ಕಾಪುವಿನಿಂದಲೇ ಸ್ಪರ್ಧೆ: ಅನುಪಮಾ ಶೆಣೈ
Team Udayavani, Apr 14, 2018, 9:40 AM IST
ಉಡುಪಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕಾಪು ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಭಾರತೀಯ ಜನಶಕ್ತಿ ಕಾಂಗ್ರೆಸ್ ನ ಮಹಾಕಾರ್ಯದರ್ಶಿ ಅನುಪಮಾ ಶೆಣೈ ಸ್ಪಷ್ಟಪಡಿಸಿದ್ದಾರೆ. ಉಡುಪಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಪು ನನ್ನ ಸ್ವಕ್ಷೇತ್ರ. ಹಾಗಾಗಿ ಬಳ್ಳಾರಿ ಅಥವಾ ಬೇರೆ ಕ್ಷೇತ್ರಗಳಿಂದ ಸ್ಪರ್ಧಿಸುವುದಿಲ್ಲ ಎಂದು ತಿಳಿಸಿದರು.
ಫೆ. 18ರಂದು ತನ್ನ ಪಕ್ಷ ನೋಂದಣಿಯಾಗಿದ್ದು, ಬೆಂಡೆಕಾಯಿ ಚಿಹ್ನೆಯನ್ನು ಚುನಾವಣಾ ಆಯೋಗವು ನೀಡಿದೆ. ಪಕ್ಷದ ವತಿಯಿಂದ ರಾಜ್ಯದಲ್ಲಿ 80ರಷ್ಟು ಮಂದಿ ಸ್ಪರ್ಧಿಸಲು ಮುಂದೆ ಬಂದಿದ್ದಾರೆ. ಪಟ್ಟಿಯನ್ನು ಪರಿಶೀಲಿಸಲಾಗುತ್ತಿದೆ. 30 ಕ್ಷೇತ್ರಗಳಲ್ಲಿ ಸ್ಪರ್ಧೆ ಖಚಿತ. ಪಕ್ಷವೊಂದು ಬೇಕು ಎಂಬ ಉದ್ದೇಶದಿಂದ ಕಟ್ಟಿರುವುದೇ ವಿನಾ ಈ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಲ ಎಂದು ಅನುಪಮಾ ಹೇಳಿದರು.
ಅಭ್ಯರ್ಥಿ ಅವಕಾಶ
ನಮ್ಮ ಪಕ್ಷ ಸೇರುವವರಿಗೆ ಕ್ರಿಮಿನಲ್ ಹಿನ್ನೆಲೆ ಇರಬಾರದು, ಕನ್ನಡ ಓದಲು, ಬರೆಯಲು ಬರಬೇಕು. ಪಕ್ಷದ ಸದಸ್ಯತ್ವಕ್ಕೆ 20 ರೂ. ವಿನಾ ಬೇರೇನನ್ನೂ ತೆಗೆದುಕೊಳ್ಳುವುದಿಲ್ಲ. ಹೋರಾಟದ ಮನೋಭಾವ ಇರುವವರು ಸ್ಪರ್ಧಿಸಲು ಇಚ್ಛಿಸಿದರೆ ಉಡುಪಿ ಕ್ಷೇತ್ರದಲ್ಲಿ ಅವಕಾಶ ನೀಡಲಾಗುವುದು ಎಂದರು.
ಸಾರ್ವಜನಿಕ ಹಿತಾಸಕ್ತಿ ಕೇಸು
ಉಡುಪಿಯ ಸರಕಾರಿ ಹಾಜಿ ಅಬ್ದುಲ್ಲಾ ಮಹಿಳೆಯರು ಮತ್ತು ಮಕ್ಕಳ ಸರಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ನೀಡಿರುವುದು, ಜೋಗ ಜಲಪಾತದ ಅಭಿವೃದ್ಧಿಯನ್ನು ಬಿ.ಆರ್. ಶೆಟ್ಟಿ ಅವರಿಗೆ ನೀಡಿರುವುದು ಮತ್ತು ಮುಖ್ಯಮಂತ್ರಿ ಹ್ಯೂಬ್ಲೋಟ್ ವಾಚ್ ಪ್ರಕರಣದ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದೇನೆ ಎಂದು ಅನುಪಮಾ ತಿಳಿಸಿದರು.
