ನಿರಂತರ ಜನ ಸೇವಕನಾಗಿ ದುಡಿಯುತ್ತೇನೆ
Team Udayavani, Mar 30, 2019, 6:30 AM IST
ಹೆಬ್ರಿ: ಜನರೊಂದಿಗೆ ನಿರಂತರ ಇದ್ದು ಕೆಲಸ ಮಾಡುವ ಪ್ರಮೋದ್ ಬೇಕಾ… ಅಪರೂಪಕ್ಕೆ ಬಂದು ಹೋಗುವ ಕೆಲಸ ಮಾಡದ ಶೋಭಾ ಕರಂದ್ಲಾಜೆ ಬೇಕಾ ಎಂದು ನೀವೆಲ್ಲ ಯೋಚಿಸಿ ನನ್ನನ್ನು ಗೆಲ್ಲಿಸಿ ಮುಂದಿನ 5 ವರ್ಷ ನಿಮ್ಮ ಸೇವಕನಾಗಿ ದುಡಿಯುತ್ತೇನೆ ಎಂದು ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರು ಹೆಬ್ರಿ ಚೆ„ತನ್ಯ ಯುವ ವೃಂದದ ಸಭಾಂಗಣದಲ್ಲಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಮರಳು ಲೋಡಿಗೆ ಒಂದು ಲಕ್ಷದಂತೆ ಬೆಂಗಳೂರಿಗೆ ಹೋಗುತ್ತಿತ್ತು. ನಮ್ಮ ಜಿಲ್ಲೆಯ ಮರಳು ನಮ್ಮ ಜಿಲ್ಲೆಗೆ ದೊರೆಯಬೇಕು ಎಂದು
ಕಾನೂನು ತಂದು ನಮ್ಮ ಜನರಿಗೆ ಮರಳು ದೊರೆಯುವಂತೆ ಮಾಡಿದೆ.
ಈಗಿನ ಮರಳು ಸಮಸ್ಯೆಗೆ ಪ್ರಮೋದ್ ಮಧ್ವರಾಜ್ ಕಾರಣ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನನಗೆ ಎಂಸ್ಯಾಂಡ್ ಬಿಸಿನೆಸ್ ಇದೆ. ಅದಕ್ಕೆ ಮರಳು ಸಿಗಲು ಬಿಡುತ್ತಿಲ್ಲ ಎಂದು ನನ್ನನ್ನು ದೂರುತ್ತಿದ್ದಾರೆ. ಮರಳು ಸಮಸ್ಯೆಗೆ ಸಂಸದೆ ಶೋಭಾ ಕರಂದ್ಲಾಜೆ ವೈಫಲ್ಯವೇ ಕಾರಣ ಎಂದು ಪ್ರಮೋದ್ ಮಧ್ವರಾಜ್ ದೂರಿದರು.
ಶೋಭಾ ಕರಂದ್ಲಾಜೆ ಮೌನ
ಕೇಂದ್ರ ಅರಣ್ಯ ಪರಿಸರ ಸಚಿವರಾದ ಪ್ರಕಾಶ್ ಜಾವಡೇಕರ್ ಕುದುರೆಮುಖ ಸೇರಿ ದೇಶದಲ್ಲಿ 45 ಹುಲಿ ಯೋಜನೆ ಜಾರಿಗೊಳಿಸುವಾಗ ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್ ಕುಮಾರ್ ಮೌನವಾಗಿದ್ದರಿಂದ ಹುಲಿ ಯೋಜನೆ ಜಾರಿಯಾಗಿದೆ, ರಾಜ್ಯದಲ್ಲಿ ಕಸ್ತೂರಿ ರಂಗನ್ ವರದಿಯ ಅನುಷ್ಠಾನ ಆಗಬಾರದು ಎಂದು ಮೂರು ಸಲ ಕೇಂದ್ರ ಸರಕಾರಕ್ಕೆ ರಾಜ್ಯ ಸರ್ಕಾರ ವರದಿ ನೀಡಿದ್ದರೂ ಕೇಂದ್ರ ನಮ್ಮ ವರದಿಗೆ ಕಿವಿಗೊಡುತ್ತಿಲ್ಲ, ಪರಿಣಾಮ ಕಸ್ತೂರಿ ರಂಗನ್ ವರದಿ ಜಾರಿಯ ತೂಗುಕತ್ತಿ ನಮ್ಮ ಮೇಲಿದೆ ಎಂದು ಕಾರ್ಕಳದ ಮಾಜಿ ಶಾಸಕರಾದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗೋಪಾಲ ಭಂಡಾರಿ ಹೇಳಿದರು.
ರಾಹುಲ್ ಗಾಂಧಿ ದೇಶದ ಜನರಿಗೋಸ್ಕರ ಬಡತನದ ಕುಟುಂಬಕ್ಕೆ ವರ್ಷ 72 ಸಾವಿರ ಕ್ರಾಂತಿಕಾರಿ ಯೋಜನೆ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಜನಪರ ಕಾಳಜಿ ಕಾಂಗ್ರೆಸ್ಸಿಗೆ ಮಾತ್ರ ಇದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಹೇಳಿದರು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಯೋಗೀಶ್ ಶೆಟ್ಟಿ ಕೆಪಿಸಿಸಿ ಕಾರ್ಯದರ್ಶಿ ಭರತ್ ಮುಂಡೋಡಿ, ನೀರೆ ಕೃಷ್ಣ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಉದಯ ಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಪಕ್ಷದ ಪ್ರಮುಖರಾದ ಎಚ್.ಶೀನಾ ಪೂಜಾರಿ, ರಾಘವ ದೇವಾಡಿಗ, ಜೆಡಿಎಸ್ ಕಾರ್ಕಳ ಕ್ಷೇತ್ರದ ಕಾರ್ಯಾಧ್ಯಕ್ಷ ಹೆಬ್ರಿ ಶ್ರೀಕಾಂತ್ ಪೂಜಾರಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮುದ್ರಾಡಿ ಸಂತೋಷ ಕುಮಾರ್ ಶೆಟ್ಟಿ ನಿರೂಪಿಸಿ ಜನಾರ್ದನ್ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್’
Deepawali: ರಾಜಧಾನಿಯಲ್ಲಿ ದೀಪಾವಳಿ ಬೆಳಕಿನ ಚಿತ್ತಾರ
Vijayapura: ವಕ್ಫ್ ಬೋರ್ಡ್ ವಿರುದ್ಧ ಪ್ರಧಾನಿಗೆ ಶಾಸಕ ಯತ್ನಾಳ್ ಪತ್ರ
Raichur: ವಕ್ಫ್ ವಿಚಾರದಲ್ಲಿ ಬಿಜೆಪಿ ಚುನಾವಣೆ ಪ್ರಚಾರ: ಶರಣ ಪ್ರಕಾಶ ಪಾಟೀಲ
Waqf issue: ಕಾಂಗ್ರೆಸ್ ಸರ್ಕಾರದಿಂದ ಯಾರಿಗೂ ವಕ್ಫ್ ನೋಟಿಸ್ ಕೊಟ್ಟಿಲ್ಲ: ಸಚಿವ ಸಂತೋಷ ಲಾಡ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.