ಪವಿತ್ರ ಇಂದ್ರಾಣಿ ಈಗ ಸೊಳ್ಳೆ ಉತ್ಪಾದನಾ ಕೇಂದ್ರಗಳ ರಾಣಿ !


Team Udayavani, Feb 25, 2020, 5:28 AM IST

IMG_9866

ಇಂದ್ರಾಣಿ ನದಿ ಪ್ರದೇಶ ಜಿಲ್ಲೆಯಲ್ಲೇ ಅತಿ ಹೆಚ್ಚು ಸೊಳ್ಳೆ ಉತ್ಪಾದಿಸುವ ತಾಣಗಳನ್ನು ಹೊಂದಿರುವ ಪ್ರದೇಶ ಎಂದರೆ ಆತಂಕಪಡಲೇಬೇಕು. ಸದಾ ಸಾಂಕ್ರಾಮಿಕ ರೋಗಗಳ ಭೀತಿಯಿಂದ ಬದುಕುತ್ತಿರುವ ಈ ಪ್ರದೇಶದ ಜನರಿಗೆ ಇದುವರೆಗೆ ನಗರಸಭೆ ಒದಗಿಸಿರುವುದು ಕೇವಲ ತಾತ್ಕಾಲಿಕ ಪರಿಹಾರವೇ ಹೊರತು, ಶಾಶ್ವತ ಪರಿಹಾರವಲ್ಲ.

ಜನಪ್ರತಿನಿಧಿಗಳೂ ಇದರತ್ತಲೇ ಹೆಚ್ಚು ಆಸಕ್ತಿ ವಹಿಸಿದ್ದಾರೆ. ಒಂದು ಸಮೃದ್ಧ ಜಲಮೂಲ ಆಗಬಹುದಾದ ನದಿಯನ್ನು ಈ ಸ್ಥಿತಿಗೆ ತಂದುಕೊಂಡಿರುವುದಕ್ಕೆ ನಮಗೆ ನಾಚಿಕೆಯಾಗಬೇಕು. ಸ್ವತ್ಛವಾಗಿಡಬೇಕಾದ ಮತ್ತು ಸ್ವತ್ಛವಾಗಿಡುವಂತೆ ಎಚ್ಚರಿಸಬೇಕಾಗಿದ್ದ ನಗರಸಭೆಯೇ ಆರೋಪಿ ಸ್ಥಾನದಲ್ಲಿದೆ. ಎಲ್ಲ ಹಂತದ ಜನಪ್ರತಿನಿಧಿಗಳು ಟೀಕೆಗೆ ಗುರಿಯಾಗಿದ್ದಾರೆ. ಅವರೆಲ್ಲರನ್ನೂ ಹಕ್ಕೊತ್ತಾಯದ ಮೂಲಕ ಎಚ್ಚರಿಸಬೇಕಾದ ಹೊಣೆಗಾರಿಕೆಯನ್ನು ನಾಗರಿಕರಾದ ನಾವೂ ಮರೆತಿದ್ದೇವೆ ಎನ್ನುವುದು ಸತ್ಯ.

ಕೊಡಂಕೂರು: ಕೊಳಚೆ ಯಿಂದ ಕೂಡಿದ ಇಂದ್ರಾಣಿ ನದಿ ಸದ್ಯಕ್ಕೆ ಇಡೀ ಜಿಲ್ಲೆಯಲ್ಲೇ ಗುರುತಿಸಿರುವಂತೆ ಅತಿ ಹೆಚ್ಚು ಸೊಳ್ಳೆ ಉತ್ಪಾದನೆ ಮಾಡುವ ಪ್ರದೇಶ.

ನಂಬದೇ ಇರುವಂತಿಲ್ಲ. ಯಾಕೆಂದರೆ, ಜಿಲ್ಲಾ ಆರೋಗ್ಯ ಇಲಾಖೆ ನೀಡುವ ಮಾಹಿತಿಯೂ ಇದೇ. ಇವರ ಮಾತನ್ನು ನಂಬುವಂಥ ಹಲವು ನಿದರ್ಶನ ಇಂದ್ರಾಣಿ ನದಿ ಪ್ರದೇಶದಲ್ಲಿ (ಕೊಳಚೆ ಸೇರುವ ಪ್ರದೇಶ ದಿಂದ ಸಮುದ್ರ ತಲುಪುವವರೆಗೂ) ಒಮ್ಮೆ ತಿರುಗಾಡಿದರೆ ಸಿಗುತ್ತದೆ.”ಉದಯವಾಣಿ’ ಸುದಿನ ಅಧ್ಯಯನ ತಂಡ ಭೇಟಿ ನೀಡಿದ್ದಲ್ಲೆಲ್ಲ ಹಲವು ಮಂದಿ ನಾಗರಿಕರು, ಬಾವಿಗಳು ಹಾಳಾಗಿವೆ ಎನ್ನುವುದಕ್ಕಿಂತಲೂ ಹೆಚ್ಚು ದೂರಿದ್ದುª ಸೊಳ್ಳೆ ಗಳ ಸಮಸ್ಯೆ, ದುರ್ವಾಸನೆ ಹಾಗೂ ಸಾಂಕ್ರಾ ಮಿಕ ರೋಗ ಭೀತಿ ಬಗ್ಗೆ.

