ಐತಿಹಾಸಿಕ ವ್ಯಕ್ತಿ ಶ್ರೀವಿಬುಧಪ್ರಿಯತೀರ್ಥರು


Team Udayavani, Jan 12, 2020, 1:04 AM IST

n-37

ಅದಮಾರು ಮಠ ಪ್ರವೇಶಿಸುವಾಗ ಆನೆ ದಂತಗಳಿಂದ ಅಲಂಕೃತಗೊಂಡ ಶ್ರೀವಿಬುಧಪ್ರಿಯತೀರ್ಥರ ಭಾವಚಿತ್ರ.

ಉಡುಪಿ: ಶ್ರೀಕೃಷ್ಣಮಠದಲ್ಲಿ ಪರ್ಯಾಯ ಪೀಠವನ್ನು ಅಲಂಕರಿಸಲಿರುವ ಶ್ರೀಅದಮಾರು ಮಠದ ಪರಂಪರೆಯಲ್ಲಿ 29ನೆಯವರಾದ, ಕಳೆದ ಶತಮಾನದ ಆರಂಭದಲ್ಲಿ ಮಠವನ್ನು ಸುದೀರ್ಘ‌ ಕಾಲ ಮುನ್ನಡೆಸಿದ ಶ್ರೀವಿಬುಧಪ್ರಿಯತೀರ್ಥರು ಬಹುಆಯಾಮಗಳಲ್ಲಿ ದಾಖಲೆ ಮಾಡಿದವರು.

ಶ್ರೀಗಳ ಬಗ್ಗೆ ಹಲವು ಬಗೆಯ ದಂತಕಥೆಗಳಿವೆ. ಆ ಕಾಲದಲ್ಲಿ ಕಾಮಾರಿ ಮತ್ತು ಗೋಪಾಲ ಎಂಬೆರಡು ಆನೆಗಳಿದ್ದವು. ಅವುಗಳೆಂದರೆ ಸ್ವಾಮಿಗಳಿಗೆ ಪಂಚಪ್ರಾಣ. ತಿನಿಸುಗಳನ್ನು ಅವರೇ ಕೊಡುತ್ತಿದ್ದರು. ಇದೇ ಆನೆಗಳಿಂದ ಶ್ರೀಕೃಷ್ಣಮಠ ಮತ್ತು ಅದಮಾರು ಮಠಗಳ ವಿವಿಧ ಅಭಿವೃದ್ಧಿ ಕೆಲಸಗಳನ್ನು (ತೊಲೆ, ಕಲ್ಲು ಇತ್ಯಾದಿಗಳನ್ನು ಜೋಡಿಸುವುದು) ಮಾಡಿಸಿದ್ದರು. ಹೀಗಾಗಿ ಅವರ ಭಾವಚಿತ್ರಕ್ಕೆ ಆ ಆನೆಗಳ ದಂತದಿಂದ ಅಲಂಕರಿಸಿ ಮಠದ ಎದುರು ಇರಿಸಿದ್ದಾರೆ.

ವಿಬುಧಪ್ರಿಯತೀರ್ಥರಿಗೆ ಪೇಜಾವರ ಮಠದ ಶ್ರೀವಿಶ್ವಮಾನ್ಯ ತೀರ್ಥರು, ಪುತ್ತಿಗೆ ಮಠದ ಶ್ರೀಸುಜ್ಞಾನೇಂದ್ರತೀರ್ಥರು, ಪಲಿ ಮಾರು ಮಠದ ಶ್ರೀರಘು ಮಾನ್ಯತೀರ್ಥರು, ಕಾಣಿಯೂರು ಮಠದ ಶ್ರೀವಿದ್ಯಾಸಮುದ್ರತೀರ್ಥರು, ಭಂಡಾರಕೇರಿ ಮಠದ ಶ್ರೀವಿದ್ಯಾಮಾನ್ಯತೀರ್ಥರು, ಅದಮಾರು ಮಠದ ಶ್ರೀವಿಬುಧಮಾನ್ಯತೀರ್ಥರು ಶಿಷ್ಯರಾಗಿದ್ದರು. ಶ್ರೀವಿದ್ಯಾಮಾನ್ಯರು, ಶ್ರೀವಿಬುಧಮಾನ್ಯರು, ಶ್ರೀರಘುಮಾನ್ಯರಿಗೆ ಸನ್ಯಾಸಾಶ್ರಮ ನೀಡಿದವರೂ ಇವರೇ. ಆಯುರ್ವೇದ ಜ್ಞಾನವೂ ಇವರಿಗೆ ಇತ್ತು.

