ಕೃಷ್ಣನಿದ್ದಲ್ಲಿ ಜಯ-ಮಹಾಭಾರತದ ಥೀಂ

Team Udayavani, Oct 23, 2017, 9:01 AM IST

23-14.jpg

ಉಡುಪಿ: ಕೃಷ್ಣನಿದ್ದಲ್ಲಿ ಜಯ ಎನ್ನುವುದು ಮಹಾಭಾರತ ಗ್ರಂಥದ ಮುಖ್ಯ ಥೀಂ ಎಂದು ಹಿರಿಯ ವಿದ್ವಾಂಸ ಡಾ| ಬನ್ನಂಜೆ ಗೋವಿಂದಾಚಾರ್ಯ ಹೇಳಿದರು. ಮಣಿಪಾಲ ವಿ.ವಿ.ಯ ಯುರೋಪಿಯನ್‌ ಸ್ಟಡೀಸ್‌ ವಿಭಾಗದ ದ್ವೆ„ತ ಫಿಲಾಸಫಿ ರಿಸೋರ್ಸ್‌ ಸೆಂಟರ್‌ ಶನಿವಾರ ಆಯೋಜಿಸಿದ ಮಹಾಭಾರತ ಕುರಿತ ಉಪನ್ಯಾಸ ಮಾಲಿಕೆಯಲ್ಲಿ ಅವರು ಆರಂಭದ ಉಪನ್ಯಾಸ ನೀಡಿದರು.

ಪ್ರಸ್ತುತ ಮಹಾಭಾರತದ ನಾಲ್ಕು ಮುದ್ರಿತ ಪ್ರತಿಗಳು ಲಭ್ಯ ಇದೆ. ಇವುಗಳಲ್ಲಿ ವ್ಯತ್ಯಾಸವೂ ಇದೆ. ತಪ್ಪಾಗಿ ಸೇರಿಸಿರುವುದು, ತಮಗೆ ಬೇಡವೆಂದುಕೊಂಡದ್ದನ್ನು ತೆಗೆದುಹಾಕಿದ್ದು, ಅಜ್ಞಾನದಿಂದ ತಪ್ಪು ಬರೆದದ್ದು ನಡೆದಿದೆ. ಮಧ್ವಾಚಾರ್ಯರು 700 ವರ್ಷಗಳ ಹಿಂದೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಲಭ್ಯವಿದ್ದ ನೂರಾರು ಪಠ್ಯಗಳನ್ನು ಸಂಗ್ರಹಿಸಿ ಅಪೂರ್ವ ಸಂಪಾದನಾ ಕಾರ್ಯವನ್ನು ನಿರ್ವಹಿಸಿದರು ಎಂದರು.

ಮೂರು ಅರ್ಥಗಳು, ಬಹುಮುಖಗಳು
ಮನಃಶಾಸ್ತ್ರೀಯವಾಗಿ (ಸಾರ ಭಗವದ್ಗೀತೆ), ಆಸ್ತೀಕವಾದ (ಸಾರ ವಿಷ್ಣುಸಹಸ್ರನಾಮ), ಭಗವಂತನ ಮಹಿಮೆ (ಇಡೀ ಪಠ್ಯ) ಹೀಗೆ ಮೂರು ತೆರನಾಗಿ ಮಹಾಭಾರತಕ್ಕೆ ಅರ್ಥಗಳಿವೆ ಎಂದು ವ್ಯಾಸರು ಹೇಳಿದ್ದಾರೆ. ಕೃಷ್ಣನಿಗೆ   ಅನೇಕ ಆರೋಪ  ಹೊರಿಸುತ್ತಾರೆ. ಆದರೆ ಯಥಾರ್ಥ ಬೇರೆ ಇದೆ. ದ್ರೋಣಾಚಾರ್ಯರು ದಿನಕ್ಕೆ 10,000 ಜನರನ್ನು ಕೊಲ್ಲಲು ಹೊರಟಾಗ ಸುಳ್ಳು ಹೇಳಿ ಕೊಲ್ಲಿಸಲಾಯಿತು.

ಲೋಕದ ಸಜ್ಜನಿಕೆಗೆ ಯಾವುದು ಪೂರಕವೋ ಅದೇ ಸತ್ಯ ಎಂಬ ಸಂದೇಶ ಇಲ್ಲಿದೆ. ಯುದ್ಧವನ್ನು ನಿಲ್ಲಿಸಲು ಕೃಷ್ಣ ಬಹಳ ಪ್ರಯತ್ನ ಪಟ್ಟಿದ್ದ, ರಾಜಿಗೂ ಯತ್ನಿಸಿದ್ದ. ನರಕಾಸುರನ ಅಧೀನವಿದ್ದ 16,100 ಹೆಮ್ಮಕ್ಕಳನ್ನು ಬಿಡಿಸಿದಾಗ ಅವರು ತಮ್ಮ ಮನೆಯಲ್ಲಿ ಸೇರಿಸಿಕೊಳ್ಳುವುದಿಲ್ಲವೆಂದರು. ಆ ಕಾರಣ ಅವರನ್ನು ಮದುವೆಯಾಗಿ ಬೇಕಾದ ವ್ಯವಸ್ಥೆ ಮಾಡಿಸಿದ್ದ. ಕೃಷ್ಣನ ಒಂದೊಂದು ಕ್ರಿಯೆ ಹಿಂದೆ ತಣ್ತೀಜ್ಞಾನ ಅಡಗಿದೆ. ಒಬ್ಬೊಬ್ಬರಿಗೆ ಒಂದೊಂದು ತೆರನಾಗಿ ಕಾಣುತ್ತಾನೆ ಎಂದರು.