ಆರೋಗ್ಯ ಇಲಾಖೆಯ ಮಾಹಿತಿ
ಆರೋಗ್ಯ ಇಲಾಖೆ ನೀಡುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿರುವ ಸೊಳ್ಳೆ ಉತ್ಪಾದನ ಕೇಂದ್ರಗಳ ಪೈಕಿ ಹೆಚ್ಚು ಕೊಡುಗೆ ಇಂದ್ರಾಣಿ ನದಿ ಪ್ರದೇಶದಿಂದ. ಚೂರು ವೈಭವೀಕರಣ ಎಂದು ಮೂಗು ಮುರಿಯಬೇಡಿ.ವಾಸ್ತವವೆಂದರೆ, ಶೇ. 80ಕ್ಕಿಂತಲೂ ಹೆಚ್ಚು ಉತ್ಪಾದನಾ ಕೇಂದ್ರಗಳು ಈ ನದಿ ಪ್ರದೇಶ ದಲ್ಲಿವೆ. ಇವು ಡೆಂಗೆ, ಮಲೇರಿಯಾದಂಥ ಸಾಂಕ್ರಾಮಿಕ ರೋಗ ಹರಡುವುದನ್ನು ತಳ್ಳಿ ಹಾಕುವಂತಿಲ್ಲ.ಜಿಲ್ಲೆಯಲ್ಲಿ ಹೋಲಿಸಿದರೆ, ನಗರಸಭೆಯ ಅದರಲ್ಲೂ ಇಂದ್ರಾಣಿ ನದಿ ಪ್ರದೇಶದಲ್ಲೇ ಅತಿ ಹೆಚ್ಚು ಸೊಳ್ಳೆ ಉತ್ಪತ್ತಿ ಯಾಗುತ್ತವೆ ಎಂಬುದು ಇಲಾಖೆಯ ಮಾಹಿತಿ. ಈ ಸಂಬಂಧ ನಗರಸಭೆಗೂ ಪತ್ರ ಆರೋಗ್ಯ ಇಲಾಖೆ ಪತ್ರ ಬರೆದಿದೆ.

ಇದನ್ನು ಉದಯವಾಣಿ ತಂಡಕ್ಕೆ ಖಚಿತ ಪಡಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುದೀಶ್‌ ಚಂದ್ರ ಸೂಡ ಅವರು, “ಸುಮಾರು ಒಂದೂವರೆ ತಿಂಗಳ ಹಿಂದೆ ನಗರಸಭೆ ಪ್ರದೇಶದಲ್ಲಿ (ಮುಖ್ಯವಾಗಿ ಇಂದ್ರಾಣಿ ನದಿ ಪ್ರದೇಶದಲ್ಲಿ) ಸೊಳ್ಳೆ ಉತ್ಪಾ ದನಾ ಕೇಂದ್ರಗಳು ಹೆಚ್ಚಾಗದಂತೆ ಕ್ರಮ ಕೈಗೊಳ್ಳಲು ಪತ್ರ ಬರೆಯಲಾಗಿದೆ. ಈ ಹಿಂದೆಯೂ ಬರೆಯಲಾಗಿತ್ತು. ಕೆಲವು ದಿನ ಕಾಯುತ್ತೇವೆ. ಯಾವ ಕ್ರಮವನ್ನೂ ಕೈಗೊಳ್ಳ ದಿದ್ದರೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗು ವುದು’ ಎಂದು ಹೇಳಿದ್ದಾರೆ.

