ಮಾಹಿತಿ ಕೊರತೆ: ಋಣ ಮುಕ್ತಿಗೆ ಅರ್ಜಿದಾರರ ಸಾಲು
ಹೈಕೋರ್ಟ್ ತಡೆಯಿಂದಾಗಿ ಅನುಷ್ಠಾನ ವಿಳಂಬ
Team Udayavani, Oct 22, 2019, 4:07 AM IST
ಋಣಮುಕ್ತ ಯೋಜನೆಗೆ ಅರ್ಜಿ ಸಲ್ಲಿಸಲು ಆದಾಯ ಪ್ರಮಾಣ ಪತ್ರ ಪಡೆಯಲು ಕೋಟದ ಜನಸ್ನೇಹಿ ಕೇಂದ್ರದಲ್ಲಿ ಸರತಿಯ ಸಾಲು.
ಕುಂದಾಪುರ/ಕೋಟ: ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ ಸಮ್ಮಿಶ್ರ ಸರಕಾರದ ಕೊನೆಯ ದಿನಗಳಲ್ಲಿ ಜಾರಿಗೆ ತಂದ ಋಣಮುಕ್ತ ಕಾಯ್ದೆಯ ಫಲಾನುಭವಿಗಳಾಗಲು ಪ್ರತಿದಿನ ನೂರಾರು ಮಂದಿ ವಿವಿಧೆಡೆ ಅರ್ಜಿ ಸಲ್ಲಿಸಲು ಕಾಯುತ್ತಿದ್ದಾರೆ. ಮಾಹಿತಿಯ ಕೊರತೆಯಿಂದಾಗಿ ತಾವು ಮಾಡಿದ ಕೈಸಾಲ, ಬೆಳೆಸಾಲ, ಚಿನ್ನಾಭರಣ ಸಾಲಗಳೆಲ್ಲ ಮನ್ನಾ ಆದೀತೆಂಬ ನಿರೀಕ್ಷೆಯಿಂದ ಬರುತ್ತಿರುವವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಈ ಕಾಯ್ದೆಯ ಫಲಾನುಭವಿಗಳು ಯಾರು ಎಂಬುದು ಬಹುತೇಕ ಸಾಲಗಾರರಿಗೆ ತಿಳಿದಿಲ್ಲ. ಈ ನಡುವೆ ಮಧ್ಯವರ್ತಿಗಳು ಅಮಾಯಕರನ್ನು ಸಾಲಮರು ಪಾವತಿಸದಂತೆ ಮಾಡಿಕೊಡುತ್ತೇವೆ ಎಂದು ವಂಚಿಸಿ ಹಣ ಪಡೆಯುತ್ತಿರುವ ಆರೋಪಗಳ ಕೇಳಿಬರುತ್ತಿವೆ. ಜತೆಗೆ ಹೈಕೋರ್ಟ್ ಈ ಕಾಯ್ದೆ ಅನುಷ್ಠಾನಕ್ಕೆ ತಾತ್ಕಾಲಿಕ ತಡೆ ನೀಡಿದ್ದು ಒಟ್ಟು ವ್ಯವಸ್ಥೆಯೇ ಗೋಜಲಾಗಿದೆ.
ಯಾರೆಲ್ಲ ಅರ್ಹರು?
ಖಾಸಗಿ ಲೇವಾದೇವಿಗಾರರು ಮತ್ತು ಸಂಸ್ಥೆಗಳಿಂದ ಪಡೆದ ಕೈಸಾಲ ಮನ್ನಾ ಮಾಡುವ ಕಾಯ್ದೆ ಇದಾಗಿದೆ. ಭೂಮಿ ಇಲ್ಲದ, 5 ಎಕರೆಗಿಂತ ಕಡಿಮೆ ಭೂಮಿ ಹೊಂದಿರುವ ಬಡರೈತರಿಗೆ ಅಥವಾ ವಾರ್ಷಿಕ 1.20 ಲಕ್ಷ ರೂ.ಗಿಃತ ಕಡಿಮೆ ಆದಾಯ ಇರುವವರಿಗೆ ಮಾತ್ರ ಇದು ಅನ್ವಯ. ರಿಸರ್ವ್ ಬ್ಯಾಂಕ್ ಅಧೀನದಲ್ಲಿ ಕಾರ್ಯನಿರ್ವಹಿಸುವ ಬ್ಯಾಂಕ್‌ಗಳು ಮತ್ತು ಸಹಕಾರಿ ಅಧಿನಿಯಮದಡಿ ನೋಂದಣಿಯಾಗಿರುವ ಸಹಕಾರಿ ಸಂಘಗಳು, ನೋಂದಾಯಿತ ಫೈನಾನ್ಸ್‌ಗಳು ಈ ಯೋಜನೆಗೆ ಒಳಪಡುವುದಿಲ್ಲ.
ಗೊಂದಲಗಳಿಗೆ ಕಾರಣವೇನು ?
