“ಆಸ್ಪತ್ರೆಗಳು ಗುಣಮಟ್ಟ ಕಾಯ್ದುಕೊಳ್ಳುವುದು ಅಗತ್ಯ’
Team Udayavani, Sep 26, 2019, 5:09 AM IST
ಕುಂದಾಪುರ: ಆಸ್ಪತ್ರೆಗಳು ಭಾರತ ಸರಕಾರದ ಸ್ವಾಯತ್ತ ಸಂಸ್ಥೆ “ಎನ್. ಎ.ಬಿ.ಎಚ್’ ಮಾನ್ಯತೆ ಪಡೆದುಕೊಳ್ಳುವುದು ಅಷ್ಟು ಸುಲಭವಲ್ಲ. ಕಠಿನ ಪರಿಶ್ರಮದೊಂದಿಗೆ ನಿರೀಕ್ಷಿತ ನಿಯಮಾವಳಿಗಳನ್ನು ಪಾಲಿಸುತ್ತಾ ಉತ್ತಮ ಗುಣಮಟ್ಟವನ್ನು ಎಲ್ಲ ವಿಭಾಗಗಳಲ್ಲೂ ಕಾಯ್ದುಕೊಳ್ಳಬೇಕಾಗುತ್ತದೆ ಎಂದು ವೈದ್ಯ, ಬೆಂಗಳೂರಿನ ನಾರಾಯಣ ನೇತ್ರಾಲಯದ ಸ್ಥಾಪಕ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಡಾ| ಕೆ. ಭುಜಂಗ ಶೆಟ್ಟಿ ಹೇಳಿದರು.
ಕೋಟೇಶ್ವರದ ಅಂಕದಕಟ್ಟೆಯ ಸರ್ಜನ್ ಆಸ್ಪತ್ರೆಗೆ “ನ್ಯಾಶನಲ್ ಅಕ್ರಿಡಿಟೇಶನ್ ಬೋರ್ಡ್ ಫಾರ್ ಹಾಸ್ಪಿಟಲ್ಸ್ ಆ್ಯಂಡ್ ಹೆಲ್ತ್ ಕೇರ್’ ನಿಂದ ರಾಷ್ಟ್ರೀಯ ಮಾನ್ಯತೆ ಪಡೆದ ಅಂಗವಾಗಿ ಕೋಟೇಶ್ವರದ ಸಹನಾ ಕನ್‌ವೆನ್ಶನ್ ಸೆಂಟರ್‌ನ ಸಭಾಂಗಣದಲ್ಲಿ ಏರ್ಪಡಿಸಿದ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸದ್ಯ ಸುಮಾರು 60,000 ಆಸ್ಪತ್ರೆಗಳಲ್ಲಿ 700ರಷ್ಟು ಆಸ್ಪತ್ರೆಗಳು ಮಾತ್ರ ಈ ಮಟ್ಟ ಕಾಯ್ದುಕೊಳ್ಳಲು ಶಕ್ತವಾಗಿವೆ. ಕೋಟೇಶ್ವರದ ಅಂಕದ ಕಟ್ಟೆಯ ಗ್ರಾಮೀಣ ಪ್ರದೇಶದಲ್ಲಿರುವ ಆಸ್ಪತ್ರೆ “ಎನ್. ಎ.ಬಿ.ಎಚ್.’ ಮಾನ್ಯತೆ ಪಡೆದಿರುವುದು ನಿಜವಾಗಿಯೂ ಶ್ರೇಷ್ಠ ಸಾಧನೆ ಂದು ಅವರು ಹೇಳಿ ದ ರು.
ಬೆಂಗಳೂರು ಆರ್.ವಿ. ಮೆಟ್ರೊ ಪೊಲೀಸ್‌ನ ಎಂ.ಡಿ. ಡಾ| ರವಿಕುಮಾರ್ ಎಚ್.ಎನ್, ಕುಂದಾಪುರ ಐ.ಎಂ.ಎ. ಘಟಕದ ಅಧ್ಯಕ್ಷ ಡಾ| ಶೇಖರ್ ಉಪಸ್ಥಿತರಿದ್ದರು.
ಸ್ವಾತಂತ್ರÂ ಹೋರಾಟಗಾರ, 98ರ ಹರೆಯದ ಹುಲಿಕಲ್ ನಾಗಭೂಷಣ್ ರಾವ್ ಅವರನ್ನು ಸಮ್ಮಾ¾ನಿಸಿ ಗೌರವಿಸಲಾಯಿತು.
ಲೇಖಕ ಪ್ರಕಾಶಕ, ಸಮಾಜ ಶಾಸ್ತ್ರ ತಜ್ಞ ಸಿ.ಎನ್. ಶಂಕರ ರಾವ್, ಡಾ| ಎಚ್. ರಾಮಮೋಹನ್, ಡಾ| ಎಂ. ಆರ್.ಅಡಿಗ ಅತಿಥಿಗಳನ್ನು ಪರಿಚಯಿಸಿದರು.
ಸರ್ಜನ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ತಜ್ಞ ಡಾ| ಎಚ್.ಎ.ವಿಶ್ವೇಶ್ವರ ಸ್ವಾಗತಿಸಿದರು. ಅರಿವಳಿಕೆ ತಜ್ಞೆ ಡಾ| ವನಿತಾಲಕ್ಷ್ಮೀ ಎನ್. ಎ. ಬಿ. ಹೆಚ್. ಮಾನ್ಯತೆ ಪಡೆದ ಕುರಿತು ವಿವರಿಸಿದರು. ಡಾ| ಅದಿಶ್ರೀ ರಾವ್ ಅತಿಥಿಗಳನ್ನು ಗೌರವಿಸಿದರು. ಡಾ| ವಿಲಾಸ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ
Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ
ಉಡುಪಿ: ಶಿಕ್ಷಣ ಇಲಾಖೆಯಲ್ಲಿ ಪ್ರತ್ಯೇಕ ಪರಿಹಾರ ನಿಧಿಯೇ ಇಲ್ಲ !
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.