ನಮಗೆಷ್ಟು ಮತ ಬರಬಹುದು…? ಬೂತ್ ಬೂತ್‌ಗಳಿಂದ ಮಾಹಿತಿ ಸಂಗ್ರಹ
Team Udayavani, May 8, 2023, 8:10 AM IST
ಉಡುಪಿ: ಚುನಾವಣೆ ಎಂದರೆ ಅಲ್ಲಿ ತಂತ್ರ ಗಾರಿಕೆಗೇ ಹೆಚ್ಚು ಪ್ರಾಮುಖ್ಯ. ಚುನಾವಣೆ ಘೋಷಣೆಯಾದ ದಿನದಿಂದ ಮತದಾನದ ದಿನದವರೆಗೂ ಎಲ್ಲ ಪಕ್ಷಗಳು ತಮ್ಮದೇ ನೆಲೆಯಲ್ಲಿ ಕಾರ್ಯ ನಿರತವಾಗಿರುತ್ತವೆ.
ಇದೀಗ ಮತದಾನ ದಿನಾಂಕ ಸಮೀಪಿಸು ತ್ತಿರುವುದರಿಂದ ಬೂತ್ ಮಟ್ಟದಲ್ಲಿ ಆಗಿರುವ ಕಾರ್ಯಗಳು, ಮನೆ ಮನೆ ಸಂಪರ್ಕ, ಕಾರ್ಯಕರ್ತರ ಸಭೆ, ವಿವಿಧ ಸಮಾ ವೇಶಗಳನ್ನು ಆಧರಿಸಿ ಬರಬಹುದಾದ ಮತಗಳ ಮಾಹಿತಿ ಸಂಗ್ರಹಕ್ಕೆ ಎಲ್ಲ ಪಕ್ಷಗಳ ತಂತ್ರಗಾರಿಕೆಯ ತಂಡ ಮುಂದಾಗಿದೆ.
ಬೂತ್ ಮಟ್ಟದಲ್ಲಿರುವ ತಮ್ಮ ಕಾರ್ಯ ಕರ್ತರ ಮೂಲಕ ಪಕ್ಷದ ಹಿತೈಷಿಗಳು, ಬೆಂಬಲಿಗರು ಹಾಗೂ ಕಾರ್ಯಕರ್ತರ ಮನೆಗಳ ಸಹಿತವಾಗಿ ಪಕ್ಷದ ಅಭ್ಯರ್ಥಿಗೆ ನಿಖರವಾಗಿ ಬೀಳಬಹುದಾದ ಮತಗಳು, ಯಾವುದೇ ಪಕ್ಷದಲ್ಲೂ ಗುರುತಿಸಿಕೊಳ್ಳದೇ ತಟಸ್ಥವಾಗಿರುವ ಮನೆಗಳು, ಪಕ್ಷದ ಪರವಾಗಿ ಇಲ್ಲದ ಮನೆಗಳ ಮಾಹಿತಿ ಪಡೆದು, ಯಾವ ಬೂತ್‌ನಿಂದ ಎಷ್ಟು ಮತ ಬರಬಹುದು, ಹೆಚ್ಚಿಸಿಕೊಳ್ಳುವುದು ಹೇಗೆ ಇತ್ಯಾದಿ ವಿಷಯ ಆಧರಿಸಿ ಕಾರ್ಯತಂತ್ರ ಹೆಣೆಯಲಾಗುತ್ತಿದೆ.
ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಕೊನೆಯ ಕ್ಷಣದಲ್ಲಿ ಹೇಗೂ ಬದಲಾಗಬಹು ದಾದ ಮತಗಳನ್ನು ತಮ್ಮ ಪಕ್ಷದ ಕಡೆಗೆ ಸೆಳೆಯುವುದು ಕಾರ್ಯಕರ್ತರ ಮೊದಲ ಆದ್ಯತೆಯ ಕೆಲಸ. ಇದಕ್ಕಾಗಿ ಸಮುದಾಯದ ಮುಖಂಡರು, ಊರಿನ ಹಿರಿಯರು, ಮುಖಂಡರ ಪ್ರಭಾವವನ್ನೂ ಬಳಸುವುದಿದೆ.ಒಂದೇ ಒಂದೇ ಕುಟುಂಬದಲ್ಲಿ 40-50 ಮತ ಇರುವಲ್ಲಿ ಮನೆಯ ಹಿರಿಯರಿಗೆ ಅಭ್ಯರ್ಥಿ ಗಳೇ ಕರೆ ಮಾಡಿ ಮಾತುಕತೆ ನಡೆಸುತ್ತಿ¨ªಾರೆ.
