ಶಿಬಿರ ನೂರಾರು ಕುಟುಂಬಗಳಿಗೆ ದಾರಿದೀಪ’

ಮೂಡುಬೆಳ್ಳೆ: 1,356ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

Team Udayavani, Jul 4, 2019, 5:25 AM IST

shibira

ಶಿರ್ವ: ಮದ್ಯವ್ಯಸನಕ್ಕೆ ತುತ್ತಾದವರನ್ನು ಪ್ರೀತಿ, ಕಾಳಜಿಯಿಂದ ನೋಡಿಕೊಂಡು ಧಾರ್ಮಿಕ, ವೈಜ್ಞಾನಿಕ ಕ್ರಮಗಳ ಮೂಲಕ ವ್ಯಸನಮುಕ್ತಗೊಳಿಸಿ ಮುಖ್ಯವಾಹಿನಿಗೆ ತರುವ ಮಹತ್ಕಾರ್ಯ ದೇವರು ಮೆಚ್ಚುವ ಕೆಲಸವಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಲವು ವರ್ಷಗಳಿಂದ ಈ ಸೇವೆಯ ಮೂಲಕ ನೂರಾರು ಕುಟುಂಬಗಳಿಗೆ ದಾರಿದೀಪವಾಗಿದೆ. ಅಮಲು ಪದಾರ್ಥ ಸೇವನೆ ಒಂದು ರೋಗವಾಗಿದ್ದು ಅದನ್ನು ಚಿಕಿತ್ಸೆಯಿಂದ ಗುಣಪಡಿಸಲು ಸಾಧ್ಯ ಎಂದು ಮೂಡುಬೆಳ್ಳೆ ಸಂತ ಲಾರೆನ್ಸ್‌ ಚರ್ಚ್‌ನ ಪ್ರಧಾನ ಧರ್ಮಗುರು ರೆ|ಫಾ| ಕ್ಲೆಮೆಂಟ್ ಮಸ್ಕರೇನ್ಹಸ್‌ ಹೇಳಿದರು.

ಮಂಗಳವಾರ ಮೂಡುಬೆಳ್ಳೆ ಲಯನ್ಸ್‌ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್‌ ಉಡುಪಿ ತಾ|, ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ಬೆಳ್ತಂಗಡಿ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು, ಮದ್ಯವರ್ಜನ ವ್ಯವಸ್ಥಾಪನ ಸಮಿತಿ ಮೂಡುಬೆಳ್ಳೆ ಹಾಗೂ ಮೂಡುಬೆಳ್ಳೆಯ ವಿವಿಧ ಸಾಮಾಜಿಕ ಸೇವಾ ಸಂಘಟನೆಗಳ ಸಹಯೋಗದಲ್ಲಿ 8 ದಿನಗಳ ಕಾಲ ನಡೆಯುವ 1356ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಧ.ಗ್ರಾ. ಯೋಜನೆಯ ಉಡುಪಿ ಜಿಲ್ಲಾ ನಿರ್ದೇಶಕ ಗಣೇಶ್‌ ಬಿ. ಮಾತನಾಡಿ, ಮನೆಯ ಪರಿಸ್ಥಿತಿ, ಬಾಹ್ಯಒತ್ತಡ, ಸಹವಾಸ ದೋಷ, ಭವಿಷ್ಯದ ಚಿಂತನೆ ಇಲ್ಲದಿರುವುದು, ಮಾನಸಿಕ ದೌರ್ಬಲ್ಯ ಮುಂತಾದ ಕಾರಣಗಳಿಂದ ಜನರು ದುವ್ಯರ್ಸನಕ್ಕೆ ಬಲಿಯಾಗುತ್ತಿರುವುದರಿಂದ ಕುಟುಂಬದಲ್ಲಿ ಅಶಾಂತಿ, ಬಡತನ, ವ್ಯಕ್ತಿತ್ವ ನಾಶ, ವಿವಿಧ ರೋಗಗಳಿಗೆ ತುತ್ತಾಗಿ ಕೌಟುಂಬಿಕ ಜೀವನ ನಾಶವಾಗುತ್ತದೆ. ಮದ್ಯವ್ಯಸನಿಗಳನ್ನು ನಿಯಂತ್ರಿಸಲು ಸಾಧ್ಯವಿದ್ದು, ಇದರಲ್ಲಿ ಮನೆಯ ಮಹಿಳೆಯ ಪಾತ್ರ ಮಹತ್ವದ್ದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ತಾ| ಜನಜಾಗೃತಿ ವೇದಿಕೆ ಅಧ್ಯಕ್ಷ ಅಚ್ಚುತ ಪೂಜಾರಿ, ತಾ.ಪಂ. ಸದಸ್ಯೆ ಗೀತಾ ವಾಗ್ಲೆ, ಮೂಡುಬೆಳ್ಳೆ ಲಯನ್ಸ್‌ ಕ್ಲಬ್‌ ಅಧ್ಯಕ್ಷ ಐವನ್‌ ದಲ್ಮೇದಾ, ಬೆಳ್ಳೆ ಗ್ರಾಮ ಪಂಚಾಯತ್‌ ಅಧ್ಯಕ್ಷೆ ರಂಜನಿ ಹೆಗ್ಡೆ, ಶಿರ್ವ ಗ್ರಾಮ ಪಂಚಾಯತ್‌ ಸದಸ್ಯ ಕೆ.ಆರ್‌. ಪಾಟ್ಕರ್‌, ಮೂಡುಬೆಳ್ಳೆ ಪಾಣಾರ ಸಂಘದ ಅಧ್ಯಕ್ಷ ರಾಜು ಪಾಣಾರ, ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಕೆ. ದೇವದಾಸ ಹೆಬ್ಟಾರ್‌, ಉಡುಪಿ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ನವೀನ್‌ ಅಮೀನ್‌ ಶಂಕರಪುರ ವೇದಿಕೆಯಲ್ಲಿದ್ದರು. ಮದ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷೆ ಸುಜಾತಾ ಸುವರ್ಣ ಅಧ್ಯಕ್ಷತೆ ವಹಿಸಿದ್ದರು.

ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿ ಶಿಬಿರದ ವ್ಯವಸ್ಥೆ, ಪ್ರಯೋಜನದ ಬಗ್ಗೆ ಮಾಹಿತಿ ನೀಡಿದರು. ಉಡುಪಿ ತಾ| ಯೋಜನಾಧಿಕಾರಿ ರೋಹಿತ್‌ ಎಚ್. ಸ್ವಾಗತಿಸಿದರು. ಉಡುಪಿ ಮೇಲ್ವಿಚಾರಕ ಭಾಸ್ಕರ್‌, ಶಿರ್ವ ಮೇಲ್ವಿಚಾರಕಿ ಪಲ್ಲವಿ ನಿರೂಪಿಸಿದರು. ಮಲ್ಲಾರು ಸೇವಾ ಪ್ರತಿನಿಧಿ ಸತ್ಯವತಿ ವಂದಿಸಿದರು.

ಟಾಪ್ ನ್ಯೂಸ್

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

High Court: ನಕ್ಸಲ್‌ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್‌ ಮನವಿ ಮರು ಪರಿಶೀಲನೆಗೆ ನಿರ್ದೇಶ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Hejamadi: ವಿಷದ ಹಾವು ಕಚ್ಚಿ ವ್ಯಕ್ತಿ ಸಾವು

Shirva: ಮಲಗಿದಲ್ಲೇ ವ್ಯಕ್ತಿ ಸಾವು; ಪ್ರಕರಣ ದಾಖಲು

Shirva: ಮಲಗಿದಲ್ಲೇ ವ್ಯಕ್ತಿ ಸಾ*ವು; ಪ್ರಕರಣ ದಾಖಲು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

Udupi: ಗೀತಾರ್ಥ ಚಿಂತನೆ 101: ಸಾರ್ವತ್ರಿಕವಾದರೆ ದುಃಖಶಮನ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

Hebri: ಎನ್‌ಕೌಂಟರ್‌ ತನಿಖೆ ನಡೆಸುವ ಹೆಬ್ರಿ ಪೊಲೀಸ್‌ ಠಾಣೆ ಇಲ್ಲಗಳ ಆಗರ!

ashok

CM ಸಿದ್ದರಾಮಯ್ಯ ಭ್ರಷ್ಟ ಎಂದು ನಿರೂಪಿಸಲು ಯಶಸ್ವಿ: ಆರ್‌.ಅಶೋಕ್‌

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?

1-siddu

Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.