ವೈಜ್ಞಾನಿಕ ರೀತಿಯಲ್ಲಿ ಮಳೆಕೊಯ್ಲು ಅನುಷ್ಠಾನ
ಜಲ ಸಂಪನ್ಮೂಲ: ಮನೆ ಮನೆಗೆ ಮಳೆಕೊಯ್ಲು ಉದಯವಾಣಿ ಅಭಿಯಾನ
Team Udayavani, Aug 13, 2019, 5:32 AM IST
ಇಂಗುಗುಂಡಿ ರಚನೆ.
ಉಡುಪಿ: “ಉದಯವಾಣಿ’ ಮಳೆಕೊಯ್ಲು ಅಭಿಯಾನಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ. ಮಳೆಕೊಯ್ಲಿನಲ್ಲಿರುವ ವಿವಿಧ ರೀತಿಗಳನ್ನು ಜನರು ಅನುಷ್ಠಾನಗೊಳಿಸುತ್ತಿದ್ದಾರೆ. ಪರ್ಕಳ ವರ್ವಾಡಿ ಕೋರ್ಟ್ ಬಳಿಯ ನಿವಾಸಿ, ಮಣಿಪಾಲ ಸಂಸ್ಥೆಯೊಂದರ ಉದ್ಯೋಗಿಯಾದ ಡಾ| ಶಿವಾನಂದ ವಾಗ್ಲೆ ಎಂಬವರು 2017ರಲ್ಲೇ ವೈಜ್ಞಾನಿಕ ರೀತಿಯಲ್ಲಿ ಮಳೆಕೊಯ್ಲು ವಿಧಾನವನ್ನು ಅನುಷ್ಠಾನಗೊಳಿಸುವ ಮೂಲಕ ಮಾದರಿ ಎನಿಸಿದ್ದಾರೆ.
ತಾವು ಮಾಡಿದಷ್ಟೇ ಅಲ್ಲದೆ ಮನೆಯ ಪಕ್ಕದಲ್ಲಿ ಪಾಳು ಬಿದ್ದಿರುವ ಸರಕಾರಿ ಬೋರ್ವೆಲೊಂದಕ್ಕೂ ನಗರಸಭೆಯ ಅನುಮತಿ ಪಡೆದು ಮಳೆಕೊಯ್ಲು ಅಳವಡಿಸಿಕೊಂಡಿದ್ದಾರೆ. ಮನೆಯ ಛಾವಣೆಯ ಮೇಲೆ ಬೀಳುವ ಮಳೆನೀರನ್ನು ಪೈಪ್‌ಗ್ಳ ಸಹಾಯದಿಂದ ಫಿಲ್ಟರ್ ಮಾಡಿ ನೆಲದಡಿ ಮೂಲಕ ಇಂಗುಗು ಂಡಿಗೆ ಹರಿಯಬಿ ಟ್ಟಿದ್ದಾರೆ. ಇದಕ್ಕಾಗಿ 10 ಅಡಿ ಆಳ, 6 ಅಡಿ ಅಗಲದ ಬಾವಿ ರೀತಿ ಮಾಡಿ ಅದಕ್ಕೆ ರಿಂಗ್ ಅಳವಡಿಸಲಾಗಿದೆ. ಇದಕ್ಕೆ ಅರ್ಧದಷ್ಟು ಪ್ರಮಾಣದಲ್ಲಿ ಜಲ್ಲಿಕಲ್ಲುಗಳನ್ನು ತುಂಬಲಾಗಿದೆ. ಮೇಲಿನಿಂದ ಬರುವ ಪೈಪ್ ನೀರು ನೇರವಾಗಿ ಈ ಇಂಗುಗುಂಡಿಗಳಿಗೆ ಸೇರುತ್ತದೆ.
ಸರಕಾರಿ ಬಾವಿಗೂ ಅಳವಡಿಕೆ
ಬಾವಿಗೆ ಇಂಗುಗುಂಡಿ ಮಾಡಲಾಗಿದ್ದು, ಓವರ್‌ಫ್ಲೋ ಆದರೆ ಸಮೀಪದಲ್ಲಿ ಪಾಳು ಬಿದ್ದಿರುವ ಸರಕಾರಿ ಬೋರ್ವೆಲ್‌ಗೆ ನೀರಿನ ಕನೆಕ್ಷನ್ ಕೊಡಲಾಗಿದೆ. ಇದಕ್ಕಾಗಿ ನಗರಪಾಲಿಕೆಯ ಅನುಮತಿಯನ್ನು ಪಡೆದುಕೊಂಡಿದ್ದೇವೆ ಎನ್ನುತ್ತಾರೆ ಅವರು. ಈ ಹಿಂದೆ 3ರಿಂದ 4 ಅಡಿಗಳಷ್ಟು ನೀರು ನಿಲ್ಲುತ್ತಿತ್ತು. ಮಳೆಕೊಯ್ಲು ಅನುಷ್ಠಾನವಾದ ಬಳಿಕ ಸುಮಾರು 8 ಅಡಿಗಳಷ್ಟು ನೀರು ನಿಲ್ಲುತ್ತಿದೆ.
ಎಲ್ಲವೂ ವೈಜ್ಞಾನಿಕ ರೀತಿಯಲ್ಲಿ ಮಾಡಿದ ಕಾರಣ ಸುಮಾರು 60ರಿಂದ 65 ಸಾವಿರ ರೂ.ನಷ್ಟು ಖರ್ಚು ಉಂಟಾಗಿದೆ ಎನ್ನುತ್ತಾರೆ ಅವರು.