ಫಲಿತಾಂಶ ನಿಂತಿರುವುದು ಬೂತ್ ಹಂತದ ಮತಗಳ ಲೆಕ್ಕಾಚಾರದ ಆಧಾರದಲ್ಲಿ. ಯಾವ ಬೂತ್‌ನಲ್ಲಿ ಎಷ್ಟು ಮತ ಬರಲಿದೆ ಎಂಬುದು ಬಹುತೇಕ ಸ್ಥಳೀಯ ಮುಖಂಡರಿಗೆ, ಕಾರ್ಯಕರ್ತರಿಗೆ ಸ್ಪಷ್ಟತೆ ಇರುತ್ತದೆ. ಹೀಗಾಗಿ ಮುನ್ನಡೆ ಕಡಿಮೆ ಬರಬಹುದಾದ ಪ್ರದೇಶಗಳ ಮೇಲೆ ಗಮನ ಕೇಂದ್ರೀಕರಿಸಿ ಕೊನೇ ಹಂತದ ಪ್ರಚಾರ, ಮನೆ ಮನೆ ಭೇಟಿ, ಸ್ಟಾರ್ ಪ್ರಚಾರಕರ ಕಾರ್ಯಕ್ರಮ ಇತ್ಯಾದಿ ನಡೆಸಲಾಗುತ್ತಿದೆ.
ಪ್ರತ್ಯೇಕ ವ್ಯವಸ್ಥೆ
ಮತ ಲೆಕ್ಕಾಚಾರದ ಮಾಹಿತಿ ಸಂಗ್ರಹಕ್ಕೆ ಪ್ರತೀ ಪಕ್ಷದಲ್ಲೂ ಪ್ರತ್ಯೇಕ ವ್ಯವಸ್ಥೆ ಇರುತ್ತದೆ. ಸದ್ಯ ಆನ್‌ಲೈನ್, ದೂರವಾಣಿ ಮೂಲಕ ಪ್ರತೀ ದಿನ ಸಂಜೆ ಬೂತ್ ಪ್ರಮುಖರಿಗೆ ಕರೆ ಮಾಡಿ ಅಥವಾ ವಾಟ್ಸ್‌ಆ್ಯಪ್ ಮೂಲಕ ಮಾಹಿತಿ ಸಂಗ್ರಹಿಸಲಾಗುತ್ತದೆ. ಇದರ ಆಧಾರದಲ್ಲಿ ಯಾವ ಪ್ರದೇಶಕ್ಕೆ ಹೆಚ್ಚು ಒತ್ತು ನೀಡಬೇಕು ಎಂಬುದನ್ನು ತಿಳಿಸಲಾಗುತ್ತದೆ.
ಅದರಂತೆ ಅಂತಿಮ ತಂತ್ರಗಾರಿಕೆಯನ್ನು ರೂಪಿಸಲಾಗುತ್ತದೆ. ಆ ಮೂಲಕ ಮತ ಸೆಳೆಯುವ ಪ್ರಯತ್ನ ನಡೆಯುತ್ತದೆ. ತಮ್ಮ ಪಕ್ಷಕ್ಕೆ ಮತ ಬರುವುದು ಕಷ್ಟ ಎನ್ನುವ ಬೂತ್‌ಗಳಲ್ಲಿ ಅಂತಿಮ ತಂತ್ರಗಾರಿಕೆ ಎಲ್ಲ ಪಕ್ಷದಲ್ಲೂ ಇದೆ. ಮತದಾನಕ್ಕೂ ಮೊದಲ ದಿನ ರಾತ್ರಿ ವಿಶೇಷ ಅಸ್ತ್ರ ಬಳಸಿ ಮತ ಸೆಳೆಯುತ್ತಾರೆ. ಇದರಿಂದ ಮತ ಪ್ರಮಾಣ ಹೆಚ್ಚಾಗುವುದು ಉಂಟು ಅಥವಾ ಆ ಅಸ್ತ್ರ ಗುರಿ ಮುಟ್ಟದೆಯೂ ಇರಬಹುದು. ಆದರೆ ಅದರ ಪ್ರಯೋಗದಲ್ಲಿ ಯಾರು ಹಿಂದೆ ಬೀಳುವುದಿಲ್ಲ.
ಹೊಸ ಮತದಾರರಿಗೆ ಪತ್ರ
ಪರಿಷ್ಕೃತ ಮತದಾರರ ಪಟ್ಟಿಯನ್ನು ನೀಡಲಾಗಿದೆ. ಅದರಂತೆ ಪಕ್ಷಗಳು ಹೊಸ ಮತದಾರರಿಗೆ ಅಭ್ಯರ್ಥಿ ಅಥವಾ ಪಕ್ಷದ ಹಿರಿಯ ಮುಖಂಡರ ಸಂದೇಶ ಆಧಾರಿತ ಪತ್ರವನ್ನು ಅಂಚೆ ಮೂಲಕ ರವಾನಿಸುತ್ತಿವೆ.ಕ್ಷೇತ್ರದ ಸಮಗ್ರ ಪ್ರಗತಿಗೆ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸಲು ಕೋರಲಾಗಿದೆ.
- ರಾಜು ಖಾರ್ವಿ ಕೊಡೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.