ಅಪಾಯಕಾರಿ ಸ್ಥಿತಿಯಲ್ಲಿದ್ದ ಎಚ್‌ಟಿ ಲೈನ್ ಸ್ಥಳಾಂತರ
Team Udayavani, May 4, 2019, 6:00 AM IST
ಸ್ಥಳಾಂತರಗೊಂಡ ಎಚ್‌ಟಿ ಲೈನ್ .
ಕಾರ್ಕಳ: ನಿಟ್ಟೆ ಗ್ರಾಮದ ಪದವು ಬಳಿ ಅಪಾಯಕಾರಿಯಾಗಿ ಕಂಡುಬರುತ್ತಿದ್ದ ಎಚ್‌ಟಿ ವಿದ್ಯುತ್ ತಂತಿಯನ್ನು ಗುತ್ತಿಗೆದಾರರು ಸ್ಥಳಾಂತರಿಸಿದ್ದಾರೆ. ಕಾರ್ಕಳ -ಉಡುಪಿ ರಸ್ತೆಯ ಗುಂಡ್ಯಡ್ಕ ಪದವು ಎಂಬಲ್ಲಿ ಮುಖ್ಯ ರಸ್ತೆಗೆ ಅಡ್ಡಲಾಗಿ ಮೋರಿ ಅಳವಡಿ ಸುವ ಸಂದರ್ಭ ರಸ್ತೆಯನ್ನು ಏರಿಸ ಲಾಗಿತ್ತು. ಈ ವೇಳೆ ವಿದ್ಯುತ್ ಕಂಬವನ್ನು ಏರಿಸದೇ ಹಾಗೆಯೇ ಬಿಡಲಾಗಿತ್ತು. ಪರಿಣಾಮ ತಂತಿ ತಗ್ಗಲ್ಲಿದ್ದು, ಅವಘಢವನ್ನು ಆಹ್ವಾನಿಸುವಂತಿತ್ತು.
ವರದಿ ಫಲಶ್ರುತಿ
ತಂತಿ ತೀರಾ ತಗ್ಗಲಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ ಎಂದು ಮೇ 1ರಂದು ಉದಯವಾಣಿ ಪತ್ರಿಕೆ ಸಚಿತ್ರ ವರದಿ ಪ್ರಕಟಿಸಿ, ಸಂಭವಿಸಬಹುದಾದ ಅಪಾಯ ಕುರಿತು ಎಚ್ಚರಿಸಿತ್ತು. ಗುತ್ತಿಗೆದಾರರು, ಲೋಕೋ ಪಯೋಗಿ ಇಲಾಖೆ, ಮೆಸ್ಕಾಂ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುವಂತೆಯೂ ಆಗ್ರಹಿ ಸಿತ್ತು. ಸಮಸ್ಯೆಯ ಗಂಭೀರತೆ ಯನ್ನು ಮನಗಂಡ ಮೆಸ್ಕಾಂನ ಕಾರ್ಯನಿರ್ವಾಹಕ ಎಂಜಿನಿಯರ್ ನಾರಾಯಣ ನಾಯ್ಕ ಅವರು ರಸ್ತೆ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರರಿಗೆ ವಿದ್ಯುತ್ ತಂತಿ ಏರಿಸುವಂತೆ ಸೂಚಿಸಿದ್ದರು. ಅಂದೇ ಗುತ್ತಿಗೆದಾರರು ಕಂಬ ಸ್ಥಳಾಂತರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದು ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.