ಆರೋಗ್ಯ ಇಲಾಖೆಯ ಮಲೇರಿಯಾ ವಿಭಾಗದ ಅಧಿಕಾರಿ ಡಾ| ಪ್ರಶಾಂತ್‌ ಅವರು ವಿವರಿಸುವಂತೆ, ಈ ಪ್ರದೇಶ ದಲ್ಲಿ ಸಮಸ್ಯೆ ಇರುವುದು ನಿಜ. ಮಲೇರಿಯಾ ಮತ್ತಿತರ ಪ್ರಕರಣ ಗಳಲ್ಲೂ ಸ್ವಲ್ಪ ಹೆಚ್ಚಳ ಕಂಡುಬರುತ್ತದೆ. ಆದರೆ, ಜನರೇ (ಆರೋಗ್ಯಕ್ಕೆ ಕಾಳಜಿ ಹೆಚ್ಚು ವಹಿಸುವುದರಿಂದ) ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಉದಾಹರಣೆಗೆ, ನೀರನ್ನು ಬಿಸಿ ಮಾಡಿ ಕುಡಿಯುವುದು, ಕಲುಷಿತ ನೀರನ್ನು ಕುಡಿಯದೇ ಬದಲಿ ವ್ಯವಸ್ಥೆ (ಬೇರೆಯವರ ಮನೆಯ ಬಾವಿ ನೀರು ಆಶ್ರಯ, ದುಡ್ಡು ಕೊಟ್ಟು ನೀರು ಖರೀದಿ ಇತ್ಯಾದಿ) ಮಾಡಿಕೊಳ್ಳುತ್ತಿದ್ದಾರೆ. ಅದರರ್ಥ ಸಮಸ್ಯೆ ಇಲ್ಲವೆಂದಲ್ಲ ಎನ್ನುತ್ತಾರೆ.

ನಗರಸಭೆಯ ಅಧಿಕಾರಿಗಳಿಗೆ ದೂರು ನೀಡಿಲ್ಲವೇ ಎಂದು ಕೇಳಿದಾಗಲೂ, ದೂರು ನೀಡಿದಾಗ ಫಾಗಿಂಗ್‌ ಮಾಡಿ ಹೋಗುತ್ತಾರಷ್ಟೇ ಎಂದು ಉತ್ತರಿಸಿದರು ನಾಗರಿಕರು. ಹಾಗೆಯೇ ಸ್ಥಳೀಯ ಜನಪ್ರತಿನಿಧಿಗಳೂ ಸೊಳ್ಳೆ ಪರದೆ ನೀಡುವುದು, ನಗರಸಭೆಗೆ ದೂರು ನೀಡುವುದು ಬಿಟ್ಟರೆ ಬೇರೆ ಕ್ರಮ ಕೈಗೊಂಡಿದ್ದು ಕಡಿಮೆ ಎಂಬುದು ಸ್ಥಳೀಯರಿಂದ ಕೇಳಿ ಬರುತ್ತಿರುವ ಅಭಿಪ್ರಾಯ.

ಕೊಳಚೆ ಕಾಲುವೆಯನ್ನೂ ನಿರ್ಲಕ್ಷಿಸುವಂತಿಲ್ಲ
ಕೊಳಚೆ ನೀರು ನಿಧಾನವಾಗಿ ಹರಿಯುತ್ತಿದ್ದು, ಅಲ್ಲಿ ಎಷ್ಟು ಸೊಳ್ಳೆಗಳ ಉತ್ಪಾದನಾ ಕೇಂದ್ರಗಳಿವೆ ಎಂದು ಅಳೆಯುವುದು ಕಷ್ಟ. ಅಲ್ಲಿ ಖಂಡಿತಾ ಸೊಳ್ಳೆ ಉತ್ಪಾದನಾ ಕೇಂದ್ರಗಳಿರುತ್ತವೆ. ಅವೂ ಅಪಾಯಕಾರಿ ತಾಣಗಳೇ. ಹಾಗಾಗಿ ನಾವು ಸೊಳ್ಳೆ ಉತ್ಪಾದನಾ ಕೇಂದ್ರಗಳನ್ನು ನಾಶ ಮಾಡಲು ರಾಸಾಯನಿಕವನ್ನು ಹಾಕಿ ಬರುತ್ತೇವೆ. ಹಾಗೆಯೇ ನಗರಸಭೆ ಯವರೂ ಫಾಗಿಂಗ್‌ ಇತ್ಯಾದಿ ಕ್ರಮ ಕೈಗೊಳ್ಳುತ್ತಾರೆ. ಕಾಲುವೆ, ಚರಂಡಿ ಹಾಗೂ ಕೊಳಚೆ ನೀರು ಹರಿಯುವ ಕೇಂದ್ರಗಳನ್ನೂ ಪರೀಕ್ಷೆಗೆ ಪರಿಗಣಿಸಿದರೂ ವರದಿ ಮಾಡುವುದಿಲ್ಲ. ಕಾರಣ, ಅಲ್ಲಿನ ಪ್ರಮಾಣವನ್ನು ನಿರ್ದಿಷ್ಟವಾಗಿ ಹೇಳುವುದು ಕಷ್ಟ ಎನ್ನುತ್ತಾರೆ ಆರೋಗ್ಯ ಇಲಾಖೆಯ ಅಧಿಕಾರಿಗಳು.