ಪದ್ಮಾಸನ ಸಿದ್ಧಿ
ಡಾ| ಬನ್ನಂಜೆ ಗೋವಿಂದಾಚಾರ್ಯರು ಹೇಳುವ ಪ್ರಕಾರ ವಾದಿರಾಜಸ್ವಾಮಿಗಳ ಬಳಿಕ ಅಷ್ಟಮಠಗಳಲ್ಲಿ ಅತ್ಯಂತ ಪ್ರಭಾವಿ ಸ್ವಾಮೀಜಿಯಾಗಿದ್ದವರು ಶ್ರೀವಿಬು ಧಪ್ರಿಯತೀರ್ಥರು. ಬ್ರಾಹ್ಮಿà ಮುಹೂರ್ತದಲ್ಲಿ ಎದ್ದು ಶಾಸ್ತ್ರ ಪಾಠಗಳನ್ನು ಪದ್ಮಾಸನದಲ್ಲಿ ಕುಳಿತು ಹೇಳಲು ಶುರುಮಾಡಿದರೆ ಎರಡು ಮೂರು ಗಂಟೆ ಅದೇ ಆಸನದಲ್ಲಿ ನಿರರ್ಗಳವಾಗಿ ಪಾಠ ಮಾಡುತ್ತಿದ್ದರು. ಆಸನವನ್ನು ಬದಲಾಯಿಸುವುದು ಪಾಠ ಮುಗಿಯುವಾಗಲೇ. ಪ್ರವಚನಕ್ಕೂ ಕೂತಾಗಲೂ ಇದೇ ರೀತಿ ಇತ್ತು.

ಘಟಿಕಾಚಲದಲ್ಲಿ ವೃಂದಾವನ
ಜೀವಿತದ ಉತ್ತರಾರ್ಧದಲ್ಲಿ ಆಂಧ್ರಪ್ರದೇಶದ ಘಟಿಕಾಚಲದ ನರಸಿಂಹದೇವರ ಕ್ಷೇತ್ರದಲ್ಲಿ ವಿಶೇಷ ಸೇವೆ ಮಾಡಿದರು. ಅಲ್ಲಿಗೆ ಬ್ರಹ್ಮರಥದಷ್ಟು ದೊಡ್ಡ ರಥವನ್ನು ಸಮರ್ಪಿಸಿದ ಕಾರಣ ಅಲ್ಲಿ ಇವರನ್ನು “ರಥದ ಸ್ವಾಮಿಗಳು’ ಎಂದೇ ಕರೆಯುತ್ತಿದ್ದರು ಎಂದು ಪ್ರಸಕ್ತ ಪೀಠಾಧಿಪತಿ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು ನೆನಪಿಸಿಕೊಳ್ಳುತ್ತಾರೆ.