ದುಬೈಯಲ್ಲಿ ಭೇಟಿ
ಆರ್.ವಿ. ದೇಶಪಾಂಡೆ ಕೂಡ ದುಬೈಗೆ ಹೋಗಿ ಬಿ.ಆರ್. ಶೆಟ್ಟಿ ಭೇಟಿಯಾಗಿದ್ದರು. ಇವರೆಲ್ಲರನ್ನು ಆರೋಪಿಗಳನ್ನಾಗಿ ಮಾಡಿ ಸಿಬಿಐ ತನಿಖೆ ಮಾಡಲು ನರೇಂದ್ರ ಮೋದಿಯವರಿಗೆ ಮನವಿ ಮಾಡಿದ್ದೆ. ಇದಕ್ಕೆ ಪ್ರತಿಯಾಗಿ ‘ಇದು ಪರಿಶೀಲಿಸಬಹುದಾದ ಆಪಾದನೆ’ ಎಂಬ ಉತ್ತರ ಬಂದಿದೆ. ಅನಂತರ ಮತ್ತೂಮ್ಮೆ ದಾಖಲೆಗಳ ಸಮೇತ ಪತ್ರ ನೀಡಿ ನೆನಪೋಲೆ ಕೂಡ ಕಳುಹಿಸಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ದಾಖಲಿಸಿದ್ದೇನೆ ಎಂದರು.
ಬಿಎಸ್‌ವೈಯಿಂದಲೂ ಲಾಭ
ಸಿಎಂ ಆಗಿದ್ದಾಗ ಯಡಿಯೂರಪ್ಪ ಅವರು ಶ್ರೀರಾಮಪುರ ಹಳ್ಳಿಯಲ್ಲಿ 11.25 ಎಕ್ರೆ ಸ್ಥಳವನ್ನು ಡಾ| ಬಿ.ಆರ್. ಶೆಟ್ಟಿಯವರಿಗೆ ಡಿನೋಟಿಫೈ ಮಾಡಿದ್ದರು. ಅದರಲ್ಲಿ 2.20 ಎಕ್ರೆ ಜಾಗವನ್ನು ಡಾ| ಬಿ.ಆರ್. ಶೆಟ್ಟಿ ಅವರು ಯಡಿಯೂರಪ್ಪ ಕುಟುಂಬದವರ ಸಂಸ್ಥೆಯಲ್ಲಿ ಪಾಲುದಾರರಾಗಿರುವ ಇನ್ನೊಂದು ಸಂಸ್ಥೆಯ ಮಾಲಕರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಿದ್ದಾರೆ. 2011ರ ಈ ಪ್ರಕರಣದ ಬಗ್ಗೆ ರಾಜ್ಯ ಕಾನೂನು ಇಲಾಖೆಯೇ ಕಳೆದ ವರ್ಷ ಸುಪ್ರೀಂ ಕೋರ್ಟ್‌ಗೆ ಅಪೀಲು ಮಾಡಿದೆ ಎಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Teertharoopa Tandeyavarige: ತೀರ್ಥರೂಪರ ಜೊತೆ ರಚನಾ
Ramanagara: ಬಸ್ -ಬೈಕ್ ಅಪಘಾತ; ಇಬ್ಬರು ಮಕ್ಕಳು ಮೂವರು ಸ್ಥಳದಲ್ಲೇ ಮೃತ್ಯು
Arrested: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯ ಅಪಹರಿಸಿದ್ದ ಶಿಕ್ಷಕ ಸೆರೆ
Bengaluru: ರೋಡ್ ರೇಜ್: ಕಾರಿನ ಬಾನೆಟ್ ಮೇಲೆ ಹತ್ತಿ ಯುವಕರ ಪುಂಡಾಟ
Google Map: ಗೂಗಲ್ ಮ್ಯಾಪ್ ನಂಬಿ ಗಡಿ ದಾಟಿದ ಪೊಲೀಸರನ್ನೇ ಹಿಡಿದು ಹಾಕಿದ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.