ಇಷ್ಟೆಲ್ಲದಕ್ಕೆ ನಗರಸಭೆಯ ಪರಿಸರ ವಿಭಾಗದ ಅಧಿಕಾರಿಗಳು ಹೇಳುವುದೇ ನೆಂದರೆ, ಸಾರ್ವ ಜನಿಕರಿಂದ ದೂರು ಬಂದಾಗ ಕ್ರಮ ಕೈಗೊಳ್ಳುತ್ತೇವೆ ಎಂಬುದು.

ತಾತ್ಕಾಲಿಕ ಪರಿಹಾರಕ್ಕೇ ಹೆಚ್ಚು ಗಮನ
ಎಲ್ಲ ಸಮಸ್ಯೆಗೂ ತಾತ್ಕಾಲಿಕ ಪರಿಹಾರಕ್ಕೆ ನಗರಸಭೆ ಹೆಚ್ಚು ಗಮನಕೊಟ್ಟಿರುವುದೇ ಇಂದ್ರಾಣಿ ನದಿ ಸಮಸ್ಯೆ ಇಷ್ಟೊಂದು ಭೀಕರ ಸ್ಥಿತಿಗೆ ತಲುಪಲು ಕಾರಣ ಎಂಬುದು ಮತ್ತೂಮ್ಮೆ ಸಾಬೀತಾಗಿದೆ. ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಕೊಂಚವೂ ಪ್ರಯತ್ನಿಸದೇ, ಬರೀ ತೇಪೆ ಹಾಕಿಕೊಂಡು ಬಂದಿರುವುದರಿಂದಲೇ ಈಗ ಟೀಕೆಗೆ ಗುರಿಯಾಗುತ್ತಿದೆ.

ಜನರ ಆರೋಗ್ಯದ ವಿಷಯದಲ್ಲೂ ನಗರ ಸಭೆ ಅದನ್ನೇ ಮಾಡಿದೆ. ಯಾರಾದರೂ ದೂರುನೀಡಿದರೆ, ಫಾಗಿಂಗ್‌ ಮಾಡುವುದು, ಸೊಳ್ಳೆ ಪರದೆ ನೀಡುವುದು ಇತ್ಯಾದಿ ಕೈಗೊಂಡಿದೆ. ಮಲೇರಿಯಾ, ಡೆಂಗ್ಯೂ ಸಂದರ್ಭದಲ್ಲಿ ಪ್ರಕರಣಗಳು ಕಡಿಮೆಯಾದರೆ ಸಾಕು, ಉಳಿದ ತಿಂಗಳಿನಲ್ಲಿ ಪರವಾಗಿಲ್ಲ ಎಂಬ ಧೋರಣೆಯೂ ಸಮಸ್ಯೆ ಬಿಗಡಾಯಿಸಲು ಕಾರಣ.

