ಅಕ್ರಮ ಮನೆ ಕೆಡವಿದ ಪ್ರಕರಣ: ಸಚಿವೆ ಜಯಮಾಲಾ ಪರಿಶೀಲನೆ
Team Udayavani, Mar 3, 2019, 12:30 AM IST
ಬೆಳ್ಮಣ್: ಜಂತ್ರದ ಸರಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿದ್ದರೆಂಬ ಆರೋಪದಲ್ಲಿ ಪಂಚಾಯತ್ ಆಡಳಿತ ಮನೆಗಳನ್ನು ಕೆಡವಿದ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ| ಜಯಮಾಲಾ ಅವರು ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತರೆನ್ನಲಾದವರ ಜತೆ ಮಾತುಕತೆ ನಡೆಸಿದರು. ಕಾನೂನಿನ ಚೌಕಟ್ಟಿನಲ್ಲಿ ನ್ಯಾಯ ದೊರಕಿಸುವುದಾಗಿ ಸಚಿವೆ ಭರವಸೆ ನೀಡಿದರು.
ಅಕ್ರವಾಗಿ ಕಟ್ಟಿದ್ದರೆನ್ನಲಾದ 5 ಮನೆಗಳನ್ನು ಎರಡು ದಿನಗಳ ಹಿಂದೆ ಬೆಳ್ಮಣ್ ಪಂಚಾಯತ್‌ನ ನಿರ್ಣಯದಂತೆ ಪಿಡಿಒ ಪ್ರಕಾಶ್ ಅವರು ಪೊಲೀಸ್ ಬಂದೋಬಸ್ತ್ನಲ್ಲಿ ಕೆಡವಿದ್ದರು. ಈ ಬಗ್ಗೆ ಜನರಲ್ಲಿ ಪರ – ವಿರೋಧ ನಿಲುವುಗಳು ವ್ಯಕ್ತವಾಗಿದ್ದು 5 ಕುಟುಂಬಗಳು ಬೀದಿಪಾಲಾದ ಬಗ್ಗೆ ಅನುಕಂಪದ ಅಲೆ ವ್ಯಕ್ತವಾಗಿತ್ತು. ಆದರೆ ಪಂಚಾಯತ್ ಆಡಳಿತ ಕಾನೂನಾತ್ಮಕವಾಗಿ ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದೆ.
ಕಾಂಗ್ರೆಸ್ ಪಕ್ಷದ ನಾಯಕ ಜಿ.ಎ. ಬಾವಾ, ವಿಘ್ನೇಶ್ ಕಿಣಿ, ಉಮೇಶ್ ಕಲ್ಲೊಟ್ಟೆ, ಬೆಳ್ಮಣ್ ಪಂಚಾಯತ್ ಸದಸ್ಯ ಜನಾರ್ದನ ತಂತ್ರಿ ಸಚಿವರ ಭೇಟಿ ವೇಳೆ ಉಪಸ್ಥಿತರಿದ್ದರು.
ಗ್ರಾಮಸ್ಥರಿಂದ ತರಾಟೆ
ಪ್ರಕರಣದ ಬಗ್ಗೆ ತಿಳಿಯಲು ಬಂದಿದ್ದ ಸಚಿವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡರು.ಮನೆ ನಿರ್ಮಿಸಿದವರು ಅಕ್ರಮವಾಗಿಯೇ ವ್ಯವಹರಿಸಿದ್ದು ಸರಕಾರಿ ಜಮೀನು ಕಬಳಿಕೆಯ ವಿರುದ್ಧ ತಮ್ಮ ಹೋರಾಟ ನಡೆಯಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮುಧೋಳ: ಮದುವೆಯಾದ ಒಂದೇ ತಿಂಗಳಲ್ಲಿ ಪತ್ನಿ ಪರಾರಿ… ಮದುವೆ ಮಾಡಿಸಿದ ಬ್ರೋಕರ್ ಗಳೂ ನಾಪತ್ತೆ
Alcohol: ಬಿಯರ್ ದರ ಏರಿಕೆ ಚರ್ಚೆ ಹಂತದಲ್ಲಿದೆ: ಅಬಕಾರಿ ಸಚಿವ ತಿಮ್ಮಾಪುರ ಸ್ಪಷ್ಟನೆ
Mudhol: ಭೀಕರ ಅಪಘಾತ… ಕಾರು ಚಾಲಕ ಸ್ಥಳದಲ್ಲೇ ಮೃತ್ಯು
Bantwal: ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಪ್ರಯಾಣ ದರ ಏರಿಕೆ
Special Train ಮಕರ ಸಂಕ್ರಾಂತಿ: ಇಂದು ಬೆಂಗಳೂರಿನಿಂದ ಕರಾವಳಿಗೆ ವಿಶೇಷ ರೈಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.