ಕಂಪೆನಿಯಿಂದ ಪ್ರೇರಣೆ
ಡಾ| ಶಿವಾನಂದ ವಾಗ್ಲೆ ಅವರು ಈ ಹಿಂದೆ ಮಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲಿ ಮಾಡಿರುವ ಮಳೆಕೊಯ್ಲು ವಿಧಾನದಿಂದ ಪ್ರೇರಣೆಗೊಂಡು, ತಮ್ಮ ಮನೆಯಲ್ಲೂ ಅನುಷ್ಠಾನಗೊಳಿಸುವ ನಿರ್ಧಾರಕ್ಕೆ ಬಂದರು. ಇವರ ಈ ಕೆಲಸದಿಂದ ಸಮೀಪದ ಮನೆಗಳಲ್ಲೂ ನೀರಿನ ಒರತೆ ಅಧಿಕವಾಗಿದೆ. ಇದೀಗ ಸಮೀಪದ ಮನೆಯವರೂ ತಮ್ಮ ಮನೆಯ ಛಾವಣೆ ನೀರನ್ನು ಪೈಪ್‌ಗ್ಳ ಸಹಾಯದಿಂದ ನೇರವಾಗಿ ಸರಕಾರಿ ಬೋರ್ವೆಲ್‌ಗೆ ಬಿಡುವ ಕೆಲಸ ಮಾಡುತ್ತಿದ್ದಾರೆ. ಅಕ್ಕಪಕ್ಕದಲ್ಲೂ ನೀರಿನ ಒರತೆ ಅಧಿಕವಾಗಿದೆ.
ಸರಕಾರಿ ಬೋರ್ವೆಲ್‌ಗೆ ಮರುಜೀವ
ಮಳೆಕೊಯ್ಲನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಲಾಗಿದೆ. ಇದರಿಂದ ನೀರಿನ ಪ್ರಮಾಣವೂ ಅಧಿಕವಾಗಿದೆ. ನಗರಸಭೆಯ ಅನುಮತಿ ಪಡೆದು ಪಾಳುಬಿದ್ದ ಸರಕಾರಿ ಬೋರ್ವೆಲ್‌ಗೂ ಮಳೆಕೊಯ್ಲು ಮಾಡುವ ಮೂಲಕ ಮರುಜೀವ ನೀಡುವ ಕೆಲಸ ಮಾಡಲಾಗಿದೆ.
–ಡಾ| ಶಿವಾನಂದ ವಾಗ್ಲೆ
ನೀವೂ ಅಳವಡಿಸಿ, ವಾಟ್ಸಪ್ ಮಾಡಿ
ಉದಯವಾಣಿಯ ಅಭಿಯಾನದಿಂದ ಪ್ರೇರಣೆಗೊಂಡು ಕಾರ್ಯಾಗಾರದಲ್ಲಿ ಭಾಗವಹಿಸಿದವರು ಮಳೆ ನೀರು ಕೊಯ್ಲು ಪದ್ಧತಿಯನ್ನು ತಮ್ಮ ಮನೆಗಳಲ್ಲಿ ಅಳವಡಿಸುತ್ತಿರುವುದು ಗಮನಕ್ಕೆ ಬಂದಿದೆ. ಇನ್ನಷ್ಟು ಮಂದಿಯನ್ನು ಜಲ ಸಂರಕ್ಷಣೆ ಯತ್ತ ತೊಡಗಿಸಲು, ನಿಮ್ಮ ಮನೆಯಲ್ಲಿ ಕೈಗೊಂಡ ಮಳೆ ಕೊಯ್ಲು ವ್ಯವಸ್ಥೆಯ ಕುರಿತು ವಿವರಿಸಿ, ಫೋಟೋ ವಾಟ್ಸಪ್‌ನಲ್ಲಿ ಕಳುಹಿಸಿ. ಅವುಗಳನ್ನು ಪ್ರಕಟಿಸಿ ಮತ್ತಷ್ಟು ಜನರನ್ನು ಉತ್ತೇಜಿಸೋಣ.
7618774529
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year 2025:ಹಳೆ ವ್ಯಕ್ತಿಗೆ ಹೊಸ ವರ್ಷ….ಹಳೆ ವರ್ಷದಲ್ಲಿ ಕಲಿತ ಎಲ್ಲಾ ಅನುಭವ ಪಾಠವಾಗಲಿ
Bantwal: ಸಾಮಾನ್ಯ ಸೈಕಲನ್ನೇ ಎಲೆಕ್ಟ್ರಿಕ್ ಆಗಿ ಪರಿವರ್ತಿಸಿದ ಬಾಲಕ!
ಹತ್ತಾರು ಸಿನಿಮಾ.. ನೂರಕ್ಕೆ ನೂರು ನಿರೀಕ್ಷೆ.. ಈ ವರ್ಷದ ಬಹು ನಿರೀಕ್ಷಿತ ಕನ್ನಡ ಚಿತ್ರಗಳಿವು
Analysis:ರಂಗೇರಿದ ದೆಹಲಿ ಚುನಾವಣ ಅಖಾಡ-ಭ್ರಷ್ಟಾಚಾರ ವಿಷಯ ಗೌಣ..ಹಿಂದುತ್ವ ಪ್ರಧಾನ
Ullala: ಲಾರಿ ಅಪಘಾತ; ಡೆಲಿವರಿ ಬಾಯ್ ದಾರುಣ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.