್ನು ಬಂಧ ಮುಕ್ತಗೊಳಿಸಬೇಕು. ಹಿಂದೂಗಳ ಮೇಲಿನ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.

ಉಡುಪಿ ಇಸ್ಕಾನ್‌ ಮುಖ್ಯಸ್ಥ ಗೋವಿಂದ ದಾಸ್‌ ಹಾಗೂ ಮಾತಾ ಅಮೃತಾನಂದಮಯಿ ಮಠದ ಕಲ್ಪನಾ ಭಾಸ್ಕರ್‌ ಮಾತನಾಡಿ, ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ಹಲ್ಲೆ, ದೌರ್ಜನ್ಯ ನಿಲ್ಲಬೇಕು ಮತ್ತು ಇಸ್ಕಾನ್‌ ಸಂಸ್ಥೆಯ ಮುಖ್ಯಸ್ಥರನ್ನು ಕೂಡಲೇ ಬಂಧಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಅಯ್ಯಪ್ಪಸ್ವಾಮಿ ಸಂಘಟನೆಯ ಗೋಪಾಲ ಗುರುಸ್ವಾಮಿ, ಜಿಲ್ಲೆಯ ಶಾಸಕರು, ಬಿಜೆಪಿ ಹಾಗೂ ಹಿಂದೂ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು. ಶ್ರೀನಿಧಿ ಹೆಗ್ಡೆ ರಾಷ್ಟ್ರಪತಿಗಳಿಗೆ ಸಲ್ಲಿಸುವ ಮನವಿ ಪತ್ರ ವಾಚನ ಮಾಡಿದರು. ಕುತ್ಯಾರು ಪ್ರಸಾದ್‌ ಶೆಟ್ಟಿ ನಿರೂಪಿಸಿದರು.

ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಜೋಡುಕಟ್ಟೆಯಿಂದ ಶ್ರೀ ಕೃಷ್ಣಮಠದ ಪಾರ್ಕಿಂಗ್‌ ಪ್ರದೇಶದವರೆಗೂ ಬೃಹತ್‌ ಪ್ರತಿಭಟನ ಮೆರವಣಿಗೆ ನಡೆಯಿತು. ಅದಮಾರು ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಮೆರವಣಿಗೆಗೆ ಚಾಲನೆ ನೀಡಿದರು.

ಪೋಸ್ಟ್‌ ಕಾರ್ಡ್‌ ಅಭಿಯಾನ ನಡೆಯಲಿ
ಕಟಪಾಡಿ ಪಡುಕುತ್ಯಾರಿನ ಆನೆಗುಂದಿ ಮಠಾಧೀಶರಾದ ಶ್ರೀ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿ ಅನುಗ್ರಹಿಸಿ, ಹಿಂದೂಗಳು ಜಾತಿ, ಪಕ್ಷ ಬಿಟ್ಟು ಇಂತಹ ವಿಚಾರಗಳಲ್ಲಿ ಹೋರಾಟ ಮಾಡಬೇಕು. ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲುವವರೆಗೂ ಕೇಂದ್ರ ಸರಕಾರ ಬಾಂಗ್ಲದೊಂದಿಗೆ ಯಾವುದೇ ವ್ಯಾಪಾರ, ವಹಿವಾಟು ಮಾಡಕೂಡದು. ಈ ಬಗ್ಗೆ ಪ್ರತಿ ಮನೆಯಿಂದಲೂ ಕೇಂದ್ರ ಸರಕಾರಕ್ಕೆ ಒಂದೊಂದು ಪೋಸ್ಟ್‌ ಕಾರ್ಡ್‌ ಕಳುಹಿಸಿ, ಅಲ್ಲಿನ ಹಿಂದೂಗಳ ರಕ್ಷಣೆಗೆ ಆಗ್ರಹಿಸಬೇಕು.

ಭಾರತದಲ್ಲಿ ಹಿಂದೂಗಳು ಅಲ್ಪಸಂಖ್ಯಾಕರಾದರೆ ನಮಗೂ ಅಪಾಯ ಇದೆ. ಹೀಗಾಗಿ ಹಿಂದೂ ಮಹಿಳೆಯರು ಕನಿಷ್ಠ 4 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಸಲಹೆ ನೀಡಿದರು.

ಟಾಪ್ ನ್ಯೂಸ್

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Vijayapura: ಮಕ್ಕಳ ಕೊಲೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದ ತಾಯಿಗೆ ಜೀವಾವಧಿ ಶಿಕ್ಷೆ

Joshi-rader

Weather: ರಾಜ್ಯದ ಮೂರು ನಗರದಲ್ಲಿ ಹವಾಮಾನ ರಾಡಾರ್‌ ಸ್ಥಾಪನೆ: ಕೇಂದ್ರ ಸಚಿವ ಜೋಶಿ

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Gangolli: ಸಮುದ್ರಕ್ಕೆ ಬಿದ್ದು ಮೀನುಗಾರ ಸಾವು

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Ajit-Car-Accident

Car Crash: ಕಾರು ರೇಸ್‌ ತರಬೇತಿ ವೇಳೆ ನಟ ಅಜಿತ್‌ ಕುಮಾರ್‌ ಕಾರು ಅಪಘಾತ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Udupi: ಜ. 9-15: ಶ್ರೀಕೃಷ್ಣ ಮಠದಲ್ಲಿ ಸಪ್ತೋತ್ಸವ ಸಂಭ್ರಮ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

Malpe: ಹೊಡೆದಾಟ ಪ್ರಕರಣ: ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

10(1

Santhekatte: ಉಡುಪಿಯಿಂದ ಕುಂದಾಪುರ ಕಡೆಗೆ ಸರ್ವಿಸ್‌ ರಸ್ತೆ ಓಪನ್‌

9

Manipal: ಮಣ್ಣಪಳ್ಳ ಕೆರೆ; ಆಕರ್ಷಕ ಜಲಸಿರಿಗೆ ಬೇಕು ಆಸರೆ!

6

Karkala: ಇಳಿಜಾರಿನಲ್ಲಿ ಯು-ಟರ್ನ್; ಅತ್ತೂರು ರಸ್ತೆಯಲ್ಲಿ ಅಪಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Assam: ಕಲ್ಲಿದ್ದಲು ಗಣಿ ಒಳಗೆ ಪ್ರವಾಹ: 3 ಸಾವು, 6 ಕಾರ್ಮಿಕರು ನಾಪತ್ತೆ!

Life threat: Bulletproof glass installed on Salman’s balcony

Life threat: ಸಲ್ಮಾನ್‌ ಮನೆ ಬಾಲ್ಕನಿಗೆ ಬುಲೆಟ್‌ಪ್ರೂಫ್ ಗಾಜು

Pushpa 2: Allu Arjun meets the boy injured in the stampede

Pushpa 2: ಕಾಲ್ತುಳಿತದ ಗಾಯಾಳು ಬಾಲಕನ ಭೇಟಿಯಾದ ಅಲ್ಲು ಅರ್ಜುನ್‌

cr

ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

HD-swamy

ನಿಮ್ಮ ಖೊಟ್ಟಿ ಗ್ಯಾರಂಟಿ ಸರ್ಕಾರದ ಲೂಟಿ ಸಾಕ್ಷಿಗುಡ್ಡೆ ಇಲ್ಲಿದೆ ನೋಡಿ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.