ಇಂದ್ರಾಣಿ ನದಿ ಸಮಸ್ಯೆಗೆ ಪ್ರಥಮ ಆದ್ಯತೆ : ಭಟ್‌
ಕೊಡಂಕೂರು: ಇಂದ್ರಾಣಿ ನದಿಯ ಸಮಸ್ಯೆಯೇ ನಗರದ ಇಂದಿನ ಪ್ರಮುಖ ಸಮಸ್ಯೆ ಎಂದು ಹೇಳಿ ರುವ ಶಾಸಕ ಕೆ. ರಘುಪತಿ ಭಟ್‌, ಈ ಸಂಬಂಧ ಹಳೆ ಒಳಚರಂಡಿ ವ್ಯವಸ್ಥೆ ಯನ್ನು ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೊಡಂಕೂರು ಆಶ್ರಯ ಕವಚ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಫ‌ಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಳೆಯ ಯುಜಿಡಿ ವ್ಯವಸ್ಥೆ ಸರಿಪಡಿಸಲು ಅಗತ್ಯವಿರುವ ಅನುದಾನವನ್ನು ಮೊದಲ ಬಜೆಟ್‌ನಲ್ಲಿ ಕಾಯ್ದಿರಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದರು.ಹಳೆಯ ಯುಜಿಡಿ ನವೀಕರಣಕ್ಕೆ ಸುಮಾರು 80 ಕೋ.ರೂ. ಅಗತ್ಯವಿದೆ. ಇದರೊಂದಿಗೆ ಮಣಿಪಾಲ ಮತ್ತು ಸಂತೆಕಟ್ಟೆಗೂ ಒಳಚರಂಡಿ ವಿಸ್ತರಿಸ ಬೇಕಿದ್ದು ಯೋಜನೆ (ಡಿಪಿಆರ್‌) ಸಿದ್ಧ ಪಡಿಸಲು ಕರ್ನಾಟಕ ನಗರ ನೀರು ಹಾಗೂ ಒಳಚರಂಡಿ ಮಂಡಳಿಗೆ ಹೊಣೆವಹಿಸಲಾಗಿದೆ. ಮೂರು ತಿಂಗಳಲ್ಲಿ ಡಿಪಿಆರ್‌ ಸಿದ್ದವಾಗಲಿದೆ ಎಂದರು.

“ನಗರದ ವ್ಯಾಪ್ತಿಯಲ್ಲಿ ರಸ್ತೆಗಳು
ಈಗ ಪರವಾಗಿಲ್ಲ. ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಸ ಲಾಗುತ್ತಿದೆ. ಪ್ರಸ್ತುತ ಜಲ ಮೂಲದ ಕೊರತೆಯಿಲ್ಲ; ಬದಲಾಗಿ ವಿತರಣಾ ವ್ಯವಸ್ಥೆ ಸರಿಪಡಿಸಬೇಕಿದೆ. ವಾರಾಹಿ ಯಿಂದ ಮುಂದಿನ ವರ್ಷ ನೀರು ಪೂರೈಸಲಾಗುವುದು. ಈಗ ಇರುವುದು ಇಂದ್ರಾಣಿ ನದಿಯ ಸಮಸ್ಯೆಯೇ ಪ್ರಮುಖವಾದುದು. ಅದಕ್ಕೆ ಗಮನ ಕೊಡಲೇಬೇಕಾಗಿದೆ. ಅದೇ ಪ್ರಥಮ ಆದ್ಯತೆ’ ಎಂದು ಸ್ಪಷ್ಟಪಡಿಸಿದರು.

ಇದಕ್ಕೆ ಪೂರಕವಾಗಿ ಎಲ್ಲ ವೆಟ್‌ವೆಲ್‌, ಎಸ್‌ಟಿಪಿ ಉನ್ನತೀಕರಣವಾಗ ಬೇಕು. ಮ್ಯಾನ್‌ ಹೋಲ್‌, ಇಟ್ಟಿಗೆ ಯಿಂದ ಕೂಡಿದೆ. ಅದಕ್ಕೆ ಕಾಂಕ್ರೀಟ್‌ ಮಾಡಬೇಕು. ಈಗಾಗಲೇ ಕರ್ನಾಟಕ ನೀರು ಹಾಗೂ ಒಳಚರಂಡಿ ಮಂಡಳಿ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಮಾಡಲಾಗಿದೆ ಎಂದರು.

ವಾರಾಹಿಗೆ ಒಳಚರಂಡಿ ಅನುದಾನ!
2013ರಲ್ಲಿ ವಿನಯ ಕುಮಾರ್‌ ಸೊರಕೆ ಅವರು ನಗರಾಭಿವೃದ್ಧಿ ಸಚಿವರಾಗಿದ್ದ ಸಂದರ್ಭದಲ್ಲಿ ಸುಮಾರು 200 ಕೋ.ರೂ. ಅನುದಾನವನ್ನು ಒಳಚರಂಡಿ ವ್ಯವಸ್ಥೆ ಅಭಿವೃದ್ಧಿಗೆ ಮಂಜೂರು ಮಾಡಿದ್ದರು. ಆದರೆ ಬಳಿಕ ಯೋಜನೆಯನ್ನು ಜಾರಿಗೊಳಿಸದ ಕಾರಣ, ಅನುದಾನ ರದ್ದಾಗಿದೆ. ಇದೀಗ ಎಡಿಬಿ ಹಾಗೂ ಅಮೃತ್‌ ಯೋಜನೆಯ ಅನುದಾನವನ್ನು ವಾರಾಹಿ ಕುಡಿಯುವ ನೀರಿಗೆ ಬಳಸಲಾಗುತ್ತಿದೆ ಎಂದರು.

