![Sulya-1](https://www.udayavani.com/wp-content/uploads/2025/02/Sulya-1-415x249.jpg)
![Sulya-1](https://www.udayavani.com/wp-content/uploads/2025/02/Sulya-1-415x249.jpg)
Team Udayavani, Jun 1, 2019, 6:00 AM IST
ಮಲ್ಪೆ: ನಗರಸಭಾ ವ್ಯಾಪ್ತಿಯ ಕಲ್ಮಾಡಿ ವಾರ್ಡ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು. ಇಲ್ಲಿನ ವಾರ್ಡ್ ಸದಸ್ಯ ಸುಂದರ ಜೆ. ಕಲ್ಮಾಡಿ ಅವರು ತನ್ನ ದ್ವಿಚಕ್ರ ವಾಹನದಲ್ಲಿ 35ಲೀಟರಿನ ಕ್ಯಾನ್‌ನಲ್ಲಿ ಅತೀ ಅಗತ್ಯ ಕಂಡವರಿಗೆ ಫೋನ್ ಮಾಡಿ ಕರೆಸಿಕೊಂಡವರಿಗೆ ನೀರು ಸರಾಬರಾಜು ಮಾಡುತ್ತಿದ್ದಾರೆ. ಆ ಮೂಲಕ ಕಲ್ಮಾಡಿ ವಾರ್ಡ್ ಜನರಿಂದ ಆಪದ್ಬಾಂಧವರೆನಿಕೊಂಡಿದ್ದಾರೆ.
ಕಲ್ಮಾಡಿ ವಾರ್ಡ್‌ನ ಬಹುಭಾಗ ಉಪ್ಪು ನೀರಿನ ಹೊಳೆಗಳಿಂದಾವೃತವಾದ ಪ್ರದೇಶ. ಇಲ್ಲಿ ವರ್ಷ ಪೂರ್ತಿ ನಗರಸಭೆಯ ನೀರನ್ನೆ ಅವಲಂಬಿಸಬೇಕಾದ ಪರಿಸ್ಥಿತಿ ಇದೆ. ಇದೀಗ ಬಜೆಯಲ್ಲೆ ನೀರಿಲ್ಲ. ಇಲ್ಲಿನ ಜನರು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಟ್ಯಾಂಕರ್ ಮೂಲಕ ಉಚಿತವಾಗಿ ನೀರು ಸರಬರಾಜು ಮಾಡುವ ಸಾಮರ್ಥ್ಯ ಇಲ್ಲದ್ದರಿಂದ ಯಾರ ನೆರವನ್ನೂ ಪಡೆಯದೆ ತನ್ನ ಸ್ವಂತ ವಾಹನದಲ್ಲಿ ನೀರು ಪೂರೈಸುತ್ತಿದ್ದಾರೆ.
ಕುಡಿಯುವ ನೀರಿನ ಸಮಸ್ಯೆ ಎದುರಾದ ದಿನದಿಂದ ಪ್ರತಿನಿತ್ಯ ದೂರದ ಬಾವಿಯಿಂದ ನೀರನ್ನು ತನ್ನ ನಾಲ್ಕೈದು ಕ್ಯಾನಿನಲ್ಲಿ ಸಂಗ್ರಹಿಸಿ ತನ್ನ ಅಂಗಡಿಯಲ್ಲಿ ಇರಿಸಿಕೊಂಡಿರುತ್ತಾರೆ. ಪೋನ್ ಮೂಲಕ ಕರೆ ಮಾಡಿದವರಿಗೆ ನೀರಿನ ಕ್ಯಾನನ್ನು ತನ್ನ ಆ್ಯಕ್ಟಿವಾ ಹೋಂಡಾ ವಾಹನದಲ್ಲಿರಿಸಿಕೊಂಡು ವಾರ್ಡ್‌ನ ಅವಶ್ಯಕತೆ ಇರುವ ಮನೆಗಳಿಗೆ ಜಾತಿ ಮತ ಭೇದ ಮರೆತು ನೀರು ಸರಾಬರಾಜು ಮಾಡುತ್ತಿದ್ದಾರೆ. ಬೆಳಗ್ಗೆ 7ರಿಂದ ರಾತ್ರಿವರೆಗೂ ನೀರು ಪೂರೈಕೆ ಮಾಡಲಾಗುತ್ತದೆ. ಇದಕ್ಕೆ ತಗಲುವ ವೆಚ್ಚವನ್ನೆಲ್ಲಾ ಅವರೇ ಸ್ವತಃ ಭರಿಸುತ್ತಾರೆ. ಯಾರ ಸಹಾಯವನ್ನು ಪಡೆಯುತ್ತಿಲ್ಲ.
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Sulya: ಪೈಪ್‌ಲೈನ್ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್ ಜಾರಕಿಹೊಳಿ
Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ
Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ
Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ
Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ
You seem to have an Ad Blocker on.
To continue reading, please turn it off or whitelist Udayavani.