ವಿದೇಶಿಯರಿಂದ ಭಾರತೀಯ ಸಂಸ್ಕೃತಿ ಅನುಕರಣೆ
ಲಯನ್ಸ್ "ಸ್ವಾತಿ ಮುತ್ತು' ಸಮ್ಮೇಳನ
Team Udayavani, Feb 23, 2020, 5:38 AM IST
ಉಡುಪಿ: ಮಹಿಳೆಯ ರಿಂದಾಗಿ ಭಾರತ ದೇಶದ ಸಂಸ್ಕೃತಿ ಗುರುತಿಸಲ್ಪಟ್ಟಿದೆ. ವಿದೇಶಿಯರು ಕೂಡ ಭಾರತೀಯ ಸಂಸ್ಕೃತಿಗೆ ಮಾರುಹೋಗಿ ಅದನ್ನು ಅನುಕರಣೆ ಮಾಡುತ್ತಿದ್ದಾರೆ. ಲಯನ್ಸ್‌ನಂತಹ ಸಮಾಜಮುಖೀ ಕಾರ್ಯಕ್ರಮಗಳಲ್ಲಿ ಅತೀ ಹೆಚ್ಚು ಸಂಖ್ಯೆಯಲ್ಲಿ ಮಹಿಳೆಯರು ತೊಡಗಿಸಿಕೊಳ್ಳಬೇಕು ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.
ಶನಿವಾರ ಅಮ್ಮಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಲಯನ್ಸ್ ಕ್ಲಬ್ ಜಿಲ್ಲೆ 317ಸಿಯ ಪ್ರಾಂತ್ಯ 4ರ ವತಿಯಿಂದ ನಡೆದ 2019-20 ಸಾಲಿನ “ಸ್ವಾತಿ ಮುತ್ತು’ ಪ್ರಾಂತೀಯ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಲಯನ್ಸ್ ಸಂಸ್ಥೆಯು ಸಮಾಜದಲ್ಲಿ ರುವ ಬಡವರನ್ನು ಗುರುತಿಸಿ ಅವ ರನ್ನು ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಸಮಾಜಮುಖೀ ಚಟುವಟಿಕೆಗಳು ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ನಡೆಯಬೇಕು. ಮಹಿಳೆಯರರಕ್ಷಣೆಗೆ ಹಲವಾರು ರೀತಿಯ ಕಾನೂನು ಗಳಿದ್ದು, ಸದುಪಯೋಗಪಡಿಸಿಕೊಳ್ಳ ಬೇಕು ಎಂದರು.
ಲಯನ್ಸ್ ಜಿಲ್ಲಾ 317ಸಿಯ 4ನೆಯ ಪ್ರಾಂತ್ಯದ ಅಧ್ಯಕ್ಷೆ ವಿದ್ಯಾಲತಾ ಯು. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂತ್ಯದ ಪ್ರಥಮ ವ್ಯಕ್ತಿ ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದರು.
ಹೊಲಿಗೆ ಯಂತ್ರ ವಿತರಣೆ, ಸೋಲಾರ್ ವಾಟರ್ ಪ್ಯೂರಿಫಯರ್, ನಗದು ಸಹಾಯ ಸೇರಿದಂತೆ 1 ಲಕ್ಷ ಮೇಲ್ಪಟ್ಟ ಸೇವಾಕಾರ್ಯಗಳು ನಡೆದವು. 700ಕ್ಕೂ ಹೆಚ್ಚು ಲಯನ್ಸ್ ಸದಸ್ಯರು ಭಾಗವಹಿಸಿದ್ದರು.
ಉದ್ಯಮಿ ಪುರುಷೋತ್ತಮ ಶೆಟ್ಟಿ, ಅಮ್ಮಣಿ ರಾಮಣ್ಣ ಶೆಟ್ಟಿ ಹಾಲ್‌ನ ಅಧ್ಯಕ್ಷ ಜಯರಾಜ್ ಹೆಗ್ಡೆ, ಲಯನ್ಸ್ ಜಿಲ್ಲೆ 317 ಸಿಯ ಪ್ರಥಮ ಉಪಗವರ್ನರ್ ಎನ್.ಎಂ. ಹೆಗ್ಡೆ, ಎರಡನೆಯ ಉಪಗವರ್ನರ್ ವಿಶ್ವನಾಥ್ ಶೆಟ್ಟಿ, ಪ್ರಾಂತ್ಯದ ಕಾರ್ಯದರ್ಶಿ ಶೇಖರ್ ಶೆಟ್ಟಿ ಕೆ., ಸಮ್ಮೇಳನ ಸಮಿತಿ ಕಾರ್ಯದರ್ಶಿ ಉಮೇಶ್ ನಾಯಕ್, ಆತಿಥೇಯ ಕ್ಲಬ್‌ನ ಅಧ್ಯಕ್ಷ ಪ್ರಕಾಶ್ ಚಂದ್ರ, ಖಜಾಂಚಿ ನಂದಕಿಶೋರ್, ವಲಯ ಅಧ್ಯಕ್ಷರಾದ 1ರ ಶೇಖರ್ ಬಿ.ಪೂಜಾರಿ, 2ರ ಶೇಖರ್ ಅಂಚನ್, 3ರ ಗಣೇಶ್ ಎನ್.ಸುವರ್ಣ, ಜಿಲ್ಲೆಯ ಅಧ್ಯಕ್ಷ ಪ್ರಕಾಶ್ ಚಂದ್ರ, ಕಾರ್ಯದರ್ಶಿ ಅನುಪಮಾ ಜಯ ಕುಮಾರ್, ಖಜಾಂಚಿ ಕುಸುಮಾ ವಿಶ್ವನಾಥ್, ರೀಜನ್ ಜಿಎಂಟಿ ಕೋ-ಆರ್ಡಿನೇಟರ್ ನಂದಕಿಶೋರ್ ಭಾಗವಹಿಸಿದ್ದರು.
ಸಮ್ಮೇಳನದ ಅಧ್ಯಕ್ಷ ಸತೀಶ್ ಶೆಟ್ಟಿ ಸ್ವಾಗತಿಸಿದರು. ವೀಣಾ ಬಾಯರಿ ಹಾಗೂ ಪ್ರತಾಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ
Mangaluru Development: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ಗೆ ಕ್ಯಾ| ಚೌಟ ಮನವಿ
Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ
Indian Constitution Day: ಅಭಿವೃದ್ಧಿಗೆ ಸಂವಿಧಾನವೇ ಅಡಿಪಾಯ: ಶಾಸಕ ಕಾಮತ್
Dharmasthala: ಭಕ್ತರ ಭಕ್ತಿಯ ಪ್ರೀತಿಗೆ ಶರಣಾಗಿರುವೆ: ಡಾ| ಹೆಗ್ಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.