ರಾಜ್ಯದಲ್ಲೂ ಬಿಜೆಪಿ ಅಧಿಕಾರದಲ್ಲಿದ್ದರೆ ಅಭಿವೃದ್ಧಿಗೆ ವೇಗ

Team Udayavani, Mar 27, 2018, 6:10 AM IST

Mattar-Rathnakar-Hegde.jpg

ಉಡುಪಿ: ಅನುಭವಿ ರಾಜಕಾರಣಿಯಾಗಿ ಪಕ್ಷದ ಉನ್ನತ ಮಟ್ಟದ ನಾಯಕರಿಂದ ತೊಡಗಿ ಸಾಮಾನ್ಯ ಕಾರ್ಯಕರ್ತರೊಂದಿಗೂ ಒಡನಾಟ ಇಟ್ಟು ಕೊಂಡಿರುವ ಮಟ್ಟಾರು ರತ್ನಾಕರ ಹೆಗ್ಡೆ ಈಗ ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷರು. “ಪಕ್ಷಕ್ಕೆ ಕಾರ್ಯಕರ್ತರೇ ಆಸ್ತಿ, ಮತದಾರರೇ ಸಂಪತ್ತು’ ಎಂಬುದು ಅವರ ಅಭಿಪ್ರಾಯ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರ ಇದ್ದರೆ ಹೆಚ್ಚಿನ ಅಭಿವೃದ್ಧಿ ಸಾಧ್ಯ. ಈ ಬಾರಿ ಸಿದ್ದರಾಮಯ್ಯ ಸರಕಾರವನ್ನು ಕಿತ್ತೂಗೆಯಲೇಬೇಕೆಂದು ಜನತೆ ತೀರ್ಮಾನಿಸಿದ್ದಾರೆ. ನಮ್ಮ ಕಾರ್ಯಕರ್ತರ ಪಡೆ ಕೂಡ ಅವಿರತವಾಗಿ ಶ್ರಮಿಸುತ್ತಿದೆ. 

ನರೇಂದ್ರ ಮೋದಿಯವರು ನಮಗೆ ಪ್ರೇರಣೆಯಾಗಿದ್ದಾರೆ. ಈ ಬಾರಿ ಬಿಜೆಪಿ ಗೆಲುವು ಸಾಧಿಸುವಲ್ಲಿ ಸಂದೇಹ ಬೇಡ ಎಂಬ ವಿಶ್ವಾಸ ಮಟ್ಟಾರು ಅವರದ್ದು. 

“ಉದಯವಾಣಿ’ಯ ಪ್ರಶ್ನೆಗಳಿಗೆ ಪ್ರತಿಕ್ರಿಯಿಸುತ್ತಾ ಮಟ್ಟಾರು ರತ್ನಾಕರ ಹೆಗ್ಡೆಯವರು ಹೇಳಿದ್ದಿಷ್ಟು: ಜಿಲ್ಲೆಯ ಎಲ್ಲ 5 ಕ್ಷೇತ್ರಗಳಲ್ಲಿಯೂ ಬಿಜೆಪಿಯ ಗೆಲುವು ಖಚಿತ. ಈ ಪೈಕಿ ಕಾರ್ಕಳ ಮೊದಲ ಸ್ಥಾನದಲ್ಲಿದೆ. ಅನಂತರದ ಸ್ಥಾನಗಳಲ್ಲಿ ಕ್ರಮವಾಗಿ ಕುಂದಾಪುರ, ಉಡುಪಿ, ಕಾಪು ಮತ್ತು ಬೈಂದೂರು ಇವೆ. ಮೋದಿಯವರು ಪ್ರಧಾನಿ ಯಾದ ಅನಂತರ ದೇಶವನ್ನು ಸುಭದ್ರಗೊಳಿಸಿ ವಿಶ್ವವೇ ಕೊಂಡಾಡುವಂತೆ ಮಾಡಿರುವುದು, ಜನ ಸಾಮಾನ್ಯರ ಏಳಿಗೆಗಾಗಿ ಕೈಗೊಂಡಿರುವ ಅನೇಕ ಯೋಜನೆಗಳು ನಾವು ಹೆಮ್ಮೆಯಿಂದ ಮತ ಕೇಳುವಂತೆ ಮಾಡಿವೆ. ರಾಜ್ಯ ದಲ್ಲಿ ಸಿದ್ದರಾಮಯ್ಯ ಸರಕಾರ ನಡೆಸಿದ ದುರಾಡಳಿತ, ಜಾತಿ, ಧರ್ಮ, ಮತಗಳನ್ನು ಒಡೆಯುವ ಕೆಲಸ, ಹಿಂದೂ ಧರ್ಮವನ್ನು ನಾಶ ಪಡಿಸುವ ಪ್ರಯತ್ನ, ಭ್ರಷ್ಟಾಚಾರ ಇವೆಲ್ಲವುಗಳಿಂದ ಜನ ಬೇಸತ್ತಿದ್ದಾರೆ.