ತಿರುಪತಿ ದರ್ಶನ ಬಳಿಕ ನಿರ್ಯಾಣ
ವಿಬುಧಪ್ರಿಯತೀರ್ಥರು ತಿರುಪತಿ ಶ್ರೀನಿವಾಸ ದೇವರ ಎದುರು ವಿಷ್ಣುಸಹಸ್ರನಾಮ ಪಾರಾಯಣವನ್ನು ಪೂರ್ಣಗೊಳಿಸಿ ಬೆಟ್ಟದಿಂದ ಕೆಳಗಿಳಿದು ಬರುವಾಗಲೇ ಇಹ ಲೋಕ ತ್ಯಜಿಸಿದರು. ಯಾವಾಗಲೂ ತಿರುಪತಿಯ ದರ್ಶನ ಮಾಡುವಾಗ ಮತ್ತೆ ಬರುತ್ತೇನೆಂದು (ಸ್ನಾತ್‌ನಃ ಪುನಃ ದರ್ಶನಮ್‌) ಹೇಳುವುದಿದೆ. ಅಂದು ಮಾತ್ರ ಹೇಳಿರಲಿಲ್ಲ. ಅವರ ಪಾರ್ಥಿವ ಶರೀರವನ್ನು ಘಟಿಕಾಚಲದಲ್ಲಿ ವೃಂದಾವನ ಮಾಡಲಾಯಿತು. ತಿರುಪತಿಯಲ್ಲಿ ಇಹಲೋಕ ತ್ಯಜಿಸುವಾಗ ಘಟಿಕಾಚಲದಲ್ಲಿದ್ದ ಶ್ರೀವಿದ್ಯಾಮಾನ್ಯತೀರ್ಥರ ಕುತ್ತಿಗೆಯಲ್ಲಿದ್ದ ತುಳಸೀಮಣಿ ಸರ ತುಂಡಾಯಿತಂತೆ. ಅಷ್ಟೂ ಗುರುಶಿಷ್ಯ ಭಾವ ಇವರಿಬ್ಬರಲ್ಲಿತ್ತು ಎಂದು ಶ್ರೀವಿಶ್ವಪ್ರಿಯತೀರ್ಥರು ಹೇಳುತ್ತಾರೆ.

ಹರಿಕಥೆಯಂತಹ ಪಾಠ
ಉಡುಪಿಯವರಲ್ಲದ ಎಳತ್ತೂರು ಕೃಷ್ಣಾಚಾರ್ಯರೆಂಬ ಪ್ರಸಿದ್ಧ ವಿದ್ವಾಂಸರು ಶ್ರೀವಿಬುಧಪ್ರಿಯತೀಥರ ಪಾಂಡಿತ್ಯವನ್ನು ಕಂಡು ದಕ್ಷಿಣ ಭಾರತದ ಅತಿ ಶ್ರೇಷ್ಠ ವಿದ್ವಾಂಸರು ಎನ್ನುತ್ತಿದ್ದರು. ಇವರ ಪಾಠ ಹೊರಗೆ ನಿಂತು ಕೇಳಿ ಅತಿ ಸುಲಭದಲ್ಲಿ ಅರ್ಥವಾಯಿತು ಎಂಬುದಕ್ಕೆ “ಹರಿಕಥೆ’ಯನ್ನು ಕೇಳಿದಂತಾಯಿತು ಎಂದು ಕೃಷ್ಣಾಚಾರ್ಯರು ಹೇಳುತ್ತಿದ್ದರು.

ಶಿಷ್ಯಸಮೂಹ
ಶ್ರೀವಿಬುಧಪ್ರಿಯತೀರ್ಥರು ಬೆಳಗ್ಗೆ ಶ್ರೀಕೃಷ್ಣಮಠ, ರಥಬೀದಿಯಲ್ಲಿ ಪ್ರದಕ್ಷಿಣೆ ಬರುವಾಗ ಸುಮಾರು 300 ವಿದ್ಯಾರ್ಥಿಗಳು ಸ್ತೋತ್ರಗಳನ್ನು ಪಾರಾಯಣ ಮಾಡುತ್ತಿದ್ದರು ಎಂಬ ವಿಷಯವನ್ನು ಊಹಿಸಲೂ ಕಷ್ಟವಾಗುತ್ತದೆ.

