ಹಿರಿಯಡಕ ದೇವಸ್ಥಾನ: ದೀಪದಳಿಗೆ 460 ಕಿ.ಗ್ರಾಂ. ಬೆಳ್ಳಿಯ ಹೊದಿಕೆ
Team Udayavani, Apr 15, 2018, 6:00 AM IST
ಹಿರಿಯಡಕ: ಕರಾವಳಿ ಕರ್ನಾಟಕದ ಆಲಡೆ ಕ್ಷೇತ್ರಗಳ ಪೈಕಿ ಪ್ರಸಿದ್ಧವಾಗಿರುವ ಹಿರಿಯಡಕ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನ 25 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿದ್ದು, ಇದೀಗ ಸುತ್ತುಪೌಳಿಯ ನಿರ್ಮಾಣದೊಂದಿಗೆ 2.5 ಕೋಟಿ ರೂ. ವೆಚ್ಚದಲ್ಲಿ ದೀಪದಳಿಗೆ 460 ಕೆಜಿ ಬೆಳ್ಳಿಯ ಹೊದಿಕೆ ಮಾಡಲಾಗುತ್ತಿದೆ.
1954ರಲ್ಲಿ ವೀರಭದ್ರ ಸ್ವಾಮಿಯ ಗರ್ಭಗುಡಿ ಶಿಲಾಮಯಗೊಂಡಿದ್ದು ಇದೀಗ ಬೆಳ್ಳಿಯ ಹೊದಿಕೆ ಕಾರ್ಯ ಅಂತಿಮ ಹಂತದಲ್ಲಿದೆ. ಅತ್ಯಾಕರ್ಷಕ ಕೆತ್ತನೆ ಹಾಗೂ ದಾರುಶಿಲ್ಪದ ರಚನೆಯಿಂದ ಜನರನ್ನು ಆಕರ್ಷಿಸುತ್ತಿದ್ದು ಎ. 16ರಿಂದ 25ರ ತನಕ ಪುನಃಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ನಾಳೆ ಹೊರೆಕಾಣಿಕೆ ಮೆರವಣಿಗೆ
ಹಿರಿಯಡಕ ಮಹತೋಭಾರ ಶ್ರೀ ವೀರ ಭದ್ರಸ್ವಾಮಿ ದೇವಸ್ಥಾನದಲ್ಲಿ ಎ. 16ರಿಂದ 25ರ ತನಕ ನಡೆಯುವ ಪುನಃ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಅಂಗವಾಗಿ ಎ. 16ರಂದು ಅಪರಾಹ್ನ 3.30ಕ್ಕೆ ಆತ್ರಾಡಿ, ಪುತ್ತಿಗೆ, ಗುಡ್ಡೆಅಂಗಡಿಯಿಂದ ಏಕಕಾಲಕ್ಕೆ ಆಕರ್ಷಕ ಟ್ಯಾಬ್ಲೋ ಹಾಗೂ ಭವ್ಯ ಶೋಭಾ ಯಾತ್ರೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.