ಐಸಿವೈಎಂ ಯೂತ್ ಫಿಯೆಸ್ಟಾ: ಕಾರ್ಕಳ ಟೌನ್ ಘಟಕಕ್ಕೆ ಸಮಗ್ರ ಪ್ರಶಸ್ತಿ
Team Udayavani, Feb 23, 2017, 4:49 PM IST
ಶಿರ್ವ: ಭಾರತೀಯ ಕೆಥೋಲಿಕ್ ಯುವ ಸಂಚಲನ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ರವಿವಾರ ಶಿರ್ವ ಸಂತ ಮೇರಿ ಕಾಲೇಜಿನ ವಠಾರ ದಲ್ಲಿ ನಡೆದ ಯೂತ್ ಫಿಯೆಸ್ಟಾ-2017 ಇದರ ಸಮಗ್ರ ಪ್ರಶಸ್ತಿಯನ್ನು ಕಾರ್ಕಳ ಟೌನ್ ಘಟಕ ಪಡೆಯಿತು. ದ್ವಿತೀಯ ಸ್ಥಾನವನ್ನು ಕಟಪಾಡಿ, ಮುಂಡ್ಕೂರು ಘಟಕಗಳು ಹಂಚಿಕೊಂಡವು.
ಉಡುಪಿ ಧರ್ಮಪ್ರಾಂತ್ಯದ ವ್ಯಾಪ್ತಿಯ ಸುಮಾರು 500ಕ್ಕೂ ಅಧಿಕ ಕ್ರೈಸ್ತ ಯುವ ಜನರು ಭಾಗವಹಿಸಿದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಮ್ ಶೋ, ರಸಪ್ರಶ್ನೆ, ಕೊಲಾಜ್, ಫೇಸ್ ಪೈಂಟಿಂಗ್ ಹಾಗೂ ಹಾಸ್ಯ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಉದ್ಘಾಟನೆಯನ್ನು ಸಂತ ಮೇರಿ ಮತ್ತು ಡಾನ್ ಬೊಸ್ಕೊ ಶಿಕ್ಷಣ ಸಂಸ್ಥೆಗಳ ಸಂಚಾಲಕ ಹಾಗೂ ಶಿರ್ವ ಆರೋಗ್ಯ ಮಾತಾ ದೇವಾ ಲಯದ ಪ್ರಧಾನ ಧರ್ಮಗುರುಗಳಾದ ರೆ|ಫಾ| ಸ್ಟಾನಿ ತಾವ್ರೋ ಅವರು ನೆರವೇರಿಸಿದರು.
ಬಹುಮಾನ ವಿತರಣೆ
ಬಹುಮಾನ ವಿತರಣೆ ಕಾರ್ಯ ಕ್ರಮದ ಮುಖ್ಯ ಅತಿಥಿಯಾಗಿ ಆಗ ಮಿಸಿದ ಉಡುಪಿ ಧರ್ಮಪ್ರಾಂತ್ಯದ ವಿಕಾರ್ ಜನರಲ್ ರೆ|ಫಾ| ಬ್ಯಾಪ್ಟಿಸ್ಟ್ ಮೆನೇಜಸ್ ಮಾತನಾಡಿ ಯುವ ಜನರು ಸ್ಪರ್ಧೆಗಳಲ್ಲಿ ಭಾಗವಹಿಸುವುದರೊಂದಿಗೆ ನೈಜತೆ ಹಾಗೂ ಕ್ರಿಯಾತ್ಮಕ ಚಟು ವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಅಲ್ಲದೆ ಕೊಂಕಣಿ ಭಾಷೆಯ ಉಳಿಕೆ ಮತ್ತು ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಧರ್ಮಪ್ರಾಂತ್ಯದ ವ್ಯಾಪ್ತಿಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶೈನಿ ಮೆನೇಜಸ್, ಅವಿಲ್ ಮೆಂಡೋನ್ಸಾ ರೋಯ್ ಮಥಾಯಸ್ (ಸಿಎ),ಜಾಸ್ಮಿನ್ ಡಿ’ಸೋಜಾ (ಕರಾಟೆ), ಜೊವಿಟಾ ಅಂದ್ರಾದೆ (ಎನ್‌ಸಿಸಿ) ಅನ್ಸಿಲ್ಲಾ ಸಲ್ದಾನ, ರೈಸನ್ ರೆಬೆಲ್ಲೊ, ಜೊಸ್ಲಿಟಾ ಫೆರ್ನಾಂಡಿಸ್, ಅಲಿಸ್ಟನ್ ಕೊರೆಯ (ಕ್ರೀಡೆ) ವೊಲಿಟಾ ಲೋಬೊ,ನತಾಶಾ ಪಾಯಸ್, ಲವಿಟಾ ಪಿಂಟೊ, ನಿಲೀಮಾ ಡಿ’ಸೋಜಾ, ಜಾಕ್ಸನ್ ಡಿ’ಸೋಜಾ, ಮೆಕ್ಲಿನ್ ಲೋಬೋ(ಶಿಕ್ಷಣ) ಇವರಿಗೆ ಯುವ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇತ್ತೀಚೆಗೆ ನಡೆದ ರಾಷ್ಟ್ರೀಯ ಯುವ ಸಮ್ಮೇಳನದ ಪ್ರಯುಕ್ತ ನಡೆದ ಡೇಸ್‌ಇನ್ ಡಯಾಸಿಸ್ ಡಾಕ್ಯುಮೆಂಟರಿ ರಚನೆಯಲ್ಲಿ ಪೆರಂಪಳ್ಳಿ, ತೊಟ್ಟಂ,ಉಡುಪಿ ಮತ್ತು ಬ್ರಹ್ಮಾವರ ಘಟಕಗಳು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳನ್ನು ಪಡೆದಿದ್ದವು. ಧರ್ಮಪ್ರಾಂತ್ಯದ ಪದಾಧಿಕಾರಿಗಳು ಯುವ ನಿರ್ದೇಶಕ ಫಾ| ಎಡ್ವಿನ್ ಡಿ’ಸೋಜಾ ಅವರನ್ನು ಸಮ್ಮಾನಿಸಿದರು.
ಕಾರ್ಯಕ್ರಮದಲ್ಲಿ ಶಿರ್ವ ವಲಯ ನಿರ್ದೇಶಕ ರೆ|ಫಾ| ಪಾವ್É ರೇಗೊ, ಡಾನ್ ಬೊಸ್ಕೊ ಆಂಗ್ಲಮಾಧ್ಯಮ ಶಾಲೆಯ ಪ್ರಾಂಶುಪಾಲ ರೆ|ಫಾ| ಮಹೇಶ್ ಡಿ’ಸೋಜಾ, ರೆ|ಫಾ| ಹೆರಾಲ್ಡ್ ಪಿರೇರಾ, ಜಿ.ಪಂ. ಸದಸ್ಯ ವಿಲ್ಸನ್ ರೊಡ್ರಿಗಸ್, ಶಿರ್ವ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ವಿಲ್ಸನ್ ಡಿ’ಸೋಜಾ, ಬಿಗ್ ಎಫ್‌ಎಂ ಆರ್‌ಜೆ ಎರೋಲ್ ಗೊನ್ಸಾಲ್ವಿಸ್, ಶಿರ್ವ ಘಟಕದ ಅಧ್ಯಕ್ಷ ಅವಿಲ್ ಸಲ್ದಾನ, ಸಚೇತಕರಾದ ವಾಲ್ಟರ್ ಡಿ’ಸೋಜಾ, ಸಿಸ್ಟರ್ ಹಿಲ್ಡಾ ಉಪಸ್ಥಿತರಿದ್ದರು.
ಕೇಂದ್ರಿಯ ಅಧ್ಯಕ್ಷ ಲೋಯೆಲ್ ಡಿ’ಸೋಜಾ ಸ್ವಾಗತಿಸಿ, ಕಾರ್ಯದರ್ಶಿ ಫೆಲಿನಾ ಡಿ’ಸೋಜಾ ವಂದಿಸಿ, ರೋಯrನ್ ಡಿ’ಸೋಜಾ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.