ಅರಣ್ಯ ಇಲಾಖೆ ಇರಿಸಿದ್ದ ಕೆಮರಾದಲ್ಲಿ ಸಿಕ್ಕಿ ಬಿದ್ದ ಬೇಟೆಗಾರರು
Team Udayavani, Dec 22, 2018, 11:37 AM IST
ಸಿದ್ದಾಪುರ: ಕಳ್ಳ ಬೇಟೆಯಾಡಲು ಹೋದವರು ಅರಣ್ಯ ಇಲಾಖೆ ಇಟ್ಟಿದ್ದ ಕೆಮರಾ ಮೂಲಕ ಸಿಕ್ಕಿ ಬಿದ್ದಿರುವ ಘಟನೆ ಕಿಳಂದೂರು ಅರಣ. ವ್ಯಾಪ್ತಿಯಲ್ಲಿ ಸಂಭವಿಸಿದೆ. ಕೆಮರಾದಲ್ಲಿ ಬೇಟೆಗಾರರು ಕಂಡು ಬಂದ ಕೂಡಲೇ ಕಾರ್ಯಪ್ರವೃತ್ತವಾದ ಇಲಾಖೆ ಸಿಬಂದಿ ಓರ್ವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುದುರೆಮುಖ ವನ್ಯಜೀವಿ ವಿಭಾಗದ ಕಿಳಂದೂರು ಅರಣ್ಯ ವ್ಯಾಪ್ತಿಯಲ್ಲಿ ಮೂಗ್ಮನೆ ಬಳಿ ಅಳವಡಿಸಿದ ಕೆಮರಾ ಟ್ರಾಪ್‌ನಲ್ಲಿ ಇಬ್ಬರು ಕೋವಿ ಹಿಡಿದು ಅಭಯಾರಣ್ಯ ಪ್ರವೇಶಿಸುವುದು ಕಂಡಿದ್ದು, ಕೂಡಲೇ ಸಿದ್ದಾಪುರ ವನ್ಯಜೀವಿ ವಲಯದವರು ತತ್ ಕ್ಷಣ ಕಾರ್ಯಾಚರಣೆ ನಡೆಸಿ ಹೊಸನಗರ ತಾಲೂಕಿನ ಹಲಸಿನ ಹಳ್ಳಿಯ ಕರಿಮನೆ ಗ್ರಾಮದ ಈರಪ್ಪ ಗೌಡನನ್ನು ಬಂಧಿಸಿದರು. ಜತೆಗಿದ್ದ ಹೊಸನಗರ ತಾಲೂಕು ಜಯನಗರದ ರಾಮಪ್ಪ ಗೌಡ ಪರಾರಿಯಾಗಿದ್ದಾನೆ. ಬಂಧಿತನನ್ನು ತೀರ್ಥಹಳ್ಳಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಗಣೇಶ್ ಭಟ್ ಮಾರ್ಗದರ್ಶನದಲ್ಲಿ ಸಿದ್ದಾಪುರ ವನ್ಯಜೀವಿ ವಲಯದ ಸಹಾ ಯಕ ಅರಣ್ಯ ಸಂರಕ್ಷಣಾಧಿಕಾರಿ ಭಗವಾನ್‌ದಾಸ್, ವಲಯ ಅರಣ್ಯಾಧಿಕಾರಿಗಳಾದ ಸವಿತಾ ಆರ್. ದೇವಾಡಿಗ, ವಾಣಿಶ್ರೀ ಹೆಗ್ಡೆ, ಉಪ ವಲಯ ಅರಣ್ಯಾಧಿಕಾರಿಗಳಾದ ಪೂರ್ಣಾ ನಂದ, ಮಂಜುನಾಥ ಎಸ್., ಅರಣ್ಯ ರಕ್ಷಕರಾದ ಕೇಶವ, ರಾಮಚಂದ್ರ, ಪ್ರಜ್ವಲ್, ರವಿ ಕುಮಾರ್, ವಾಹನ ಚಾಲಕ ಶಶಿಧರ ಶೆಟ್ಟಿ ಹಾಗೂ ಸಿಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕೆಮರಾ ಟ್ರಾಪ್ ಕುರಿತು
ಇವು ಅರಣ್ಯ ಇಲಾಖೆಯು ಪ್ರಾಣಿಗಳ ಚಲನವಲನ, ಅವುಗಳ ಗಣತಿ ಹಾಗೂ ಕಳ್ಳರ ಬಗ್ಗೆ ಮಾಹಿತಿ ಸಂಗ್ರಹಿಸಲು ಕಾಡಿನಲ್ಲಿ ಅಳವಡಿಸಿರುವ ಕೆಮರಾಗಳು. ಇವು ತನ್ನೆದುರು ಹಾದುಹೋಗುವ ವಸ್ತುವಿನ ಚಲನೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತವೆ. ಕುದುರೆಮುಖ ರಾಷ್ಟ್ರೀಯ ಉದ್ಯಾನ ವನ ವ್ಯಾಪ್ತಿಯ ವಿವಿಧೆಡೆ ಕೆಮರಾ ಅಳ ವಡಿಸಲಾಗಿದ್ದು, ಅರಣ್ಯ ಸಂರಕ್ಷಣೆ ದೃಷ್ಟಿಯಿಂದ ಉತ್ತಮವಾಗಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.