ನೂರಾರು ಎಕ್ರೆ ಕೃಷಿ ಭೂಮಿಯ ಜಲಮೂಲಕ್ಕೆ ಮರು ಜೀವ
Team Udayavani, Jul 18, 2019, 5:03 AM IST
ಬೆಳ್ಮಣ್: ಇನ್ನಾ ಗ್ರಾಮದ ಕಾಚೂರಿನ ನೂರಾರು ಎಕ್ರೆ ಕೃಷಿ ಭೂಮಿಗೆ ನೀರುಣಿಸ ಬಹುದಾದ ಕಾಂಜರಕಟ್ಟೆಯ ಪುರಾತನ ಕೆರೆಗೆ ಇನ್ನಾ ಗ್ರಾ.ಪಂ. ಕಾಯಕಲ್ಪ ಒದಗಿಸುವ ಮೂಲಕ ಕೃಷಿಕರ ಶ್ಲಾಘನೆಗೆ ಪಾತ್ರವಾಗಿದೆ.
ಈ ಕೆರೆಯ ಕಟ್ಟೆಯೊಡೆದ ಪರಿಣಾಮ ನೀರು ಪೋಲಾಗುತ್ತಿದ್ದುದನ್ನು ಮನಗಂಡ ಇಲ್ಲಿನ ಪಂಚಾಯತ್ ಆಡಳಿತ ಸಣ್ಣ ನೀರಾವರಿ ಇಲಾಖೆಯ ಸಹಯೋಗದಿಂದ ಸುಮಾರು 1 ಲಕ್ಷ ರೂ. ವೆಚ್ಚದಲ್ಲಿ ತಡೆಗೋಡೆ ನಿರ್ಮಿಸಿ ನೀರು ವ್ಯವಸ್ಥಿತವಾಗಿ ಹರಿದು ಹೋಗುವಂತೆ ಮಾಡಿದೆ.
ನೂರಾರು ಎಕ್ರೆ ಜಮೀನಿಗೆ ಜಲಮೂಲ
ಈ ಕೆರೆಯ ನೀರು ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಚೂರು, ಗಾಂದಟ್ಟೆ, ಮಠದ ಕೆರೆ ಭಾಗದ ನೂರಾರು ಎಕ್ರೆ ಕೃಷಿಭೂಮಿಗಳಿಗೆ ಆಧಾರವಾಗಿದೆ. ಇದೀಗ ಇನ್ನಾ ಗ್ರಾ.ಪಂ. ಆಡಳಿತ ಕೆರೆಯ ಹೂಳೆತ್ತುವುದರ ಜತೆಗೆ ಕಟ್ಟೆಯನ್ನೂ ಸುಭದ್ರವಾಗಿಸಿ ಜಲಕ್ಷಾಮದ ಆತಂಕ ದೂರ ಮಾಡಿದೆ.
ಪರಿಣಾಮ ಈ ಕೆರೆ ವರ್ಷದ ಕೊನೆಯವರೆಗೂ ತುಂಬಿದ್ದು ಅಕ್ಕಪಕ್ಕದ ಬಾವಿಗಳಲ್ಲಿಯೂ ನೀರಿನ ಒರತೆ ಕಡಿಮೆಯಾಗದಂತೆ ಮಾಡಿದೆ.
ಈ ಹಿಂದೆ ಕೆರೆಯ ಕಟ್ಟೆ ಒಡೆದ ಪರಿಣಾಮ ಈ ಭಾಗದ ಜನರಲ್ಲಿ ಆತಂಕ ಸೃಷ್ಟಿಯಾಗಿತ್ತು. ಆದರೆ ಇದೀಗ ಸಣ್ಣ ನೀರಾವರಿ ಇಲಾಖೆಯ ಸಹಾಯದಿಂದ ಕಟ್ಟೆಯನ್ನು ಭದ್ರವಾಗಿ ಕಟ್ಟಲಾಗಿದ್ದು ಮಂಗಳವಾರ ಇಲ್ಲಿನ ನಾಗರಿಕರು ಈ ಕಟ್ಟೆಯನ್ನು ಇನ್ನಷ್ಟು ಭದ್ರವಾಗಿಸಲು ವಿವಿಧ ಗಿಡ ಮರಗಳನ್ನು ಕಟ್ಟೆಯ ಅಕ್ಕ -ಪಕ್ಕ ನೆಟ್ಟಿದ್ದಾರೆ. ಇನ್ನಾ ಗ್ರಾ.ಪಂ. ಉಪಾಧ್ಯಕ್ಷ ಕುಶಾ ಆರ್. ಮೂಲ್ಯ, ಸದಸ್ಯ ಅಲೆನ್ ಡಿ’ಸೋಜಾ, ಗ್ರಾಮಸ್ಥರಾದ ದೀಪಕ್ ಕಾಮತ್, ಯೋಗೀಶ್ ಆಚಾರ್ಯ, ಸುರೇಶ್ ಮೂಲ್ಯ, ಪ್ರದೀಪ್ ಅಂಚನ್, ರೂಪೇಶ್, ಭದ್ರ, ಕೃಷ್ಣ ಪೂಜಾರಿ, ವಾಸು ಸೇರ್ವೆಗಾರ, ಭಾಸ್ಕರ ಗೌಡ,ಜಾನ್ ಮೆಂಡೋನ್ಸಾ ಮತ್ತಿತರರು ಈ ಕಾರ್ಯಕ್ಕೆ ಕೈಜೋಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.