ಅಕ್ರಮ ನಿರ್ಮಾಣದ ಮನೆ ತೆರವು
Team Udayavani, May 30, 2019, 6:10 AM IST
ಶಿರ್ವ: ನ್ಯಾಯಾಲಯದ ಆದೇಶದಂತೆ ಕುತ್ಯಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗರ್‌ದಂಡೆ ಕೊಡಪಟ್ಯಬಳಿ ಲೋಕೋಪಯೋಗಿ ಇಲಾಖೆಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ದಿ| ರಮೇಶ್ ಆಚಾರ್ಯ ಅವರ ಪತ್ನಿ ಸುಂದರಿ ಆಚಾರ್ಯ ನಿರ್ಮಿಸಿದ್ದ ಮನೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಬುಧವಾರ ನೆಲಸಮ ಮಾಡಿದ್ದಾರೆ.
ಈ ಜಮೀನಿಗೆ ಹೊಂದಿಕೊಂಡು ಪಾಂಡುರಂಗ ಹೆಗ್ಡೆ ಎಂಬವರಿಗೆ ಸೇರಿದ ಜಮೀನಿದ್ದು, ಅವರು ಲೋಕೋಪಯೋಗಿ ಇಲಾಖೆಯ ಜಮೀನಿನಲ್ಲಿ ಸುಂದರಿ ಆಚಾರ್ಯ ಅವರು ಅಕ್ರಮವಾಗಿ ಮನೆ ನಿರ್ಮಿಸಿ ವಾಸವಾಗಿರುವುದರ ವಿರುದ್ಧ ಹೆಗ್ಡೆಯವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಳೆದ ಹಲವು ವರ್ಷಗಳಿಂದ ಈ ಪ್ರಕರಣ ನ್ಯಾಯಾಲಯದಲ್ಲಿದ್ದು, ಹೈಕೋರ್ಟ್ ಮನೆ ತೆರವುಗೊಳಿಸುವಂತೆ ಲೋಕೋಪಯೋಗಿ ಇಲಾಖೆಗೆ ಆದೇಶ ನೀಡಿದೆ. ಒಂದು ವೇಳೆ ಆದೇಶ ಪಾಲಿಸದಿದ್ದಲ್ಲಿ ಇಲಾಖೆ ಅಧಿಕಾರಿಗಳ ಮೇಲೆ ಕ್ರಮ ಜರಗಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಅದರಂತೆ ಜಿಲ್ಲಾಧಿಕಾರಿ ಹಾಗೂ ಉಪವಿಭಾಗಾಧಿಕಾರಿಯವರ ಮಾರ್ಗದರ್ಶನದಂತೆ ಲೋಕೋಪಯೋಗಿ ಅಧಿಕಾರಿಗಳು 15-5-2019ರ ಒಳಗೆ ಮನೆ ತೆರವುಗೋಳಿಸಲು ತಿಳಿಸಿದ್ದು ಬಳಿಕ ಯಾವುದೇ ಸಮಯದಲ್ಲಿ ಬಂದು ಮನೆ ತೆರವುಗೊಳಿಸುವುದಾಗಿ ನೋಟೀಸು ನೀಡಿದ್ದರು.
ಕಾಲಾವಕಾಶ ನೀಡಿದರೂ ಮನೆ ತೆರವು ಮಾಡದ ಹಿನೆ‌್ನಲೆಯಲ್ಲಿ ಬುಧವಾರ ಬೆಳಿಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಾದ ಜಗದೀಶ ಭಟ್ ಹಾಗೂ ಅಶೋಕ್ ಸ್ಥಳಕ್ಕೆ ಬಂದು ಪೊಲೀಸರ ಸಹಕಾರದಿಂದ ತೆರವಿಗೆ ಮುಂದಾಗಿದ್ದು ಈ ಸಮಯದಲ್ಲಿ ಸ್ಥಳೀಯ ಕೆಲ ಮಂದಿ ಸೇರಿ ತೆರವು ತಡೆಯಲು ಯತ್ನಿಸಿದರು. ಕೊನೆಗೆ ಮನೆಯವರ ಮನವೊಲಿಸಿ ಅವರನ್ನು ಸ್ಥಳಾಂತರಿಸಿ ಜೆಸಿಬಿ ಸಹಾಯದಿಂದ ಅಧಿಕಾರಿಗಳು ಮನೆ ನೆಲಸಮಗೊಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.