ಅಶ್ವಾರೋಹಿ ಪೇಜಾವರ ಕಿರಿಯ ಯತಿ!
Team Udayavani, Nov 25, 2017, 8:08 AM IST
ಉಡುಪಿ: ಧರ್ಮಸಂಸದ್ ಉದ್ಘಾಟನೆಗೆ ಪೂರ್ವದಲ್ಲಿ ಶ್ರೀಕೃಷ್ಣ ಮಠದಿಂದ ಅಧಿವೇಶನ ಸ್ಥಳದ ವರೆಗೆ ನಡೆದ ವೈಭವದ ಮೆರವಣಿಗೆಯ ಕೊನೆಯಲ್ಲಿ ಅಶ್ವಾರೋಹಿಯಾಗಿದ್ದ ಪೇಜಾವರ ಮಠದ ಕಿರಿಯ ಯತಿ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರು ಸಾರ್ವಜನಿಕರ ಗಮನ ಸೆಳೆದರು.
ಶುಕ್ರವಾರ ಚಂಪಾಷಷ್ಠಿಯಾದ್ದರಿಂದ ಆ ಪ್ರಯುಕ್ತ ಶ್ರೀಕೃಷ್ಣ ಮಠದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರಿಗೆ ವಾರ್ಷಿಕ ವಿಶೇಷ ಪೂಜೆ ಇತ್ತು. ಹಿರಿಯ ಶ್ರೀಗಳು ಧರ್ಮಸಂಸದ್‌ನಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೊದಲೇ ತೆರಳಿದ್ದರಿಂದ ಪಲ್ಲಪೂಜೆ, ನೈವೇದ್ಯ ಅರ್ಪಣೆಯನ್ನು ಕಿರಿಯ ಯತಿಗಳು ನಡೆಸಬೇಕಾಗಿತ್ತು. ಪೂಜೆ ಮುಗಿಯುವಾಗ ಮೆರವಣಿಗೆ ಆರಂಭವಾಗಿ ಮುಂದೆ ಸಾಗಿತ್ತು. ಸಕಾಲದಲ್ಲಿ ಸೂಕ್ತ ವಾಹನ ವ್ಯವಸ್ಥೆ ಒದಗದೆ ಇದ್ದಾಗ ಶ್ರೀಗಳ ನೆರವಿಗೆ ಬಂದದ್ದು ಮಠದ ಲಾಯದಲ್ಲಿ ಕಟ್ಟಿ ಹಾಕಿದ್ದ ಅಶ್ವ. ಕುದುರೆಗೆ ಜೀನು ಬಿಗಿದ ಶ್ರೀಗಳು ಅದರ ಬೆನ್ನೇರಿಯೇ ಬಿಟ್ಟರು. ಮೆರವಣಿಗೆ ರೋಯಲ್ ಗಾರ್ಡನ್ ತಲುಪುವಾಗ ಶ್ರೀಗಳು ಕೂಡ ಅಲ್ಲಿಗೆ ಮುಟ್ಟಿದ್ದರು! ಕುದುರೆ ಸವಾರಿ ಕಲೆ ಎಲ್ಲರಿಗೂ ಗೊತ್ತಿರುವುದಿಲ್ಲ. ಅದಕ್ಕೆ ವಿಶೇಷವಾದ ತರಬೇತಿಯ ಅಗತ್ಯವಿದೆ. ಪೂರ್ವ ತರಬೇತಿ ಇಲ್ಲದವರು ಕುದುರೆ ಏರಿದರೆ ಅಪಾಯ ಎದುರಾಗುವ ಸಂಭವವೂ ಇರುತ್ತದೆ. ಶ್ರೀಗಳು ಕುದುರೆ ಸವಾರಿಯನ್ನೂ ಕರಗತ ಮಾಡಿಕೊಂಡವರಾದ್ದರಿಂದ ಕೊನೆಯ ಕ್ಷಣದಲ್ಲಿ ನೆರವಿಗೆ ಬಂದದ್ದು ಅದೇ ವಿದ್ಯೆ.
ಪ್ರಶಾಂತ್ ಪಾದೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.