ಐಎನ್‌ಎಸ್ ಕೊಚ್ಚಿ ಢಿಕ್ಕಿಯಾದದ್ದು ಹೌದೆ?
Team Udayavani, May 5, 2019, 6:00 AM IST
ಸಾಂದರ್ಭಿಕ ಚಿತ್ರ.
ಉಡುಪಿ: ಸುವರ್ಣ ತ್ರಿಭುಜ ಅವಘಡಕ್ಕೆ ‘ಐಎನ್‌ಎಸ್ ಕೊಚ್ಚಿ’ ಹಡಗು ಕಾರಣವಾಗಿರಬಹುದೆಂಬ ಸಂದೇಹಗಳಿಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಬಗ್ಗೆ ನೌಕಾಪಡೆ ಮಾಹಿತಿ ನೀಡಿಲ್ಲ. ಮೀನುಗಾರ ಮುಖಂಡರು, ವಿವಿಧ ರಾಜಕೀಯ ಮುಖಂಡರು ಏಕ ರೂಪದ ಗುಮಾನಿ ವ್ಯಕ್ತಪಡಿಸಿದ್ದಾರೆ.
ನೌಕಾಪಡೆ ಕೆಲವು ದಿನಗಳ ಹಿಂದೆ ಉಡುಪಿ ಎಸ್‌ಪಿ ಕಚೇರಿಗೆ ನೀಡಿರುವ ಲಿಖೀತ ಉತ್ತರದಲ್ಲಿ ಐಎನ್‌ಎಸ್ ಕೊಚ್ಚಿಗೆ ಹಾನಿಯಾಗಿರುವುದನ್ನು ಸ್ಪಷ್ಟ ಪಡಿಸಿತ್ತು. ಆದರೆ ಅದಕ್ಕೆ ಹಾನಿಯಾಗಿ ರುವುದು ತಳಭಾಗದಲ್ಲಿ. ಅದು ಸುವರ್ಣ ತ್ರಿಭುಜಕ್ಕೆ ಢಿಕ್ಕಿ ಹೊಡೆದಿದ್ದರೆ ಅದರ ಬೇರೆ ಭಾಗಗಳಿಗೆ ಅಂದರೆ ಎದುರು ಅಥವಾ ಯಾವುದಾದರೊಂದು ಬದಿಗೆ ಹಾನಿಯಾಗಿರಬೇಕಿತ್ತು ಎಂಬ ವಾದ ಒಂದು ಕಡೆ. ಬೇರೆ ಯಾವುದೋ ಹಡಗು ಢಿಕ್ಕಿ ಹೊಡೆದು, ಅನಂತರ ಇದೇ ಮಾರ್ಗದಲ್ಲಿ ಸಾಗಿದ ಐಎನ್‌ಎಸ್ ಕೊಚ್ಚಿಯ ತಳಕ್ಕೆ ಅದರ ಅವಶೇಷ ತಾಗಿರಬಹುದು ಎಂಬ ವಾದಗಳೂ ಇವೆ. ಆದರೆ ಬೋಟ್ ನಲ್ಲಿದ್ದವರು ಸಂಪರ್ಕ ಕಳೆದುಕೊಂಡಿ ರುವುದು, ಸುವರ್ಣ ತ್ರಿಭುಜ ಸಾಗಿ ರುವುದು, ಐಎನ್‌ಎಸ್ ಕೊಚ್ಚಿ ಹಾನಿ, ಅದು ಸಾಗಿರುವ ಹಾದಿ ಮತ್ತು ದಿನ, ಸಮಯ ಇವೆಲ್ಲವೂ ಸಾಮ್ಯತೆ ಹೊಂದಿ ರುವುದು ಐಎನ್‌ಎಸ್ ಕೊಚ್ಚಿ ಮೇಲಿನ ಸಂಶಯ ಬಲಗೊಳ್ಳಲು ಕಾರಣ.
ರಾಡಾರ್ ಕೆಲಸ ಮಾಡಿಲ್ಲವೆ?
