ಪಕ್ಷ ಭೇದ ಮರೆತು ಸಂಭ್ರಮಿಸಿದ ಜನಪ್ರತಿನಿಧಿಗಳು
"ಹೊಳಪು-2019' ನೆನಪುಗಳ ದಿಬ್ಬಣ
Team Udayavani, Dec 29, 2019, 4:08 AM IST
"ಹೊಳಪು-2019' ನೆನಪುಗಳ ದಿಬ್ಬಣ
ಉಡುಪಿ: ಕೋಟತಟ್ಟು ಗ್ರಾ.ಪಂ. ಹಾಗೂ ಡಾ| ಶಿವರಾಮಕಾರಂತರ ಪ್ರತಿಷ್ಠಾನ ವತಿಯಿಂದ ಅವಿಭಜಿತ ದ.ಕ. ಜಿಲ್ಲೆಗಳ ನಗರ ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳ ಜನಪ್ರತಿನಿಧಿಗಳಿಗಾಗಿ ಶನಿವಾರ ಕೋಟ ವಿವೇಕ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ “ಹೊಳಪು-2019′ ನೆನಪುಗಳ ದಿಬ್ಬಣ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಸಂಭ್ರಮಿಸಿದರು.
ಕ್ರೀಡಾಕೂಟದಲ್ಲಿ ಉಡುಪಿ ಹಾಗೂ ದ.ಕ. ಜಿಲ್ಲೆಗಳ ಗ್ರಾ.ಪಂ., ತಾ.ಪಂ., ಜಿ.ಪಂ., ಮಹಾನಗರಪಾಲಿಕೆ, ನಗರ ಸಭೆ, ಪ.ಪಂ. ಗಳ ಒಟ್ಟು 413 ಸ್ಥಳೀಯ ಸಂಸ್ಥೆಗಳ ಸುಮಾರು 9 ಸಾವಿರ ಜನಪ್ರತಿನಿಧಿಗಳು ಓಡಿ, ಆಡಿ ಖುಷಿಪಟ್ಟರು. ಜಿಲ್ಲೆಯ 75 ಮಂದಿ ದೈ.ಶಿ.ಶಿಕ್ಷಕರು ಕ್ರೀಡಾಚಟುವಟಿಕೆಯಲ್ಲಿ ಹಾಗೂ 10ಕ್ಕೂ ಮಂದಿ ಸಾಂಸ್ಕೃತಿಕ ಸ್ಪರ್ಧೆಯ ತೀರ್ಮಾನಕರಾಗಿ ಕಾರ್ಯ ನಿರ್ವಹಿಸಿದರು.
ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಧ್ವಜ ವಂದನೆ ಸ್ವೀಕರಿಸಿದರು. ಜಿ.ಪಂ. ಅಧ್ಯಕ್ಷ ದಿನಕರ ಬಾಬು ಕ್ರೀಡಾಜ್ಯೋತಿ ಬೆಳಗಿಸಿದರು. ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಪ್ರತಿಜ್ಞಾವಿಧಿ ಬೋಧಿಸಿದರು. ಉದ್ಯಮಿ ಆನಂದ್ ಸಿ. ಕುಂದರ್ ಸ್ವಾಗತಿಸಿದರು. ಸತೀಶ್ಚಂದ್ರ ಶೆಟ್ಟಿ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಿದರು. ಸಚಿವರಾದ ಈಶ್ವರಪ್ಪ, ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಕೆ.ರಘುಪತಿ ಭಟ್, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಶ್ಯಾಮಲಾ ಕುಂದರ್ ಉಪಸ್ಥಿತರಿದ್ದರು.
ಗಮನ ಸಳೆದ ಪಥ ಸಂಚಲನ
ಉಡುಪಿ ಹಾಗೂ ದ.ಕ. ಜಿಲ್ಲೆಯ 413 ಸ್ಥಳೀಯಾಡಳಿ ಸಂಸ್ಥೆಗಳ ಜನಪ್ರತಿನಿಧಿಗಳು ಹಾಗೂ ಸಿಬಂದಿಯ ಪಥಸಂಚಲನದಲ್ಲಿ ಭಾಗವಹಿಸಿದರು. ಸ್ವತ್ಛ ಭಾರತ್, ಬಯಲು ಶೌಚ ಮುಕ್ತ ಗ್ರಾ.ಪಂ., ಶಿಕ್ಷಣ, ತುಳುನಾಡಿನ ಸಂಸ್ಕೃತಿ ಬಿಂಬಿಸುವ ಯಕ್ಷಗಾನ, ಕೋಲಾ, ಚಂದ್ರಯಾನ-2, ದೇಶದ ವಿವಿಧ ಪ್ರದೇಶಗಳ ಪ್ರಾದೇಶಿಕ ಉಡುಪು, ಕೊರಗರ ಡೋಲು ವಾದನ, ಮೀನುಗಾರಿಕೆ, ಕೊರಗಜ್ಜ, ಯಕ್ಷಗಾನ, ಕಂಬಳದ ಕೋಣ, ಸೈನಿಕರ ವೇಷಭೂಷಣಗಳನ್ನು ಮುಂತಾದ ಉಡುಪುಗಳನ್ನು ತೊಟ್ಟ ಸದಸ್ಯರು ಪಥಸಂಚಲನದಲ್ಲಿ ಗಮನಸೆಳೆದರು.
ವಿವಿಧ ಸ್ಪರ್ಧೆಗಳು
ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸೂಪರ್ ಮಿನಿಟ್, ಗಾಯನ, ಛದ್ಮವೇಷ, ಕ್ರೀಡಾ ಸ್ಪರ್ಧೆಯಲ್ಲಿ 100 ಮೀರ್ಟ ಓಟ, ಗುಂಡು ಎಸೆತ, ರಿಂಗ್ ಇನ್ ದ ವಿಕೆಟ್, ಮಡಕೆ ಒಡೆಯವುದು, ಗುಂಪು ಸ್ಪರ್ಧೆಯಲ್ಲಿ ಹಗ್ಗಜಗ್ಗಾಟ, ತ್ರೋಬಾಲ್ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಸೀನಿಯರ್, ಸಬ್ ಸೀನಿಯರ್ ವಿಭಾಗದಲ್ಲಿ ಜರಗಿತು. ಸ್ಪರ್ಧಾಗಳು ನೀಡಲಾದ ಸಮವಸ್ತ್ರ ಹಾಗೂ ಟೋಪಿಯನ್ನು ಧರಿಸಿಕೊಂಡು ಕ್ರೀಡಾಂಗಣದಲ್ಲಿ ಸಂಭ್ರಮಿಸಿದರು. ನಾವು ಬೇರೆ ಬೇರೆ ಪಕ್ಷದಿಂದ ಚುನಾಯಿತರಾದವರು ಎಂಬುದನ್ನು ಮರೆತು ಒಗ್ಗಟ್ಟಿನ ಪ್ರದರ್ಶನ ತೋರಿರುವುದು ಈ ಕಾರ್ಯಕ್ರಮದ ವಿಶೇಷತೆಯನ್ನು ತೋರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Wrong Spelling: ಅಪಹರಣದ ಪತ್ರದಲ್ಲಿ ಅಕ್ಷರ ತಪ್ಪು ಬರೆದು ಸಿಕ್ಕಿಬಿದ್ದ ಭೂಪ!
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
ಚಂದ್ರಯಾನ, ಗಗನಯಾನ: ಇಸ್ರೋದ ಮಹತ್ವದ ಪ್ಲಾನ್: ವಿ.ನಾರಾಯಣನ್
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.