ಊರುಗಳ ಹೆಸರು ಬದಲಿಸಿದ ಫಲಕಗಳು
ಹೆದ್ದಾರಿ ಕಾಮಗಾರಿಯ ಮತ್ತೂಂದು ಅವಾಂತರ; ಡಿಸೆಂಬರ್‌ನಲ್ಲಿ ಶಿರೂರು ಟೋಲ್ ಆರಂಭ ಸಾಧ್ಯತೆ
Team Udayavani, Nov 27, 2019, 5:26 AM IST
ಬೈಂದೂರು: ಕಳಪೆ ಕಾಮಗಾರಿ ಮತ್ತು ಅವೈಜ್ಞಾನಿಕ ನಿರ್ವಹಣೆಯ ಮೂಲಕ ಸಮಸ್ಯೆಗಳಿಗೆ ಕಾರಣವಾಗಿದ್ದ ಹೆದ್ದಾರಿ ಚತುಷ್ಪಥ ಕಾಮಗಾರಿ ಪ್ರಸ್ತುತ ಊರಿನ ಹೆಸರುಗಳನ್ನು ತಪ್ಪಾಗಿ ಮುದ್ರಿಸಿದ ನಾಮಫಲಕಗಳನ್ನು ಅಳವಡಿಸಿ ಹೊಸ ದಿಕ್ಕಿಗೆ ಹೊರಳಿದೆ. ಊರುಗಳ ಹೆಸರು ಅಸಂಬದ್ಧವಾಗಿ ಮುದ್ರಣ ವಾಗಿದ್ದು, ಸಾರ್ವಜನಿಕರಿಂದ ಛೀಮಾರಿ ಕೇಳಿಬರುತ್ತಿದೆ.
ಕುಂದಾಪುರದಿಂದಾಚೆಗೆ ಹೆದ್ದಾರಿ ಕಾಮಗಾರಿ ವಹಿಸಿಕೊಂಡಿರುವ ಐಆರ್‌ಬಿ ಕಂಪೆನಿ ಪ್ರಸ್ತುತ ಶಿರೂರಿನಿಂದ ಕುಂದಾಪುರದ ವರೆಗೆ ಸೂಚನೆ ಮತ್ತು ಊರುಗಳ ನಾಮಫಲಕಗಳನ್ನು ಅಳವಡಿಸುತ್ತಿದೆ. ಇಲ್ಲೆಲ್ಲ ಊರುಗಳ ಹೆಸರುಗಳು ಅಪಭ್ರಂಶಗೊಂಡಿವೆಯಲ್ಲದೆ ಅಕ್ಷರ ತಪ್ಪುಗಳಿವೆ. ಅಡಿಬೇರು ಎನ್ನುವ ಕಡೆ ಅಡಿಬಾರು, ತೂದಳ್ಳಿ ಬದಲು ಮುರ್ಕೊಡಿ, ಮಾಕೋಡಿ ಬದಲು ಮಾರಕೋಡಿ … ಇವು ಕೆಲವು ಉದಾಹರಣೆಗಳು.
ಫಲಕಗಳ ಅಳವಡಿಕೆಯನ್ನು ಪ್ರತ್ಯೇಕ ಗುತ್ತಿಗೆದಾರ ರಿಗೆ ನೀಡಿದ್ದು, ದಿಲ್ಲಿಯಿಂದ ಮುದ್ರಣಗೊಂಡು ಬರುತ್ತಿವೆ. ಅಂತರ್ಜಾಲದ ಸಹಾಯ ಪಡೆದು ಕನ್ನಡೀಕರಣ ಗೊಳಿಸಿದ್ದರಿಂದ ಹೀಗಾಗಿದೆ ಎನ್ನಲಾಗಿದೆ.
ಟೋಲ್ ಆರಂಭಕ್ಕೆ ಕ್ಷಣಗಣನೆ
ಅವೈಜ್ಞಾನಿಕ ಹಂಪ್‌ಗ್ಳು
ಐಆರ್‌ಬಿ ಕಂಪೆನಿ ಪ್ರಸ್ತುತ ತರಾತುರಿಯಿಂದ ಕಾಮಗಾರಿ ನಡೆಸುತ್ತಿದ್ದು, ಡಿಸೆಂಬರ್ ಒಳಗೆ ಶಿರೂರು ಟೋಲ್ ಕೇಂದ್ರ ಆರಂಭಿಸುವ ಸಿದ್ಧತೆ ನಡೆಸುತ್ತಿದೆ. ಟೋಲ್ ಸ್ಥಳದಲ್ಲಿ ಅವೈಜ್ಞಾನಿಕ ಹಂಪ್‌ಗ್ಳನ್ನು ಅಳವಡಿಸಿದ್ದು, ಸ್ಥಳೀಯರು ವಿರೋಧಿಸಿದ ಬಳಿಕ ಕೆಲವು ಉಬ್ಬುಗಳಲ್ಲಿ ಸಿಮೆಂಟ್ ಅಳವಡಿಸಿದ್ದಾರೆ. ಕಾಮಗಾರಿ ಶೇ.75ರಷ್ಟು ಮುಗಿದ ಬಳಿಕ ಟೋಲ್ ಆರಂಭಿಸಬೇಕು ಎನ್ನುವ ನಿಯಮ ಇದೆ. ಆದರೆ ಉತ್ತರ ಕನ್ನಡದಲ್ಲಿ ಕಾಮಗಾರಿಯೇ ಆಗಿಲ್ಲ. ಕೆಲವು ಕಡೆ ಜಾಗ ಒತ್ತುವರಿ ಸಂಪೂರ್ಣವಾಗಿಲ್ಲ. ರಸ್ತೆ ವಿಭಾಜಕದ ನಡುವೆ ಗಿಡ ನೆಡುವ ಬದಲು ಕೆಂಪು ಮಣ್ಣು ಹರಡಲಾಗಿದೆ. ತಿರುವುಗಳಲ್ಲಿ ಬಳಿದ ಬಣ್ಣ ಮಾಸಿದೆ. ಹತ್ತಾರು ಪಂಚಾಯತ್‌ಗಳ ಕುಡಿಯುವ ನೀರಿನ ಸಂಪರ್ಕ ಕಡಿದ ಕಂಪೆನಿ ದುರಸ್ತಿ ಮಾಡಿಕೊಟ್ಟಿಲ್ಲ. ಟೋಲ್‌ನಲ್ಲಿ ಸ್ಥಳೀಯರಿಗೆ ರಿಯಾಯಿತಿ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಸರ್ವೀಸ್ ರಸ್ತೆ, ಬಸ್ ನಿಲ್ದಾಣ ಕಾಮಗಾರಿ ಆರಂಭವಾಗಿಲ್ಲ. ಹೀಗಿರುವಾಗ ಟೋಲ್‌ಗೆ ಜಿಲ್ಲಾಡಳಿತ ಅನುಮತಿ ನೀಡಬಾರದೆನ್ನುವುದು ಸಾರ್ವಜನಿಕರ ಆಗ್ರಹ.
ಬೃಹತ್ ಹೋರಾಟಕ್ಕೆ ಸಿದ್ಧತೆ
ಹೆಚ್ಚಿನ ಕಡೆ ಟೋಲ್ ಆರಂಭಿಸಿ ಸಾರ್ವಜನಿಕರು, ಸ್ಥಳೀಯರ ಬೇಡಿಕೆಗಳಿಗೆ ಸ್ಪಂದಿಸದಿರುವ ನಿದರ್ಶನ ಇರುವ ಕಾರಣ ಶಿರೂರು ಟೋಲ್‌ಗೇಟ್ ವಿರುದ್ಧ ಹೋರಾಟಕ್ಕೆ ಸಿದ್ಧತೆ ನಡೆಯುತ್ತಿದೆ. ಡಿ. 1ರಿಂದ ಫಾಸ್ಟಾಗ್ ಕಡ್ಡಾಯವಾಗಿರುವ ಕಾರಣ ಸ್ಥಳೀಯರಿಗೆ ರಿಯಾಯಿತಿ ಸ್ಪಷ್ಟಪಡಿಸದೆ ಟೋಲ್ ಆರಂಭಿಸಲು ಬಿಡುವುದಿಲ್ಲ ಎನ್ನುವುದು ಹೆದ್ದಾರಿ ಹೋರಾಟ ಸಮಿತಿಯ ತೀರ್ಮಾನ. ಕಂಪೆನಿ ಅಸಮರ್ಪಕ ಕಾಮಗಾರಿ ನಡೆಸಿ ಕೈ ತೊಳೆದುಕೊಳ್ಳುವ ಸಿದ್ಧತೆಯಲ್ಲಿದೆ. ಇದನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕು ಮತ್ತು ಸ್ಥಳೀಯರ ಸಮಸ್ಯೆ ಇತ್ಯರ್ಥವಾದ ಬಳಿಕ ಟೋಲ್‌ಗೇಟ್ ಆರಂಭಿಸಬೇಕು ಎನ್ನುವುದು ಜನರ ವಾದ.
ನಾಮಫಲಕ ಅಳವಡಿಕೆಯನ್ನು ಪ್ರತ್ಯೇಕ ಗುತ್ತಿಗೆ ನೀಡಲಾಗಿದ್ದು, ಹಲವಾರು ಕಡೆ ಈ ರೀತಿ ತಪ್ಪು ನಡೆದಿದೆ. ದಿಲ್ಲಿಯಿಂದ ಈ ಫಲಕಗಳು ಮುದ್ರಿತವಾಗಿ ಬರುತ್ತಿವೆ. ಈ ಕುರಿತು ಹೆದ್ದಾರಿ ಇಲಾಖೆಗೆ ಪತ್ರ ಬರೆಯಲಾಗಿದ್ದು, ಸಾರ್ವಜನಿಕರಿಂದಲೂ ಮನವಿ ಕಳುಹಿಸಬೇಕಾಗಿದೆ. ಅಸಂಬದ್ಧ ಹೆಸರು ಸರಿಪಡಿಸಲಾಗುತ್ತದೆ.
– ಯೋಗೇಂದ್ರಪ್ಪ
ಐಆರ್‌ಬಿ ಪ್ರಾಜೆಕ್ಟ್ ಮ್ಯಾನೇಜರ್
– ಅರುಣ ಕುಮಾರ್ ಶಿರೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಲಾರಿ-ಬೈಕ್ ಅಪಘಾತ: ಮೆಡಿಕಲ್ ಅಂಗಡಿ ಮಾಲೀಕ ದಾರುಣ ಮೃತ್ಯು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
ರಿಲ್ಯಾಕ್ಸ್ ಮೂಡ್‌ನಲ್ಲಿದ್ದ ದಾಸನಿಗೆ ಖಾಕಿ ಶಾಕ್: ಜಾಮೀನು ರದ್ದು ಕೋರಿ ಸುಪ್ರೀಂಗೆ ಅರ್ಜಿ
MRPL ನಲ್ಲಿ ಉದ್ಯೋಗ ಆಮಿಷ: ಯುವಕನಿಗೆ 1 ಲಕ್ಷ ರೂ.ವಂಚನೆ
Karkala; ಕೋರ್ಟ್‌ಗೆ ಹಾಜರಾದ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.