ನೋಡಲ್ ಅಧಿಕಾರಿ ಅರ್ಜಿ ಸ್ವೀಕರಿಸಲು ವಿಳಂಬಿಸಿದರೆ ಅಥವಾ ಅರ್ಹರಿಗೆ ನಿರಾಕರಿಸಿದರೆ ಶಿಕ್ಷಿಸುವ ಅವಕಾಶ ಈ ಕಾಯ್ದೆಯಲ್ಲಿದೆ. ಹಾಗಾಗಿ ಯಾರೇ ಅರ್ಜಿ ಸಲ್ಲಿಸಿದರೂ ಸ್ವೀಕರಿಸಲಾಗುತ್ತದೆ. ಸ್ವೀಕರಿಸಿದ ಮಾತ್ರಕ್ಕೇ ತಮ್ಮೆಲ್ಲ ಸಾಲ ಮನ್ನಾ ಆಗುತ್ತದೆಂದು ಭಾವಿಸಿ ಸಾಲಗಾರರು ಅರ್ಜಿ ಸಲ್ಲಿಸಲು ಮುಗಿಬೀಳುತ್ತಿದ್ದಾರೆ. ಪರಿಶೀಲನೆ ಹಂತದಲ್ಲಿ ಎಲ್ಲವನ್ನು ದೃಢಪಡಿಸಿ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸೂಕ್ತ ಪ್ರಮಾಣಪತ್ರಗಳನ್ನು ಪಡೆಯಲು ಜನರು ಗ್ರಾಮಲೆಕ್ಕಾಧಿಕಾರಿ ಕಚೇರಿ, ಆಟಲ್ ಜೀ ಜನಸ್ನೇಹಿ ಕೇಂದ್ರ ಕಚೇರಿಗಳಲ್ಲಿ ಮುಗಿಬೀಳುತ್ತಿದ್ದಾರೆ.
ಏನಿದು ಋಣ ಮುಕ್ತ ಕಾಯ್ದೆ?
ಉಪವಿಭಾಗಾಧಿಕಾರಿ ಈ ಕಾಯ್ದೆಯ ನೋಡಲ್ ಅಧಿಕಾರಿಯಾಗಿರುತ್ತಾರೆ. ಸಾಲಗಾರ 90 ದಿನಗಳ ಒಳಗೆ ದಾಖಲೆ ಸಮೇತ ಮಾಹಿತಿ ನೀಡಬೇಕು. ಪರಿಶೀಲನೆ ಬಳಿಕ ಅಡವಿಟ್ಟ ವಸ್ತು ಬಿಡುಗಡೆಗೆ ಆದೇಶ ನೀಡಲಾಗುತ್ತದೆ. ಸಾಲ ನೀಡಿದವರಿಗೆ ಸರಕಾರ ಪ್ರತಿಫಲ ಹಣ ನೀಡುವುದಿಲ್ಲ.
ಮಾಹಿತಿ ಕೊರತೆಯಿಂದಾಗಿ ಮುಗ್ಧ ರೈತರು ಹಾಗೂ ಜನಸಾಮಾನ್ಯರು ಅರ್ಜಿ ಹೆಸರಿನಲ್ಲಿ ಹಣ ಹಾಗೂ ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು.
– ಕೆ. ವಿಕಾಸ್ ಹೆಗ್ಡೆ,
ಉಡುಪಿ ಜಿಲ್ಲಾ ರೈತ ಸಂಘದ ವಕ್ತಾರ
ಅರ್ಜಿ ಸ್ವೀಕಾರಕ್ಕೆ
ಅ. 22ರ ವರೆಗೆ ಗಡುವು ಇದೆ. ಕಾಯ್ದೆ ಅನುಷ್ಠಾನಕ್ಕೆ ಹೈಕೋರ್ಟ್‌ನಿಂದ ತಾತ್ಕಾಲಿಕ ತಡೆ ಇರುವ ಕಾರಣ ಈವರೆಗೆ ಯಾವುದೇ ಸಾಲ ಮನ್ನಾ ಆಗಿಲ್ಲ. ಅರ್ಜಿಗಳನ್ನು ಪರಿಶೀಲಿಸಿ ಅರ್ಹತೆಯ ಆಧಾರದ ಮೇಲೆ ನ್ಯಾಯಾಲಯದ ಸೂಚನೆಯಂತೆ ಮುಂದುವರಿಯಲಾಗುವುದು.
– ಕೆ. ರಾಜು
ಸಹಾಯಕ ಕಮಿಷನರ್, ಕುಂದಾಪುರ
ಸಹಕಾರ ಸಂಸ್ಥೆಗಳಿಗೆ ಸಂಬಂಧಿಸಿದ ಸಾಕಷ್ಟು ಅರ್ಜಿಗಳು ಸಲ್ಲಿಕೆಯಾಗುತ್ತಿವೆ. ಎಲ್ಲರ ಅರ್ಜಿಗಳನ್ನೂ ಸ್ವೀಕರಿಸುತ್ತೇವೆ. ಪರಿಶೀಲಿಸಿ ನೋಂದಾಯಿತವಲ್ಲದ ಸಂಸ್ಥೆಗಳಲ್ಲಿ ಸಾಲ ಮಾಡಿದವರನ್ನು ಆಯ್ಕೆ ಮಾಡುತ್ತೇವೆ.
– ರವಿಚಂದ್ರ ನಾಯಕ್,
ಉಪವಿಭಾಗಧಿಕಾರಿ ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Kundapura: ಟವರ್‌ನ ಬುಡದಲ್ಲೇ ನೆಟ್‌ವರ್ಕ್ ಇಲ್ಲ!
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
ಭಾರತ ಮಾತೆಗೆ ಕಿರೀಟ ತೊಡಿಸಿದ ಸರಕಾರ:’ವಿಶ್ವಾರ್ಪಣಮ್’ನಲ್ಲಿ ಪಲಿಮಾರು ಶ್ರೀ ಅಭಿಮತ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.