ಆರೋಗ್ಯ ಇಲಾಖೆ ನೀಡುವ ಅಂಕಿ
ಅಂಶಗಳ ಪ್ರಕಾರ, 2017ರಲ್ಲಿ ಜಿಲ್ಲೆಯಲ್ಲಿ ಒಟ್ಟು 280 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದವು. ಈ ಪೈಕಿ 180 ಮಲ್ಪೆ ಒಳ ಗೊಂಡಂತೆ ನಗರಸಭೆ ಪ್ರದೇಶದಲ್ಲಿತ್ತು. ಈ ಪೈಕಿ ನಿಟ್ಟೂರು, ಕೊಡವೂರು, ಕೊಡಂಕೂರು, ಕಲ್ಮಾಡಿ, ಬನ್ನಂಜೆ, ಮಲ್ಪೆ ಪ್ರದೇಶದಲ್ಲೇ ನೂರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. 2018ರಲ್ಲಿ ಒಟ್ಟೂ ಸಂಖ್ಯೆಯಲ್ಲಿ ಸ್ವಲ್ಪ ಕಡಿಮೆಯಾಗಿತ್ತು. 2019 ರಲ್ಲಿ ಮತ್ತೆ 380ಕ್ಕೂ ಹೆಚ್ಚು ಪ್ರಕರಣಗಳು ಕಂಡು ಬಂದವು. ಆ ಪೈಕಿಯೂ ನಗರಸಭೆಯಲ್ಲಿ ಸಾಕಷ್ಟು ಪ್ರಕರಣಗಳು ಪತ್ತೆಯಾಗಿದ್ದವು. ಮಲೇರಿಯಾದ ಸಂಗತಿಯನ್ನು ನೋಡುವುದಾದರೆ, ಮೂರೂ ವರ್ಷಗಳಲ್ಲಿ ಕಂಡು ಬಂದಿರುವ ಪ್ರಕರಣಗಳಿಗೆ ಇಂದ್ರಾಣಿ ನದಿ ಪ್ರದೇಶದ ಕೊಡುಗೆಯೂ ಇದೆ.

ಆನೆ ಸೊಳ್ಳೆ !
ಆನೆ ಸೊಳ್ಳೆಯೆಂದರೆ ಸೊಳ್ಳೆ ಆನೆಗಳಷ್ಟು ದೊಡ್ಡದಾಗಿವೆಯೇ ಎಂದು ಕೇಳಬೇಡಿ. ಆದರೆ, ಇಂದ್ರಾಣಿ ನದಿ ಪ್ರದೇಶದಲ್ಲಿ ಆನೆ ಕಾಲು ರೋಗ ಹರಡ ಬಹುದಾದಂಥ ಸೊಳ್ಳೆಗಳು ಹೆಚ್ಚಿವೆ. ಸಾಮಾನ್ಯವಾಗಿ ಈ ಸೊಳ್ಳೆಗಳು ಈಗಾಗಲೇ ಆನೆ
ಕಾಲು ರೋಗ ಸೋಂಕು ಹೊಂದಿರುವವನನ್ನು ಕಚ್ಚಿ ಮತ್ತೂಬ್ಬರನ್ನು ಕಚ್ಚಿದರೆ (ಅದರಲ್ಲೂ ಮೊಟ್ಟೆಗಳಿದ್ದರೆ) ಸೋಂಕು ಹರಡುವ ಸಂಭವವಿರುತ್ತದೆ. ಆರೋಗ್ಯ
ಇಲಾಖೆ ಮಾಹಿತಿಯಂತೆ, ಪ್ರಸ್ತುತ ಜಿಲ್ಲೆಯಲ್ಲಿ ಇಂಥ ಪ್ರಕರಣಗಳಿಲ್ಲ. ಹೊರಗಿನಿಂದ ಬಂದ ವರಲ್ಲಿ ಯಾರಾದರೂ ಇಂಥ ವೈರಸ್‌ನ್ನು ತರುವಂಥ ಪ್ರಸಂಗ ಗಳಿವೆ. ಅಂದ ಹಾಗೆ, ಇತ್ತೀಚೆಗಷ್ಟೆ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆ ಎಂದು ಪ್ರಕಟಿಸಲಾಗಿದೆ.