ಯಾವ ಭರವಸೆಗಳೂ ಈಡೇರಿಲ್ಲ 
ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬಂದ ಅನಂತರ ಉಡುಪಿ ಜಿಲ್ಲೆಯಲ್ಲಿ ಯಾವ ರೀತಿಯ ಅಭಿವೃದ್ಧಿಯೂ ಆಗಿಲ್ಲ. ಡಾ| ವಿ.ಎಸ್‌. ಆಚಾರ್ಯ ಸಚಿವರಾಗಿದ್ದಾಗ ನಡೆದಿರುವಂಥ ಯಾವುದೇ ಕೆಲಸ ಈಗ ನಡೆದಿಲ್ಲ. ನೀರು ಕೊಡುವ ಭರವಸೆಯನ್ನೇ ಈಡೇರಿಸಿಲ್ಲ. ಕಳೆದ 5 ವರ್ಷಗಳಲ್ಲಿ ವಾರಾಹಿಯಿಂದ ನೀರು ತರುವ ಕಾಮಗಾರಿ 1 ಕಿ. ಮೀ. ಕೂಡ ನಡೆದಿಲ್ಲ. ಜಿಲ್ಲಾಸ್ಪತ್ರೆಯ ಸ್ಥಿತಿ ಚಿಂತಾಜನಕವಾಗಿದೆ. ಮರಳಿನ ಕೃತಕ ಅಭಾವ ಸೃಷ್ಟಿಸಲಾಗಿದೆ. ನಾವು ಪದೇ ಪದೇ ಪ್ರತಿಭಟನೆ ನಡೆಸದೇ ಇದ್ದಿದ್ದರೆ ಒಂದು ಲೋಡ್‌ ಮರಳಿನ ಬೆಲೆ ಈಗ 22,000 ರೂ. ಆಗುತ್ತಿತ್ತು. ಪ್ರಮುಖ ಬಂದರುಗಳ ಅಭಿವೃದ್ಧಿಗಾಗಿ ಕೇಂದ್ರ ಸರಕಾರದಿಂದ ಅನುದಾನ ಬಂದರೂ ರಾಜ್ಯದ ಅನುದಾನ ಬಿಡುಗಡೆ ಯಾಗದೆ ಹಿನ್ನಡೆಯಾಗಿದೆ. ಕಂದಾಯ ಇಲಾಖೆಯಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಪಡಿತರ ಅವ್ಯವಸ್ಥಿತವಾಗಿದೆ. ಬಂದರುಗಳ ಅಭಿವೃದ್ಧಿಯಾಗುತ್ತಿಲ್ಲ. ಮೀನುಗಾರರಂತೂ ಪದೇ ಪದೇ ಪ್ರತಿಭಟನೆ ನಡೆಸುವಂತಾಗಿದೆ. ಮೀನುಗಾರ ಮಹಿಳೆಯರು ಬ್ಯಾಂಕ್‌ನಿಂದ ಪಡೆಯುವ ಸಾಲಕ್ಕೆ ನೀಡುವ ಸಬ್ಸಿಡಿ 12 ಕೋ.ರೂ. ಮೊತ್ತ ವನ್ನು ಬಿಡುಗಡೆ ಮಾಡುವುದು ಕೂಡ ರಾಜ್ಯ ಸರಕಾರದಿಂದ ಸಾಧ್ಯವಾಗಿಲ್ಲ. ದೀನ್‌ದಯಾಳ್‌ ಗ್ರಾಮೀಣ ವಿದ್ಯುದೀಕರಣ ಯೋಜನೆ ಕೇಂದ್ರ ಸರಕಾರದ ಉತ್ತಮ ಯೋಜನೆಗಳಲ್ಲೊಂದು. ಆದರೆ ಇದು ನಮ್ಮದೇ ಎಂದು ಕಾಂಗ್ರೆಸ್‌ನವರು ಹೇಳುತ್ತಿರುವುದು ನಾಚಿಕೆಗೇಡು. 

