ಪುರಸಭೆಯಲ್ಲಿ ಈಗ ಅಧಿಕಾರಿಗಳದ್ದೇ ಆಡಳಿತ
Team Udayavani, Jan 25, 2019, 12:50 AM IST
ಕುಂದಾಪುರ: ಚುನಾವಣೆಯಲ್ಲಿ ಗೆದ್ದು ತಿಂಗಳು ಐದಾಗುತ್ತಾ ಬಂದರೂ ಇನ್ನೂ ಅಧಿಕಾರ ದೊರೆಯಲಿಲ್ಲ. ಆದ್ದರಿಂದ ಇಲ್ಲಿನ ಪುರಸಭೆಯಲ್ಲಿ ಇನ್ನೂ ಪ್ರಜಾಪ್ರತಿನಿಧಿ ಆಡಳಿತ ಜಾರಿಗೆ ಬಂದಿಲ್ಲ. ಅಧಿಕಾರಿಗಳದ್ದೇ ಕಾರುಬಾರು.
ನ್ಯಾಯಾಲಯದ ವಿಚಾರಣೆಗಳೆಲ್ಲ ಮುಗಿದು ಆದೇಶ ಹೊರಬಿದ್ದರೂ ಪುರಸಭೆಗೆ ಇನ್ನೂ ಅಧ್ಯಕ್ಷ, ಉಪಾಧ್ಯಕ್ಷ ಭಾಗ್ಯ ದೊರೆಯದ ಕಾರಣ ಜನ ಜನಪ್ರತಿನಿಧಿಗಳನ್ನು ಪ್ರಶ್ನಿಸತೊಡಗಿದ್ದಾರೆ. ಅವರು ಅಧಿಕಾರಿಗಳ ಕಡೆ ಬೆರಳು ತೋರಿಸುತ್ತಿದ್ದಾರೆ. ಚುನಾವಣೆ ನಡೆದು 4 ತಿಂಗಳು ಕಳೆದರೂ ಮೀಸಲಾತಿ ತಕರಾರಿನಿಂದ ಅಧಿಕಾರ ಹಂಚಿಕೆ ವಿಳಂಬವಾಗಿದೆ.
ಕೋರ್ಟಿನಲ್ಲಿ
ರಾಜ್ಯ ಉಚ್ಚ ನ್ಯಾಯಾಲಯ ಹಾಗೂ ಹೈಕೋರ್ಟ್ ಸಂಚಾರಿ ಪೀಠದಲ್ಲಿ ಸರಕಾರ ಮಾಡಿದ ಮೀಸಲಾತಿ ಪಟ್ಟಿ ಪ್ರಶ್ನಿಸಲ್ಪಟ್ಟಿತ್ತು. ಫಲಿತಾಂಶ ಪ್ರಕಟನೆ ದಿನ ಒಂದು ಮೀಸಲಾತಿ ಪ್ರಕಟಿಸಿದ ಸರಕಾರ ಅನಂತರ ಮೂರು ದಿನ ಬಿಟ್ಟು ಕೆಲವು ಮೀಸಲಾತಿಗಳನ್ನು ಬದಲಿಸಲಿತು. ಹಾಗೆ ಬದಲಿಸಿದ ಪುರಸಭೆಗಳ ಪೈಕಿ ಕುಂದಾಪುರವೂ ಒಂದು.
ಮೀಸಲು ಬದಲು
ಸೆ.3ರಂದು ಎಲ್ಲ 226 ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ನಿಗದಿಪಡಿಸಿ ಆದೇಶ ಹೊರಡಿಸಿತ್ತು. ಕುಂದಾಪುರ ಪುರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಬಂದಿತ್ತು. ಉಪಾಧ್ಯಕ್ಷ ಸ್ಥಾನ ಪರಿಶಿಷr ಜಾತಿಗೆ ಬಂದಿತ್ತು. ಮೊದಲ ಮೀಸಲಾತಿಯಂತೆ ಬಿಜೆಪಿಯಲ್ಲಿ ಅರ್ಹರು ಇದ್ದರೆ ಅನಂತರ ಬದಲಾವಣೆ ಗೊಂಡು ಹೊಸ ಮೀಸಲಾತಿ ಸೆ. 6ರಂದು ಪ್ರಕಟ ಗೊಂಡಿತು.
ಅದರಂತೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬಿ ಮಹಿಳೆಗೆ ಅಧ್ಯಕ್ಷ ಸ್ಥಾನ ನಿಗದಿಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದ್ದು ಇದರಿಂದ 23 ಕ್ಷೇತ್ರಗಳ ಪೈಕಿ 8 ಸ್ಥಾನ ಪಡೆದಿರುವ ಕಾಂಗ್ರೆಸ್‌ಗೆ ಖುಷಿ ಪಟ್ಟಿತ್ತು. 14 ಸ್ಥಾನಗಳನ್ನು ಗೆದ್ದು ಬಹುಮತ ಪಡೆದಿರುವ ಬಿಜೆಪಿಗೆ ಹೊಸ ಮೀಸಲಾತಿಯಿಂದ ಉಂಟಾಗಿದ್ದು ಬಿಜೆಪಿಯ 14 ಸದಸ್ಯರಲ್ಲಿ ಹಿಂದುಳಿದ ವರ್ಗ “ಬಿ’ ಮಹಿಳೆ ಇಲ್ಲ. ಹಾಗಾಗಿ ಬಿಜೆಪಿ ಆಕ್ರೋಶ ವ್ಯಕ್ತವಾಗಿತ್ತು. ಬಿಜೆಪಿ ಕಾನೂನಿನ ಮೊರೆ ಹೋಗಿತ್ತು. ಕಳೆದ ಅ. 9ರಂದು ನ್ಯಾಯಾಲಯ ಮೊದಲ ಮೀಸಲಾತಿಯನ್ನು ಎತ್ತಿ ಹಿಡಿದಿತ್ತು. ಇದರಿಂದ ಬಿಜೆಪಿ ಸಂಭ್ರಮ ಪಟ್ಟಿತ್ತು. ಆದರೆ ಕಾಂಗ್ರೆಸ್ ತನ್ನ ಪಟ್ಟು ಸಡಿಲಿಸದೇ ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಇದರಿಂದ ಮೀಸಲಾತಿ ಜಟಾಪಟಿ ಮತ್ತಷ್ಟು ಜಟಿಲವಾಗಿತ್ತು.
ಸಲಹಾ ಸಭೆ
ಈ ಹಿಂದಿನ ಸಹಾಯಕ ಕಮಿಷನರ್ ಟಿ. ಭೂಬಾಲನ್ ಅವರ ಸಲಹೆಯಂತೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಅವರು ಆಯ್ಕೆಯಾದ ಸದಸ್ಯರ ಸಭೆ ನಡೆಸಿ ಅವರ ವಾರ್ಡ್‌ಗಳಲ್ಲಿ ಆಗಬೇಕಾದ ಕೆಲಸಗಳ ಕುರಿತು ಸೌಹಾರ್ದ ಸಭೆ ನಡೆಸಿದ್ದಾರೆ. ಆದರೆ ಪೂರ್ಣಪ್ರಮಾಣದ ಆಡಳಿತ ಮಂಡಳಿ ಅನುಷ್ಠಾನವಾಗದೇ ಸರಕಾರದ ಅನುದಾನ ಕೂಡ ಬಾರದ ಕಾರಣ ಅಧಿಕಾರಿಗಳು ತುರ್ತು ಕಾಮಗಾರಿ ಮಾತ್ರ ಕೈಗೊಳ್ಳಲು ಸಾಧ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.