ಒಂದು ವೇಳೆ ಎದುರಿನಲ್ಲಿ ಬೋಟ್ ಇದ್ದಿದ್ದರೆ ಅತ್ಯಾಧುನಿಕ, ರಾಡಾರ್ ವ್ಯವಸ್ಥೆ ಹೊಂದಿರುವ ಐಎನ್‌ಎಸ್ ಕೊಚ್ಚಿಗೆ ಸ್ಪಷ್ಟ ಸಂದೇಶ ದೊರೆಯುತ್ತಿತ್ತು. ಹಾಗಾಗಿಲ್ಲವೇಕೆ ಎಂಬ ಪ್ರಶ್ನೆಗಳು ಎದ್ದಿವೆ. ಮಲ್ಪೆಯಿಂದ ಹೊರಟ ಬೋಟ್ ಈ ರೀತಿಯಾಗಿ ಅವಘಡಕ್ಕೆ ತುತ್ತಾಗಿರುವುದು ಇದೇ ಮೊದಲು ಎನ್ನುತ್ತಾರೆ ಮೀನುಗಾರ ಮುಖಂಡರು. ಈ ಹಿಂದೆ ಕೂಡ ಇದೇ ಮಾರ್ಗದಲ್ಲಿ ಬೋಟ್‌ಗಳು ಸಂಚರಿಸಿದ್ದವು. ನೌಕಾಪಡೆ ಹಡಗುಗಳು ಕೂಡ ಸಂಚರಿಸುತ್ತಿದ್ದವು. ಇಂಥ ಘಟನೆ, ನಿಗೂಢತೆ ಸೃಷ್ಟಿಯಾಗಿರ ಲಿಲ್ಲ. ನೌಕಾಪಡೆ ಅಧಿಕೃತವಾಗಿ ತಿಳಿಸಿದರೆ ಮಾತ್ರವೇ ಸ್ಪಷ್ಟ ಚಿತ್ರಣ ದೊರೆಯ ಬಹುದು ಎನ್ನುವುದು ಮೀನುಗಾರ ಮುಖಂಡರ ಅಭಿಪ್ರಾಯ.
ಐಎನ್‌ಎಸ್ ಬೆನ್ನುಬಿದ್ದ ಮೀನುಗಾರರು
ಐಎನ್‌ಎಸ್ ಕೊಚ್ಚಿಗೆ ಹಾನಿಯಾಗಿದೆ ಎಂಬ ಮಾಹಿತಿ ಲಭ್ಯವಾದ ಕೂಡಲೇ ಮೀನುಗಾರರು ಆ ಹಡಗಿನ ಬಗ್ಗೆಯೇ ಸಂದೇಹ ವ್ಯಕ್ತಪಡಿಸಿದ್ದರು. ಆ ಸಂದೇಹ ಇದುವರೆಗೂ ಮುಂದುವರಿದಿದೆ.
ನೌಕಾಪಡೆಗೆ ಎಸ್‌ಪಿ ಪತ್ರ
ಬೋಟ್ ಅವಶೇಷಗಳು ಪತ್ತೆಯಾಗಿ ರುವ ಬಗ್ಗೆ ಶಾಸಕ ಭಟ್ ನೀಡಿರುವ ಹೇಳಿಕೆ, ನೌಕಾದಳ ತನ್ನ ಟ್ವಿಟರ್‌ನಲ್ಲಿ ನೀಡಿರುವ ಮಾಹಿತಿ ಕುರಿತು ವರದಿ ನೀಡುವಂತೆ ಕಾರವಾರ ನೌಕಾನೆಲೆಯ ನೌಕಾಪಡೆಗೆ ಪತ್ರ ಬರೆಯಲಾಗಿದೆ ಎಂದು ಎಸ್‌ಪಿ ನಿಶಾ ತಿಳಿಸಿದ್ದಾರೆ.
ಸರಕು ನೌಕೆ ಮೇಲೂ ಸಂದೇಹ
ಸುವರ್ಣ ತ್ರಿಭುಜ ಸಂಪರ್ಕ ಕಡಿದು ಕೊಂಡ ದಿನ ಸರಕು ಸಾಗಾಟ ನೌಕೆ ಸೀ ಹಾರ್ವೆಸ್ಟ್ ಕೂಡ ಸಂಚರಿಸಿದೆ ಎಂದು ನೌಕಾಪಡೆ ತಿಳಿಸಿತ್ತು. ಆ ನೌಕೆಗೂ ಹಾನಿಯಾಗಿತ್ತೆ? ಅದು ಢಿಕ್ಕಿಯಾಗಿರ ಬಹುದೆ ಎಂಬ ನಿಟ್ಟಿನಲ್ಲಿಯೂ ತನಿಖೆ ನಡೆದರೆ ಇನ್ನೊಂದು ಆಯಾಮವೂ ದೊರೆಯಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.