ದುರಂತ ಆಹ್ವಾನಿಸುವ ಹೊಳಮಕ್ಕಿ ಕಾಲುಸಂಕ
Team Udayavani, Jul 8, 2023, 4:19 PM IST
ಕೊಲ್ಲೂರು: ಜಡ್ಕಲ್ ಗ್ರಾ.ಪಂ. ವ್ಯಾಪ್ತಿಯ ಕಾನಿR ಮುಖ್ಯ ರಸ್ತೆಯಿಂದ ಸಳ್ಕೊಡು ಸಾಗಲು ಹೊಳಮಕ್ಕಿಯಲ್ಲಿ ನಿರ್ಮಿಸಲಾದ ಕಾಲುಸಂಕ ಸಂಪರ್ಕ ಮರದ ದಿಣ್ಣೆ ವ್ಯವಸ್ಥೆಯು ಅಪಾಯಕಾರಿಯಾಗಿದ್ದು, ಹರಿಯುತ್ತಿರುವ ಹೊಳೆ ನೀರಿನ ರಭಸಕ್ಕೆ ಆ ಮಾರ್ಗವಾಗಿ ಸಾಗುವವರು ಆಯತಪ್ಪಿ ನೀರಿಗೆ ಬಿದ್ದಲ್ಲಿ ದುರಂತ ಸಂಭವಿಸುವ ಸಾಧ್ಯತೆ ಇದೆ.
ಪೂರ್ಣಗೊಳ್ಳದ ಕಾಮಗಾರಿ
ಗ್ರಾಮೀಣ ಪ್ರದೇಶದ ಅನೇಕ ಕಡೆ ನಿರ್ಮಾಣಗೊಂಡಿರುವ ಕಾಲು ಸಂಕಗಳು ಆ ಮೂಲಕ ಸಂಚರಿಸುವ ನಿತ್ಯ ಪ್ರಯಾಣಿಕರಿಗೆ ಸಂಪರ್ಕದ ಕೊಂಡಿಯಾಗಬಹುದೆಂಬ ನಿರೀಕ್ಷೆ ಹುಸಿಯಾಗುತ್ತಿದ್ದು, ಬಹುತೇಕ ಕಡೆ ನಿರ್ಮಿಸಲಾದ ಮರದ ದಿಣ್ಣೆ ಕಾಲ್ನಡಿಗೆಯಲ್ಲಿ ಸಾಗುವವರಿಗೆ ಒಂದು ರೀತಿಯ ಭಯ ಹಾಗೂ ಆತಂಕದ ವಾತಾವರಣ ನಿರ್ಮಿಸಿದೆ. ಹೊಳಮಕ್ಕಿಯ ಕಾಲುಸಂಕದಲ್ಲಿ ಕೂಡ ಇದೇ ವಾತಾವರಣವಿದ್ದು, ದುರಂತಕ್ಕೆ ಆಹ್ವಾನಿಸುವಂತಿದೆ.
12 ಮನೆಗಳಿವೆ
ಈ ಭಾಗದಲ್ಲಿ ಸುಮಾರು 200 ಕ್ಕೂ ಮಿಕ್ಕಿ ಜನ ವಾಸವಾಗಿದ್ದಾರೆ. 12 ಮನೆಗಳಿವೆ. ಶಾಲಾ ವಿದ್ಯಾರ್ಥಿಗಳು, ನೌಕರರು, ಕೂಲಿ ಕಾರ್ಮಿಕರು ನಿತ್ಯ ಪ್ರಯಾಣಿಕರು ಸುತ್ತಿ ಬಳಸಿ ಸಾಗುವ ರಸ್ತೆ ದಾರಿಯ ಬದಲು ಕಾಲು ಸಂಕ ಮಾರ್ಗವಾಗಿ ದೆ„ನಂದಿನ ಕೆಲಸ ಕಾರ್ಯಗಳಿಗೆ ಈ ಮಾರ್ಗವನ್ನೇ ಅವಲಂಬಿಸಿದ್ದಾರೆ. ಶಾಲಾ ಮಕ್ಕಳು ಮರದ ದಿಣ್ಣೆಯ ಮೇಲೆ ಸಾಗುವಾಗ ಆಕಸ್ಮಿಕವಾಗಿ ಆಯತಪ್ಪಿದಲ್ಲಿ ಹರಿಯುವ ಮಳೆಯ ನೀರಿನಲ್ಲಿ ಬಿದ್ದು ದುರಂತ ಸಂಭವಿಸುವ ಸಾಧ್ಯತೆ ಇದೆ. ಭದ್ರತೆ ಇಲ್ಲದ ಮರದ ದಿಣ್ಣೆಯ ಮಾರ್ಗವಾಗಿ ಹರಸಾಹಸಪಟ್ಟು ಸಾಗಬೇಕಾಗಿದೆ. ಇದಕ್ಕೊಂದು ಸೂಕ್ತ ಪರಿಹಾರ ಒದಗಿಸುವಲ್ಲಿ ಇಲಾಖೆ ಹಾಗೂ ಗ್ರಾ.ಪಂ ಕ್ರಮಕೈಗೊಳ್ಳಬೇಕೆಂದು ಅಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ. ಈಗಾಗಲೇ ಗ್ರಾ.ಪಂ.ಗೆ ಗ್ರಾಮಸ್ಥರು ಮನವಿ ಸಲ್ಲಿಸಿರುತ್ತಾರೆ.
ಎದುರಾದ ಸಮಸ್ಯೆ ನಿಭಾಯಿಸಲು ಕ್ರಮ ಕೈಗೊಳ್ಳಲಾಗುವುದು. ಕಾಲುಸಂಕದ ಎರಡು ಬದಿಯಲ್ಲಿ ಭದ್ರತೆಯ ನೆಲೆಯಲ್ಲಿ ದುರಂತ ಸಂಭವಿಸದಂತೆ ತಡೆಬೇಲಿ ನಿರ್ಮಿಸಲಾಗುವುದು. ಪೂರ್ಣ ಪ್ರಮಾಣದ ಕಾಮಗಾರಿಗೆ ಅನುದಾನದ ಕೊರತೆ, ಆರ್ಥಿಕ ಸಮಸ್ಯೆ ಎದುರಾಗಿದೆ. ಸಮೀಪದ ಜಾಗದವರೊಡನೆ ಸಂಧಾನದ ಮೂಲಕ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು.
-ವನಜಾಕ್ಷಿ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ಜಡ್ಕಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.