ಕಾರ್ಯಕರ್ತರಾಗಿಯೇ ಬರಲಿ
ಪ್ರಮೋದ್‌ ಅವರು ಬಿಜೆಪಿ ಸೇರುವುದಾದರೆ ಕಾರ್ಯಕರ್ತರಾಗಿ ಬರಲಿ. ಪ್ರಮೋದ್‌ ವರ್ಚಸ್ಸು ಇರುವ ನಾಯಕನಲ್ಲ. ತಮ್ಮದೇ ಆದ ಜನರನ್ನು ಬೆಳೆಸಿದ್ದಾರೆಯೇ ಹೊರತು ಕಾಂಗ್ರೆಸನ್ನು ಅವರು ಬೆಳೆಸಿಲ್ಲ. ಎಲ್ಲಿಯಾದರೂ ಅವರೂ ನಗುತ್ತಾರೆ, ನಾನೂ ನಗುತ್ತೇನೆ. ನನಗೆ ಅವರ ಮೇಲೆ ವೈಯಕ್ತಿಕ ದ್ವೇಷವಿಲ್ಲ. ಆದರೆ ರಾಜಕೀಯವಾಗಿ ಒಪ್ಪಲಾಗದು. ಅವರು ಜನರ ಬೇಡಿಕೆ ಈಡೇರಿಸಿಲ್ಲ. 
ಮೋದಿ ಸರಕಾರದ ಅನುದಾನ, ಯೋಜನೆಗಳು ಜಿಲ್ಲೆಯನ್ನು ಕೂಡ ತಲುಪಿವೆ. 400 ಕೋ.ರೂ.ಗಳಷ್ಟು ಅನುದಾನ ಕೇಂದ್ರ ರಸ್ತೆ ನಿಧಿಯಿಂದ ಬಂದಿದೆ. ಪ್ರಮುಖ ರಸ್ತೆಗಳ ಅಭಿವೃದ್ಧಿ ನಡೆಯು ತ್ತಿರುವುದು ಇದೇ ಅನುದಾನದಲ್ಲಿ. ರಾಜ್ಯದ ಪ್ರಥಮ ಸಖೀ ಕೇಂದ್ರವೂ ಉಡುಪಿಗೆ ಬಂದಿದೆ. ಉಜ್ವಲ ಯೋಜನೆಯಿಂದಾಗಿ ಸಾವಿರಾರು ಮಂದಿ ಮಹಿಳೆಯರು ಒಲೆಯ ಬದಲು ಅಡುಗೆ ಅನಿಲ ಬಳಕೆ ಮಾಡಿ ಆರೋಗ್ಯ ರಕ್ಷಿಸಿಕೊಂಡಂತಾಗಿದೆ.

ಸಂಸದೆಗೆ ಪಕ್ಷದ ಜವಾಬ್ದಾರಿಯೂ ಇದೆ
ಶೋಭಾ ಕರಂದ್ಲಾಜೆ ಕ್ಷೇತ್ರದಲ್ಲಿ ಅಪರೂಪ ಎಂಬ ಮಾತು ಪೂರ್ತಿ ಸತ್ಯವಲ್ಲ. ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಕೇಂದ್ರದಿಂದ ಬರಬೇಕಾದ ಅನುದಾನ, ಯೋಜನೆಗಳ ಕಡೆ ಗಮನ ಹರಿಸು ತ್ತಲೇ ಇದ್ದಾರೆ. ಅವರು ರಾಜ್ಯ ಬಿಜೆಪಿಯ ಪ್ರಧಾನ ಕಾರ್ಯದರ್ಶಿಯಾಗಿ, ಚುನಾವಣಾ ನಿರ್ವಹಣ ಸಮಿತಿ ಸಂಚಾಲಕರಾಗಿ ಮಹತ್ವದ ಜವಾಬ್ದಾರಿ ಹೊಂದಿದ್ದಾರೆ. ಪಡುಬಿದ್ರಿ ಸೇರಿದಂತೆ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ 66ರ ಕಾಮಗಾರಿ ಗಳನ್ನು ಪೂರ್ಣಗೊಳಿಸುವ ಉದ್ದೇಶದಿಂದ ಹಲವಾರು ಸಭೆಗಳನ್ನು ನಡೆಸಿದ್ದಾರೆ. ಗುತ್ತಿಗೆದಾರರ ಸಮಸ್ಯೆಯಿಂದ ಹಿನ್ನಡೆಯಾಗಿತ್ತು. ಸಂಸದೆಯ ಪ್ರಯತ್ನದಿಂದಾಗಿ ಈಗ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ.

ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲವಿಲ್ಲ
ನಮ್ಮ ಕಾರ್ಯಕರ್ತರು ಅಭ್ಯರ್ಥಿ ವಿಚಾರದಲ್ಲಿ  ತಲೆಕೆಡಿಸಿಕೊಂಡಿಲ್ಲ. ಈ ಬಾರಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಮತ್ತು ಅವರ ತಂಡವೇ ಹೆಚ್ಚಿನ ನಿಗಾ ವಹಿಸುತ್ತಿದೆ. ಪಕ್ಷದ ವೀಕ್ಷಕರು ಕೂಡ ಕಾರ್ಯಪ್ರವೃತ್ತರಾಗಿದ್ದಾರೆ. ನಾವು ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಶಿಫಾರಸು ಮಾತ್ರ ಮಾಡುತ್ತೇವೆ. ಪಕ್ಷವು ಜಾತಿ, ಮತದ ಆಧಾರದಲ್ಲಿ ಟಿಕೆಟ್‌ ನೀಡುವುದು ಕಡಿಮೆ. ಆದಾಗ್ಯೂ ಎಲ್ಲ ಜಾತಿಯವರಿಗೂ ಪ್ರಾತಿನಿಧ್ಯ ದೊರೆಯಬೇಕೆಂಬ ಇರಾದೆ ಇದೆ. ಇತ್ತೀಚೆಗೆ ಅಮಿತ್‌ ಶಾ ಅವರು ಮೀನುಗಾರರು ಹಾಗೂ ಪಕ್ಷದ ಪ್ರಮುಖರ ಸಭೆ ನಡೆಸಿದ ಅನಂತರ ಪಕ್ಷದಲ್ಲಿ ಮತ್ತಷ್ಟು ಹುರುಪು ಮೂಡಿದೆ. ರಾಹುಲ್‌ಗಾಂಧಿ ಅವರ ಕಾರ್ಯಕ್ರಮಕ್ಕೆ ಭಾರೀ ಕಡಿಮೆ ಸಂಖ್ಯೆಯ ಜನ ಸೇರಿದ್ದರು. ಪಡುಬಿದ್ರಿಯಲ್ಲಿ ರೋಡ್‌ ಶೋ ಮಾಡುತ್ತೇನೆಂದು ಘೋಷಿಸಿ ರೋಡ್‌ಶೋ ನಡೆಸಲಿಲ್ಲ. ಹಿಂದುತ್ವದ ನಾಟಕ ಮಾಡಿ ಹೋಗಿದ್ದಾರೆ.  ಜನರು ಅಂಥವರನ್ನು ಸುಲಭದಲ್ಲಿ ನಂಬುವುದಿಲ್ಲ.

ನಾವು ಅಧಿಕಾರಕ್ಕೆ ಬಂದರೆ …
ನಾವು ಅಧಿಕಾರಕ್ಕೆ ಬಂದರೆ ಉಡುಪಿಯ ಕುಡಿಯುವ ನೀರಿನ ಸಮಸ್ಯೆ ಪೂರ್ಣ ಬಗೆಹರಿಯಲಿದೆ. ಸ್ವರ್ಣಾ 3ನೇ ಹಂತ ಅಥವಾ ವಾರಾಹಿ ಯೋಜನೆಯಿಂದ ನೀರು ತರಿಸುವುದು ಖಚಿತ. ಉದ್ಯೋಗ ಸೃಷ್ಟಿಗಾಗಿ ಪರಿಸರ ಸಹ್ಯವಾದ ಕೈಗಾರಿಕೆಗಳನ್ನು ಸ್ಥಾಪಿಸುತ್ತೇವೆ. ಕಂದಾಯ ಇಲಾಖೆಯ ಸಮಸ್ಯೆ, ಸಿಆರ್‌ಝಡ್‌ಸಮಸ್ಯೆ ಬಗೆಹರಿಸುತ್ತೇವೆ. ಮೀನುಗಾರರು, ರೈತರ ಸಾಲ ಮನ್ನಾ ಮಾಡಿಸುತ್ತೇವೆ. ಜಿಲ್ಲಾಸ್ಪತ್ರೆಯನ್ನು ವೆನಾÉಕ್‌ ಮಾದರಿಯಲ್ಲಿ ಮೇಲ್ದರ್ಜೆಗೇರಿಸಿ ಬಡವ ರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಮಾಡುತ್ತೇವೆ. ಜಿಲ್ಲೆಯಲ್ಲಿ ಸರಕಾರಿ ಮೆಡಿಕಲ್‌ ಮತ್ತು ಎಂಜಿನಿಯರಿಂಗ್‌ ಕಾಲೇಜು ಸ್ಥಾಪಿಸುತ್ತೇವೆ. 