ಆಜಾನುಬಾಹು
ವಿಬುಧಪ್ರಿಯರದು ಲೋಕವಿಲಕ್ಷಣ ವ್ಯಕ್ತಿತ್ವ. ಸೊಂಟದ ಕೆಳಗೆ ಅವರ ಕೈ ಬರುತ್ತಿತ್ತು. ಇಂತಹ ಆಜಾನುಬಾಹು ಶರೀರ. ಇದು ಅಪೂರ್ವ ಲಕ್ಷಣ. ಅವರ ಚಿತ್ರವನ್ನು ನಾನು ನೋಡಿದ್ದೆ. ಒಮ್ಮೆ ಯಾವುದೋ ಕಾನೂನು ಕಟ್ಟಳೆ ಪ್ರಯುಕ್ತ ಜೈಲಿಗೆ ಹೋಗಬೇಕಾಗಬಹುದು ಎಂಬ ಸ್ಥಿತಿ ಬಂತು. ಆಗ ಜೈಲಿನಲ್ಲಿ ಹೇಗೆ ನಡೆಸಿಕೊಳ್ಳುತ್ತಾರೆಂಬುದನ್ನು ಕೇಳಿಕೊಂಡ ಸ್ವಾಮೀಜಿ ಅದಮಾರಿಗೆ ಹೋಗಿ ಅಲ್ಲಿ ತೋಟದಲ್ಲಿ ಮಣ್ಣು ಹೊತ್ತು ದೈಹಿಕ ಶ್ರಮಪಟ್ಟರು. ಈ ಮೂಲಕ ಜೈಲಿನ ಯೋಗ ಹೋಗಲಾಡಿಸಿದ ಅವಧೂತ ಚರ್ಯೆ ಅವರದ್ದಾಗಿತ್ತು ಎನ್ನುತ್ತಾರೆ ಡಾ|ಬನ್ನಂಜೆ ಗೋವಿಂದಾಚಾರ್ಯರು.

1,200 ಕಾರ್ಯಕರ್ತರು
ಅದಮಾರು ಮಠದ ಪರ್ಯಾಯದಲ್ಲಿ ಶ್ರೀಕೃಷ್ಣ ಸೇವಾ ಬಳಗ ತೊಡಗಿಸಿಕೊಂಡಿದೆ. ಇದರಲ್ಲಿ ಸುಮಾರು 1,200 ಕಾರ್ಯಕರ್ತರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮಣಿಪುರದ 30, ಕಟ್ಟತ್ತಿಲದ 100, ಮಂಗಳೂರು ಗಾಳ ಕೊಂಕಣಿ ಸಮಾಜದ 100, ಚಾರ ವಿವೇಕಾನಂದ ಯುವವೇದಿಕೆಯ 100, ಕುಚ್ಚಾರು ಕುಡಿಬೈಲು ಶಾಂತಿನಿಕೇತನ ಯುವ ವೃಂದದ 100, ಶೀಂಬ್ರ ನವಚೈತನ್ಯ ಯುವಕ ಮಂಡಲದ 50, ಅಲೆವೂರು ಅಭಿಮಾನ್‌ ಯುವ ಬಳಗದ 50, ನ್ಯಾಯವಾದಿ ಜಯಪ್ರಕಾಶ್‌ ಕೆದಿಲಾಯ ನೇತೃತ್ವದ ಕನ್ನರ್ಪಾಡಿಯ 100, ಮಟ್ಟು ಯುವ ಫ್ರೆಂಡ್ಸ್‌ನ 75 ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರಲ್ಲದೆ ದಿನೇಶ ಪುತ್ರನ್‌, ರಾಘವೇಂದ್ರ ಕಿಣಿ, ಯಶಪಾಲ್‌ ಸುವರ್ಣರ ತಂಡಗಳು ಪ್ರತ್ಯೇಕವಾಗಿ ತೊಡಗಿಸಿಕೊಂಡಿವೆ. ಕಾಲೇಜುಗಳ ಎನ್‌ಎಸ್‌ಎಸ್‌, ಸ್ಕೌಟ್ಸ್‌ ಗೈಡ್ಸ್‌ ತಂಡಗಳೂ ಇವೆ. ವೈಯಕ್ತಿಕವಾಗಿಯೂ ಹೆಸರು ನೋಂದಾಯಿಸಿಕೊಳ್ಳಲು ಬರುತ್ತಿದ್ದಾರೆ.
– ಗೋವಿಂದರಾಜ್‌, ಶ್ರೀಕೃಷ್ಣ ಸೇವಾ ಬಳಗ

 

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

9

Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್‌ ಜಾಮ್‌

8

Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ

7(1

Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ

5(1

Karkala: ಪಾಳು ಬಿದ್ದ ಸರಕಾರಿ ಕಟ್ಟಡಗಳು; ಲಕ್ಷಾಂತರ ಅನುದಾನ ವ್ಯರ್ಥ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.