ಭಕ್ತರ ಎದುರು ಮುಜುಗರದ ಸ್ಥಿತಿ:
ಫಾ| ಆಲ್ಬನ್‌ ಡಿಸೋಜಾಕಲ್ಮಾಡಿಯಲ್ಲಿ ಇಂದ್ರಾಣಿ ನದಿ ಹರಿಯುವ ಪಕ್ಕದಲ್ಲೇ ಕಲ್ಮಾಡಿ ಸ್ಟೆಲ್ಲಾ ಮೇರೀಸ್‌ ಚರ್ಚ್‌ ಕೂಡ ಇದೆ. ಇಲ್ಲಿ ಪ್ರತೀ ಶನಿವಾರ ಬೆಳಗ್ಗೆ 9 ಮತ್ತು ಸಂಜೆ 4ಗಂಟೆಗೆ, ರವಿವಾರ ಬೆಳಗ್ಗೆ 7-30ಕ್ಕೆ ಮತ್ತು ಸಂಜೆ 5ಗಂಟೆಗೆ ಪ್ರಾರ್ಥನೆ ನಡೆಯುತ್ತದೆ. ಸುಮಾರು 500ರಿಂದ 600 ಮಂದಿ ಭಕ್ತರು ಪ್ರಾರ್ಥನೆಯಲ್ಲಿ ಪಾಲ್ಗೊಳ್ಳು ತ್ತಾರೆ. ಬೆಳಗ್ಗೆ ಮತ್ತು ಸಂಜೆ ನದಿ ನೀರಿನ ಇಳಿತ ವೇಳೆಯಲ್ಲಿ ದುರ್ವಾಸನೆ ಜಾಸ್ತಿ ಇರುತ್ತದೆ. ಶನಿವಾರ ಭೋಜನ ವ್ಯವಸ್ಥೆ ಇರುತ್ತದೆ. ಊಟ ಮಾಡುವುದೂ ಕಷ್ಟ.

2018ರಲ್ಲಿ ಚರ್ಚ್‌ನ್ನು ಹಡಗು ಮಾದರಿ ಯಲ್ಲಿ ಅಕರ್ಷಕವಾಗಿ ಪುನರ್‌ ನವೀಕರಣ ಮಾಡಲಾಗಿದ್ದು, ಅಂದಿನಿಂದ ಚರ್ಚ್‌ ನೋಡಲು ಸಾಕಷ್ಟು ಸಂಖ್ಯೆ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಕಲ್ಮಾಡಿ ಸ್ಟೆಲ್ಲಾ ಮೇರೀಸ್‌ ಚರ್ಚ್‌ನ ಧರ್ಮಗುರು ರೆ| ಫಾ| ಆಲ್ಬನ್‌ ಡಿ’ಸೋಜಾ ಹೇಳುವಂತೆ, ದುರ್ವಾಸನೆಗೆ ನಾವೇನೋ ಅನಿವಾರ್ಯವಾಗಿ ಒಗ್ಗಿಕೊಂಡಿದ್ದೇವೆ. ಆದರೆ ಹೊರರಾಜ್ಯ ಮತ್ತು ಹೊರಜಿಲ್ಲೆಯ ಭಕ್ತರು ಇಲ್ಲಿ ಪ್ರಾರ್ಥನೆಗೆ ಬರುತ್ತಾರೆ. ಅವರಿಗೆ ಏನೆಂದು ವಿವರಿಸುವುದು? ಬಹಳ ಮುಜುಗರದ ಸ್ಥಿತಿಯಲ್ಲಿದ್ದೇವೆ. ಮೂಗು ಮುಚ್ಚಿಕೊಂಡೇ ಪ್ರಾರ್ಥನೆ ಸಲ್ಲಿಸುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ.ಸಮಸ್ಯೆ ಬಗ್ಗೆ ಸಾಕಷ್ಟು ಬಾರಿ ಸಂಬಂಧಪಟ್ಟ ಇಲಾಖೆಗೆ ದೂರು ನೀಡಿದ್ದೇವೆ. ಸ್ಥಳೀಯ ನಾಗರಿಕರ ಜತೆ ಸೇರಿ ಪ್ರತಿಭಟನೆ ನಡೆಸಿದ್ದೇವೆ. ಆದರೆ ಸಮಸ್ಯೆ ಇವತ್ತಿಗೂ ಬಗೆಹರಿದಿಲ್ಲ.