ಗಣಿತ ಗೊಂದಲ
ರಾಮ ಒಂದೆಡೆ 13,000 ವರ್ಷ, ಇನ್ನೊಂದೆಡೆ 11,000 ವರ್ಷ ಬದುಕಿದ ಎಂದಿದೆ. ಇದು 30 ದಿನಗಳ ಲೆಕ್ಕದ ತಿಂಗಳು, 27 ದಿನಗಳ (ನಕ್ಷತ್ರಗಳ ಲೆಕ್ಕ) ತಿಂಗಳಿನ ಪ್ರಕಾರ ಎರಡೂ ಸರಿ ಎಂದು ಮಧ್ವಾಚಾರ್ಯರು ತಿಳಿಸಿದ್ದರು. ಇಂತಹ ಸಂಶೋಧನ ಚಿಂತನೆ ಅಗತ್ಯ ಎಂದು ಬನ್ನಂಜೆ ಹೇಳಿದರು. 

ಕೇಂದ್ರದ ಸಮನ್ವಯಕಾರ ಶ್ರೀನಿವಾಸ ಕುಮಾರ್‌ ಎನ್‌. ಆಚಾರ್ಯ ಸ್ವಾಗತಿಸಿ ಅರ್ಜುನ ಎಸ್‌.ಆರ್‌. ವಂದಿಸಿದರು. 

ಟಾಪ್ ನ್ಯೂಸ್

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

ICC Bowling Ranking: ಐಸಿಸಿ ಬೌಲಿಂಗ್‌ ರ್‍ಯಾಂಕಿಂಗ್‌… ಬುಮ್ರಾ ಅಗ್ರಸ್ಥಾನ ಗಟ್ಟಿ

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

BBK11: ನನ್ನನ್ನು ಸಾಬೀತು ಮಾಡಿಕೊಳ್ಳಲು ಅವಕಾಶ ಸಿಗಲಿಲ್ಲ: ದೊಡ್ಮನೆಯಲ್ಲಿ ಚೈತ್ರಾ ಅಳಲು..

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

missing

Malpe: ಆಯತಪ್ಪಿ ಸಮುದ್ರಕ್ಕೆ ಬಿದ್ದ ಮೀನುಗಾರ ನಾಪತ್ತೆ

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

Udupi ಪರ್ಯಾಯ ಶ್ರೀಪಾದರಿಂದ ಭಗವದ್ಗೀತಾ ಲೇಖನ ಯಜ್ಞದ ದೀಕ್ಷೆ ಪಡೆದ ಅಭಿಘ್ಯಾ ಆನಂದ್

11(1

Manipal: ಮಣ್ಣಪಳ್ಳ ಕೆರೆಯಲ್ಲಿ ಹೇಳ್ಳೋರಿಲ್ಲ, ಕೇಳ್ಳೋರಿಲ್ಲ!

6-gangolli

Gangolli: ಮರದ ದಿಮ್ಮಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ದೋಣಿ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Srinivasa Hospital: 90 ವರ್ಷದ ಮಹಿಳೆಗೆ ತೆರೆದ ಹೃದಯ ಶಸ್ತ್ರಚಿಕಿತ್ಸೆ

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

Mangaluru: ಬ್ಯಾರಿ ಅಭಿವೃದ್ಧಿ ನಿಗಮದ ಸಾಧಕ-ಬಾಧಕ ಚರ್ಚೆ ಅಗತ್ಯ: ಸ್ಪೀಕರ್‌ ಖಾದರ್‌

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

ನಕ್ಸಲರಿಗೆ ಕೆಂಪು ಹಾಸು ಸ್ವಾಗತ ಖಂಡನೀಯ: ಹರೀಶ್ ಪೂಂಜಾ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

Mangaluru University: ಹೊಸ ಕೋರ್ಸ್‌ ಆರಂಭಕ್ಕೆ ವಿವಿ ಅನುಮತಿ ಅಗತ್ಯ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

ICC ಪಿಚ್‌ ರೇಟಿಂಗ್‌: ಸಿಡ್ನಿ ತೃಪ್ತಿಕರ, ಉಳಿದವು ಅತ್ಯುತ್ತಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.