ನನ್ನ ಅಧ್ಯಕ್ಷಾವಧಿಯಲ್ಲಿ ಎಲ್ಲ ನಾಯಕರು,ಕಾರ್ಯಕರ್ತರು ಉತ್ತಮ ಸಹಕಾರ ನೀಡಿದ್ದಾರೆ. ಈ ಬಾರಿ ಜಿಲ್ಲೆಯ ಎಲ್ಲ 5 ಕ್ಷೇತ್ರಗಳನ್ನು ಬಿಜೆಪಿ ಗೆದ್ದರೆ ನನಗೆ ಪೂರ್ಣ ತೃಪ್ತಿಯಾಗುತ್ತದೆ. ಕಾರ್ಯಕರ್ತರ ಶ್ರಮಕ್ಕೂ ಅರ್ಥ ಬರುತ್ತದೆ ಎನ್ನುತ್ತಾರೆ ಮಟ್ಟಾರು.

– ಸಂತೋಷ್‌ ಬೊಳ್ಳೆಟ್ಟು 

ಟಾಪ್ ನ್ಯೂಸ್

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

Oscars 2025: ಹೀನಾಯವಾಗಿ ಸೋತರೂ ʼಆಸ್ಕರ್‌ʼ ಅರ್ಹತಾ ಸುತ್ತಿನಲ್ಲಿ ಕಾಣಿಸಿಕೊಂಡ ʼಕಂಗುವʼ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಕನಿಷ್ಠ 53 ಮಂದಿ ಮೃತ್ಯು, 60ಕ್ಕೂ ಹೆಚ್ಚು ಮಂದಿ ಗಾಯ

ಟಿಬೆಟ್ ನಲ್ಲಿ ಪ್ರಬಲ ಭೂಕಂಪ… ಸಾವಿನ ಸಂಖ್ಯೆ 53ಕ್ಕೆ ಏರಿಕೆ, 60ಕ್ಕೂ ಹೆಚ್ಚು ಮಂದಿ ಗಾಯ

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

Updated: ಕೆನಡಾ ಮುಂದಿನ ಪ್ರಧಾನಿ ರೇಸ್‌ ನಲ್ಲಿ ಭಾರತೀಯ ಮೂಲದ ಅನಿತಾ ಸೇರಿ ಹಲವರ ಪೈಪೋಟಿ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟುUdupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು

Udupi-DC

Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

ಕಲಾವಿದರ ಮಾಸಾಶ‌ನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

Asaram Bapu: ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸಾರಾಂ ಬಾಪುಗೆ ಮಧ್ಯಂತರ ಜಾಮೀನು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

‌ಕೌಟುಂಬಿಕ ದೌರ್ಜನ್ಯ ಆರೋಪ: ʼಬಿಂದಾಸ್‌ʼ ನಟಿ ಹನ್ಸಿಕಾ, ಸಹೋದರ, ತಾಯಿ ವಿರುದ್ಧ FIR ದಾಖಲು

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Saudi Arabia: ಮೆಕ್ಕಾ-ಮದೀನಾ ಸೇರಿ ಹಲವೆಡೆ ದಾಖಲೆಯ ಧಾರಾಕಾರ ಮಳೆ; ಜನಜೀವನ ಅಸ್ತವ್ಯಸ್ತ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

Gadag: 12 ತಿಂಗಳಾದರೂ ಪಾವತಿಯಾಗದ ಬಾಕಿ ಹಣ… ಕಡಲೆ ಬೆಳೆಗಾರರಿಂದ ಪ್ರತಿಭಟನೆ

3(1

Mudbidri: ಕೊಳಚೆ ನೀರು ಗದ್ದೆಗೆ; ಒಳಚರಂಡಿ ಯೋಜನೆ ಇಲ್ಲದೆ ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.