ಕಲ್ಮಾಡಿ ಸಾಯಿಬಾಬ ಮಂದಿರದ ಬಳಿ ಹಾಕಲಾದ ಕಟ್ಟದಿಂದ ಪರಿಸರ ಹಾಳಾಗುತ್ತಿರುವ ಕುರಿತು ನಾಗರಿಕ ಹಿತರಕ್ಷಣಾ ವೇದಿಕೆ ದೂರು ನೀಡಿದೆ. ಅದನ್ನು ಶೀಘ್ರವೇ ತೆರವುಗೊಳಿಸಲಾಗುತ್ತದೆ. ಕಳೆದ ಮೂರು ತಿಂಗಳಲ್ಲಿ ಇಂದ್ರಾಣಿ ನದಿ ಪಾತ್ರದ ಸಮೀಪದಲ್ಲಿ ನಿವಾಸಿಗಳು ಸೊಳ್ಳೆ ಅಧಿಕವಾಗಿರುವ ಕುರಿತು ದೂರು ನೀಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಅಗತ್ಯವಿರುವ ಕಡೆ ಫಾಗಿಂಗ್‌ ಮಾಡಲಾಗುತ್ತದೆ. ಮೂರು ತಿಂಗಳಿನಿಂದ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ದೂರು ಬಂದಿಲ್ಲ. ಇಲ್ಲಿಯ ವರೆಗೆ ಬಂದಿರುವ ದೂರಗಳ ಸಂಪೂರ್ಣ ವಿವರ ಪೌರಾಯುಕ್ತರ ಗಮನಕ್ಕೆ ತರುತ್ತೇವೆ.
-ಸ್ನೇಹ, ನಗರಸಭೆ ಪರಿಸರ ಎಂಜಿನಿಯರ್‌. ಉಡುಪಿ

ಉದಯವಾಣಿ ಸುದಿನ ಅಧ್ಯಯನ ತಂಡವು ಸಾಕಷ್ಟು ಸಂಶೋಧನೆ ನಡೆಸಿ 13 ದಿನಗಳಿಂದ ಸತತವಾಗಿ ಇಂದ್ರಾಣಿ ನದಿಯ ಸಮಸ್ಯೆಯ ನಾನಾ ಮಗ್ಗುಲುಗಳನ್ನು ವರದಿ ಮಾಡುತ್ತಿದೆ.

ಟಾಪ್ ನ್ಯೂಸ್

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿ ವಿರುದ್ಧ ಭುಗಿಲೆದ್ದ ಹೆಬ್ಬಾಳಕರ ಬೆಂಬಲಿಗರಿಂದ ಆಕ್ರೋಶ

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

Belagavi: ಸಿ.ಟಿ. ರವಿಯನ್ನು ಹೆಗಲ ಮೇಲೆ‌ ಹೊತ್ತುಕೊಂಡು ಜೀಪ್ ಗೆ ಹಾಕಿದ ಪೊಲೀಸರು

1-ullala

Mangaluru; ನೇತ್ರಾವತಿ ಸೇತುವೆ ದುರಸ್ತಿ ಆರಂಭ: ಸಂಚಾರ ಸಲಹೆ ನೀಡಿದ ಪೊಲೀಸರು

1-aaammm

Jammu and Kashmir; ಉಗ್ರವಾದ ಪರಿಸರ ವ್ಯವಸ್ಥೆ ಬಹುತೇಕ ಕೊನೆಗೊಂಡಿದೆ: ಶಾ

1-lok-sabha

BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು

CT Ravi

Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

accident2

Padubidri: ಅಪರಿಚಿತ ವಾಹನ ಢಿಕ್ಕಿ;‌ ಪಾದಚಾರಿಗೆ ತೀವ್ರ ಗಾಯ

de

Padubidri: ಕೆಎಸ್‌ಆರ್‌ಟಿಸಿ ಬಸ್ಸು ಢಿಕ್ಕಿ; ಪಾದಚಾರಿ ಸಾವು

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Untitled-1

Kasaragod Crime News: ರಸ್ತೆಯಲ್ಲಿ ಬಿಯರ್‌ ಬಾಟ್ಲಿ ಒಡೆದ ಮೂವರ ಬಂಧನ

byndoor

Belthangady: ಬಸ್‌ ಬೈಕ್‌ ಢಿಕ್ಕಿ, ಸವಾರ ಗಂಭೀರ

5

Malpe: ಮೆಹಂದಿಯಲ್ಲಿ ತಡರಾತ್ರಿವರೆಗೆ ಡಿಜೆ ಬಳಕೆ; ಪ್ರಕರಣ ದಾಖಲು

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Mangaluru: ಹೊಸ ವರ್ಷಾಚರಣೆ ಹಿನ್ನೆಲೆ: ಮಾರ್ಗಸೂಚಿ ಪ್ರಕಟ

Brahmavar

Siddapura: ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.